Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿಜಯಪುರದ ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಗುರುದೇವಿ ಹಳ್ಳೂರ (ನಂದಿನಿ ಮ. ಬಿರಾದಾರ) ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.ಇವರು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಶಿಕ್ಷಣ ಶಾಸ್ತ್ರವಿಷಯದಲ್ಲಿ “ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿಂಗ್ ಸ್ಟೈಲ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ನ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.ಇವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಮೌಲ್ಯಮಾಪನ ಕುಲ ಸಚಿವರಾದ ಹಾಗೂ ಶಿಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಎಲ್. ಲಕ್ಕಣ್ಣನವರು ಮಾರ್ಗದರ್ಶನ ಮಾಡಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂದಿ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡ ಹೊಸ ನಿಯಮವನ್ನು ದೇಶದ ಏಕತೆ ಹಾಗೂ ದೇಶೀಯ ಭಾಷೆಗಳ ಹಿತರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಸರ್ವಜ್ಞ ಕರಿಯರ್ ಅಕಾಡೆಮೆ ಸಂಸ್ಥಾಪಕ ಅಧ್ಯಕ್ಷ ನಾಗೇಶ ಹೆಗಡ್ಯಾಳ ಒತ್ತಾಯಿಸಿದರು.ಶನಿವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ೨೦೨೬ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು, ಗ್ರೇಡ್ ಎ, ಬಿ, ಸಿ, ಡಿ ಎಂದು ನಮೂದಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಿಂದಿ ಭಾಷೆಯ ಶಿಕ್ಷಕರ ಭವಿಷ್ಯದ ದೃಷ್ಟಿಯಿಂದ ಹಾಗೂ ಮಕ್ಕಳ ಸರ್ವಾಂಗಿಣ ವಿಕಸನದ ದೃಷ್ಟಿಯಿಂದ ಸರ್ಕಾರವು ಈ ನಿರ್ಧಾರವನ್ನು ಕೈಬಿಡಬೇಕು ಎಂದರು.ನಮ್ಮ ರಾಜ್ಯದ ಮಕ್ಕಳು ಮುಂದೆ ಐಎಎಸ್, ಐಪಿಎಲ್, ಐಎಫ್‌ಎಸ್ ನಂತಹ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದ ನಂತರ ದೇಶದ ಯಾವುದೇ ಭಾಗದಲ್ಲಿ ಸೇವಿ ಸಲ್ಲಿಸಲು ಹೋದಾಗ ಹಿಂದಿ ಓದಲು, ಬರೆಯಲು, ಮಾತನಾಡಲು ಅಡಚಣೆಯಾಗುತ್ತದೆ ಆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ಬೀಸಿದ ಭಾರಿ ಬಿರುಗಾಳಿ ಹಾಗೂ ಮಳೆಗೆ ಬೆಳೆಗಳು ನೆಲಕ್ಕೋರಗಿ ರೈತರು ಹಾನಿಗೀಡಾಗಿದ್ದಾರೆ.ಶುಕ್ರವಾರ ರಾತ್ರಿ ಆರಂಭಗೊಂಡ ಮಳೆ ಹಾಗೂ ಬಿರುಗಾಳಿಗೆ ಮುಳಸಾವಳಗಿ ಗ್ರಾಮದ ಶಿವಪುತ್ರ ಬಂದ್ರೋಡ ಎಂಬುವವರ ೨ ಎಕರೆಯಲ್ಲಿನ ಜೋಳದ ಬೆಳೆ, ರಾಜಕುಮಾರ ಬಂದ್ರೋಡ ಎಂಬುವವರ ಎರಡು ಎಕರೆ ಮೆಕ್ಕೆಜೋಳ, ಸಾಹೇಬಗೌಡ ಹಿರ್ ಇವರ ಎರಡು ಎಕರೆ ಮೆಕ್ಕೆಜೋಳ ಮತ್ತು ಒಂದು ಎಕರೆ ಗೋಧಿ, ಲಗ್ಮವ್ವ ಬಂದ್ರೋಡ ಎಂಬುವವರ ೧ ಎಕರೆ ಮೆಕ್ಕೆಜೋಳ ನೆಲಕ್ಕೆ ಬಿದ್ದು ಹಾಳಾಗಿದೆ. ಇನ್ನೂ ಪಟ್ಟಣದ ಇಂಡಿ ರಸ್ತೆಯಲ್ಲಿನ ೧೦೦೮ ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂಭಾಗದ ಗ್ಲಾಸ್‌ಗಳು ಒಡೆದಿದ್ದು ಸಾಕಷ್ಟು ಹಾನಿ ಸಂಭವಿಸಿದೆ.ರಾತ್ರಿ ಸುಮಾರು ಒಂದು ಗಂಟೆ ಕಾಲ ಸುರಿದ ಗುಡುಗು, ಮಿಂಚು ಸಹಿತ ಮಳೆಯಿಂದ ಯಾವುದೇ ಹೆಚ್ಚಿನ ಹಾನಿಯಾಗಿಲ್ಲವಾದರೂ, ರಭಸವಾಗಿ ಬೀಸಿದ ಗಾಳಿ ಮಾತ್ರ ರೈತ ಸಮುದಾಯಕ್ಕೆ ಸಾಕಷ್ಟು ಹಾನಿ ಮಾಡಿದೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿಪ್ರ ಸಮುದಾಯದ ಚಿದಂಬರ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿತು.ಪಟ್ಟಣದ ವಿಠ್ಠಲ ಮಂದಿರದ ಆವರಣದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನರೇಂದ್ರ ನಾಡಗೌಡ, ಉಪಾದ್ಯಕ್ಷರಾಗಿ ವೆಂಕಟೇಶ ಕುಲಕರ್ಣಿ ಹಾಗೂ ಕಾರ್ಯದರ್ಶಿಯಾಗಿ ಚಿದಂಬರ ಕುಲಕರ್ಣಿ(ಹಂಚಲಿ) ಅವಿರೋಧವಾಗಿ ಆಯ್ಕೆಯಾದರು. ಸಮಿತಿಯ ಉಳಿದ ಪದಾಧಿಕಾರಿಗಳನ್ನು ಹನುಮ ಜಯಂತಿ ದಿನದಂದು ಆಯ್ಕೆ ಮಾಡಲಾಗುವುದು ಎಂದು ಸಮಿತಿ ತಿಳಿಸಿತು.ಸೇವಾ ಸಮಿತಿ ಮಾಜಿಅಧ್ಯಕ್ಷ ಡಾ.ಆರ್.ಆರ್.ನಾಯಿಕ್, ಪಾಂಡುರಂಗ ದೇಶಪಾಂಡೆ, ಮಾಜಿಕಾರ್ಯದರ್ಶಿ ಗುರುರಾಜ ಕುಲಕರ್ಣಿ, ಶರತ್ ಕುಲಕರ್ಣಿ, ಡಿ.ಜಿ.ದೇಶಪಾಂಡೆ, ಪ್ರಮೋದ ನಾಡಗೌಡ, ಶ್ರೀಪಾದ ಜೋಷಿ, ಸುಧೀರ ಪಾಟೀಲ, ರಾಘವೇಂದ್ರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಪಿ.ಕೆ.ಕುಲಕರ್ಣಿ, ಆನಂದ ಕುಲಕರ್ಣಿ, ಶ್ರೀಧರ ನಾಡಗೌಡ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಪಂಚಾಯಿತಿಯಲ್ಲಿ ಸಂತೆ ಕರ ವಸೂಲಿಗಾಗಿ (ಲಿಲಾವು ಗಾಗಿ) ಸಭೆ ಜರುಗಿತು.ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರದಂದು ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ ಅವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಕಳೆದ ವರ್ಷದಿಂದ ನಡೆಯದ ಇರುವ ಲಿಲಾವಿನ ಕುರಿತು ಚರ್ಚಿಸಿ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಭಾಗವಹಿಸಿದ ಅಬ್ದುಲ್ ಜಬ್ಬರ್ ಚೌಧರಿ ಎಂಬುವವರಿಗೆ ವಾರ್ಷಿಕ ೯,೦೫೦೦೦( ೯ ಲಕ್ಷ ಐದು ಸಾವಿರ) ರೂ.ಗಳಂತೆ ಲಿಲಾವು ನೀಡಲಾಯಿತು.ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ, ಹುಸೇನ್ ಕೊಕಟನೂರ, ಸಿಬ್ಬಂದಿ ಮುತ್ತುರಾಜ ಹಿರೇಮಠ, ಸೋಮು ಭೋವಿ, ಎಸ್.ಎಸ್.ಪೂಜಾರಿ, ಬಿ.ಪಿ.ಹಜೇರಿ, ನಬಿರಸೂಲ್ ಮಣೂರ, ಅಬ್ದುಲ್ ಚೌಧರಿ, ಬಾಪುಸಾಬ್ ಯಲಗಾರ, ಖಾಜಾ ಬಂದೇನವಾಜ್ ಯಲಗಾರ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೈವಸ್ವರೂಪಿ ಸಂತ, ಫಕೀರ, ಅವತಾರ ಪುರುಷ ಮತ್ತು ಸದ್ಗುರು ಶ್ರೀ ಸಾಯಿಬಾಬಾ ಅವರು ಜನಹಿತ, ಸಮಾಜ ಕಲ್ಯಾಣಕ್ಕಾಗಿ ಅನೇಕ ಕಷ್ಟ-ಸಂಕಷ್ಟಗಳನ್ನು ಎದುರಿಸಿ, ತಮ್ಮ ಪವಾಡಗಳ ಮೂಲಕ ವಿಶ್ವದೆಲ್ಲೆಡೆ ಆರಾಧಿಸುವ ದೇವರಾದರು. ಅಧ್ಯಾತ್ಮಿಕ ಸಾಧಕರಾಗಿದ್ದ ಶ್ರೀ ಸಾಯಿಬಾಬಾ ಅವರು ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರುತ್ತಾ, ಭಕ್ತಿಯೋಗ, ಜ್ಞಾನ ಯೋಗ, ಕರ್ಮಯೋಗ ಮತ್ತು ಆತ್ಮ ಸಾಕ್ಷಾತ್ಕಾರಗಳ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಚಿಂತನೆ ನಡೆಸಿದ ಶ್ರೇಷ್ಠ ಸಂತರಾಗಿದ್ದರು ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಹೋಮ-ಹವನ, ಮಹಾಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಶ್ರದ್ಧಾ ಮತ್ತು ಸಬೂರಿ ಎಂಬ ಸಂದೇಶ ಸಾರಿದ ಶ್ರೀ ಸಾಯಿಬಾಬಾ ಇಂದು ವಿಶ್ವದೆಲ್ಲೆಡೆ ಭಕ್ತಿ-ಭಾವದಿಂದ ಪೂಜಿಸುವ ದೇವರಾಗಿದ್ದಾರೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ,…

Read More

ಪುನಶ್ಚೇತನ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಪ್ರಧಾನ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮದ್ಯಸ್ತಿಕೆದಾರರಿಗೆ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಹರೀಶ. ಎ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಇವರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲಾ ಮಧ್ಯಸ್ಥಿಕೆದಾರರಿಗೆ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ಮಧ್ಯಸ್ಥಿಕೆಗೆ ಬಂದ ಎಲ್ಲ ಪಕ್ಷಗಾರರಿಗೆ ಮಧ್ಯಸ್ಥಿಕೆಯ ಬಗ್ಗೆ ತಿಳುವಳಿಕೆ ಹೇಳಿ, ಮರಳಿ ಕೂಡಿಸಿ ಕಳಿಸುವ ಪ್ರಯತ್ನವನ್ನು ಮಧ್ಯಸ್ಥಿಕೆದಾರರು ಮಾಡಬೇಕು, ಮತ್ತು ಮಧ್ಯಸ್ಥಿಕೆಗೆ ಬಂದ ಬೇರೆ ಬೇರೆ ಸ್ವರೂಪದ ಕೇಸುಗಳಲ್ಲಿ ಸಹ ಕೇಸುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ವಾದಿ ಪ್ರತಿವಾದಿಯರ ಮನವೊಲಿಸುವಲ್ಲಿ ಹೆಚ್ಚು ಶ್ರಮವಹಿಸಬೇಕು ಮತ್ತು ಮಧ್ಯಸ್ಥಿಕೆಯ ತಿಳುವಳಿಕೆ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಮಧ್ಯಸ್ಥಿಕೆಯ ಬಗ್ಗೆ ಹೆಚ್ಚು ಅರಿವು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ರೋಣಿಹಾಳ 110 ಕೆವಿ ವಿದ್ಯುತ್ ಮಾರ್ಗಗಳ ಮಾಸಿಕ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಮಾ.29 ರವಿವಾರ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಈ ಅವಧಿಯಲ್ಲಿ ವಿದ್ಯುತ್ ಉಪಕೇಂದ್ರಗಳಿಂದ ಹೊರಹೋಗುವ ಎಲ್ಲಾ 11 ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

Read More

ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯ ಸಾರಸ್ವತ ಲೋಕದ ದೈತ್ಯ ಪ್ರತಿಭೆ ದೇಸಿ ಪ್ರಜ್ಞೆಯ ಭಾರತೀಯ ಸಂಸ್ಕೃತಿ ಚಿಂತಕ ನವ್ಯ ಸಾಹಿತ್ಯದ ಪ್ರತಿಪಾದಕ ಪಿ ಲಂಕೇಶ ಕರ್ನಾಟಕದ ಪ್ರಬುದ್ಧ ಪ್ರಾಮಾಣಿಕ ಪತ್ರಕರ್ತರು, ಸಾಹಿತಿ, ಕವಿ, ಲೇಖಕ ಮತ್ತು ಕಾದಂಬರಿಕಾರರು.ತಮ್ಮ ಬರವಣಿಗೆಯ ಮೂಲಕ ಸಮಾಜದಲ್ಲಿ ಸಾಮರಸ್ಯ ಬದಲಾವಣೆ ಕ್ರಾಂತಿಯನ್ನು ತರಬಹುದು ಎಂದು ತೋರಿಸಿ ಕೊಟ್ಟ ಶ್ರೇಷ್ಠ ಕವಿ ವಾಗ್ಮಿ ವಿಮರ್ಶಕ ಮತ್ತು ಚಿಂತಕರು.ಆಂಗ್ಲ ಮಾಧ್ಯಮ ಶಿಕ್ಷಕರಾದ ಬಿ ಎಂ ಶ್ರೀ ಶಂಕರ ಮೊಕಾಶಿ ಪುಣೇಕರ ಶಾಂತಿನಾಥ ದೇಸಾಯಿ ಚಂಪಾ ಅವರಂತೆ ಪಿ ಲಂಕೇಶ ಒಬ್ಬ ಶ್ರೇಷ್ಠ ಇಂಗ್ಲೀಷ್ ಭಾಷೆ ಪ್ರಾಧ್ಯಾಪಕರು. ಯುವ ಜನರ ಬರವಣಿಗೆ ದಿಕ್ಕನ್ನೇ ಬದಲಾಯಿಸಿದ ಕ್ರಾಂತಿಕಾರ ಲೇಖಕ ಸಾಹಿತಿ. ಪಾಳ್ಯದ ಲಂಕೇಶ್, ಅಥವಾ ಪಿ. ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು. ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು…

Read More

ವಿಜಯಪುರದಲ್ಲಿ ಎಬಿವ್ಹಿಪಿ ಹಮ್ಮಿಕೊಂಡಿದ್ದ ’ಉಘೇ ವೀರಭೂಮಿ’ ಕಾರ್ಯಕ್ರಮ ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ – ನಟಿಯರು ಹೀರೋಗಳಲ್ಲ. ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿ ಬಸವರಾಜ ಹಂಚಲಿ ಹೇಳಿದರು.ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ ಅವರು, ದೇಶದ ಶ್ರೇಷ್ಠತೆ ಮತ್ತು ಪರಂಪರೆ ನಮಗೆಲ್ಲ ಪ್ರೇರಣೆ ಆಗಬೇಕು, ಈ ಮೂರು ಜನ ತರುಣರು ತಮ್ಮ ಚಿಕ್ಕ ವಯಸ್ಸಿನಲ್ಲಿ ಭಾರತ ಮಾತೆಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತ ಮಾಡಬೇಕೆಂದು ಕ್ರಾಂತಿಕಾರಿ ಹೋರಾಟವನ್ನು ಮಾಡಿದರು, ತಾವು ಗಲ್ಲಿಗೇರುವ ಸಮಯದಲ್ಲಿ ನಗುತ್ತಾ ಘೋಷಣೆಗಳನ್ನು ಮೊಳಗಿಸುತ್ತಾ ಭಯವಿಲ್ಲದೆ ಗಲ್ಲಿಗೇರಿದ ಮಹಾನ್ ರತ್ನಗಳು ಇವರನ್ನು ಇಂದಿನ ಯುವಕರು ಸ್ಮರಿಸಿಕೊಳ್ಳಬೇಕು. ಇವರು ನಮಗೆ ಪ್ರೇರಣೆ ಆಗಬೇಕು ಎಂದರು.ಎಬಿವಿಪಿಯ ಕೇಂದ್ರೀಯ…

Read More