ಡಿ.೭ರಂದು ವೃಕ್ಷಥಾನ್ ಓಟ ಹಾಗೂ ೬೪ ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ | ಜಿಲ್ಲಾಧಿಕಾರಿ ಡಾ. ಆನಂದ ಕೆ ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಸೆಂಬರ್ ೭ರಂದು ನಗರದಲ್ಲಿ ವೃಕ್ಷಥಾನ್ ಓಟ ಹಾಗೂ ಅದೇ ದಿನ ೬೪ ಪರೀಕ್ಷಾ ಕೇಂದ್ರಗಳಲ್ಲಿ ಟಿ.ಇ.ಟಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೃಕ್ಷಥಾನ್ ಓಟಗಾರರಿಗೆ ಹಾಗೂ ಟಿಇಟಿ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಲಿ ಜಾರಿಯಲ್ಲಿರುವ ಸಾರ್ವಜನಿಕ ರಸ್ತೆ ಸಂಚಾರಿ ಮಾರ್ಗಗಳನ್ನು ಡಿಸೆಂಬರ್ ೭ರ ಬೆಳಿಗ್ಗೆ ೪ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ವೃಕ್ಷಥಾನ ಹೆರಿಟೇಜ್ ರನ್ ಪ್ರಯುಕ್ತ ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಜಮಖಂಡಿಯಿಂದ ಕೇಂದ್ರ ಬಸ್ ನಿಲ್ದಾಣದಿಂದ ಬರುವ ವಾಹನಗಳು ವಲ್ಲಬಬಾಯಿ ಸರ್ಕಲ್ – ನವಭಾಗ ಕ್ರಾಸ್ – ಬಬಲೇಶ್ವರ ನಾಕಾ -ಗುಂಡಬಾವಡಿ ಕ್ರಾಸ್ – ತಾಜ್‌ಬಾವಡಿ- ಜೋಡ ಗುಮ್ಮಟ – ಕೇಂದ್ರ ಬಸ್ ನಿಲ್ದಾಣದವರೆಗೆ, ಕೋಲ್ಹಾರ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಕೋಲ್ಹಾರ ರೈಲ್ವೇ ಗೇಟ್ – ವಿಶ್ವೇಶ್ವರ ಸರ್ಕಲ್ – ರಾಮನಗರ – ವಲ್ಲಬಬಾಯಿ ಸರ್ಕಲ್ – ನವಭಾಗ ಕ್ರಾಸ್ – ಬಬಲೇಶ್ವರ ನಾಕಾ – ಗುಂಡಬಾವಡಿ ಕ್ರಾಸ್ – ತಾಜ್‌ಬಾವಡಿ – ಜೋಡ ಗುಮ್ಮಟ – ಕೇಂದ್ರ ಬಸ್ ನಿಲ್ದಾಣದವರೆಗೆ, ಅಥಣಿ ಕಡೆಯಿಂದ ಸೆಟ್‌ಲೈಟ್ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಇಟಗಿ ಪೆಟ್ರೋಲ್ ಪಂಪ್ – ರಿಂಗ್ ರಸ್ತೆ ಇಟ್ಟಂಗಿಹಾಳ ಕ್ರಾಸ್ – ದರ್ಗಾ ಜೇಲ್ ಕ್ರಾಸ್ – ಶಾಸ್ತ್ರೀ ನಗರ ಕ್ರಾಸ್ – ಗ್ಯಾಂಗ್‌ಬಾವಡಿ – ಸೆಟ್‌ಲೈಟ್ ಬಸ್ ನಿಲ್ದಾಣದವರೆಗೆ ಮಾರ್ಗ ಬದಲಿಸಲಾಗಿದೆ. ಸೋಲಾಪುರ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು ಸೋಲಾಪುರ ಬೈಪಾಸ್ – ಇಂಡಿ ಬೈಪಾಸ್ – ಸಿಂದಗಿ ಬೈಪಾಸ್ – ಮನಗೂಳಿ ಬೈಪಾಸ್ – ಜಲನಗರ – ಕೋರ್ಟ್ ಕ್ರಾಸ್ – ಬಾಗಲಕೋಟ ಕ್ರಾಸ್ ಮೂಲಕ ಕೇಂದ್ರ ಬಸ್ ನಿಲ್ದಾಣದವರೆಗೆ, ಸೋಲಾಪುರದಿಂದ ಸೆಟ್‌ಲೈಟ್ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಸೋಲಾಪುರ ಬೈಪಾಸ್ – ಬಿಎಂ ಪಾಟೀಲ್ ಸರ್ಕಲ್ – ರಿಂಗ್ ರಸ್ತೆ ಇಟ್ಟಂಗಿಹಾಳ ಕ್ರಾಸ್ – ದರ್ಗಾ ಜೇಲ್ ಕ್ರಾಸ್ – ಶಾಸ್ತ್ರೀ ನಗರ ಕ್ರಾಸ್ – ಗ್ಯಾಂಗ್‌ಬಾವಡಿ ಮೂಲಕ ಸೆಟ್‌ಲೈಟ್ ಬಸ್ ನಿಲ್ದಾಣದವರೆಗೆ, ಸಿಂದಗಿ ನಾಕಾದ ಮೂಲಕ ನಗರಕ್ಕೆ ಬರುವ ವಾಹನಗಳನ್ನು ಮನಗೂಳಿ ಕಡೆಗೆ ತಿರುಗಿಸಿಕೊಂಡು ಸದರಿ ವಾಹನಗಳು ಮನಗೂಳಿ ಬೈಪಾಸ್, ಜಲನಗರ – ಕೋರ್ಟ ಕ್ರಾಸ್ – ಬಾಗಲಕೋಟ ಕ್ರಾಸ್ – ಬಸ್‌ಸ್ಟ್ಯಾಂಡಗೆ ಬರಬಹುದು ಅಥವಾ ಜಲನಗರ – ಮನಗೂಳಿ ಅಗಸಿ – ಅಷ್ಟಪೈಲ ಬಂಗಲಾ ಮೂಲಕ ಬಸ್‌ಸ್ಟ್ಯಾಂಡ ಮಾರ್ಗದಲ್ಲಿಯೂ ಬರಬಹುದಾಗಿದೆ.
ಗೋಲಗುಮ್ಮಟ – ಹಕೀಂ ಚೌಕ – ಜೆ.ಎಂ. ರೋಡ – ಅಷ್ಟಪೈಲ ಬಂಗಲಾ – ಬಸ್‌ಸ್ಟ್ಯಾಂಡ, ಸಿಂದಗಿ ನಾಕಾ – ಗೋಲಗುಮ್ಮಜ ಪಿಎಸ್ – ರೇಲ್ವೇ ಸ್ಟೇಷನ್ – ಸ್ಟೇಷನ್ ಬ್ಯಾಕ್ ರೋಡ – ಎಪಿಎಮ್‌ಸಿ, ಲಘು ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ. ಅದರಂತೆ, ವಿಜಯಪುರದ ಪುಲಕೇಶಿ ನಗರ, ಬಂಜಾರ ಕ್ರಾಸ್ ಮುಂತಾದೆಡೆಗೆ ಹೋಗಬೇಕಾದವರು ಸಿಂದಗಿ ನಾಕಾ – ಇಂಡಿ ನಾಕಾ – ಸೋಲಾಪೂರ ನಾಕಾ -ವಿಜಯಪುರ ನಗರದೊಳಗೆ ಈ ಮಾರ್ಗ ಬಳಸಬಹುದು.
ಅದೇ ರೀತಿ ವೃಕ್ಷಥಾನ್ ಓಟದ ಮಾರ್ಗದಲ್ಲಿ ಬರುವ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಪರೀಕ್ಷಾರ್ಥಿಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಪರೀಕ್ಷೆ ನಡೆಯುವ ಶಾಲೆಗಳಿಗೆ ಪರ್ಯಾಯ ಮಾರ್ಗಗಳು
ಲೋಯೋಲಾ ಸ್ಕೂಲ (ಸ್ಟೇಷನ್ ಬ್ಯಾಕ್ ರೋಡ್) : ಸ್ಟೇಡಿಯಂ ಮುಂಭಾಗ ಇರುವ ಇಂಡಿ ಸಂಪೂರ್ಣ ರಸ್ತೆ ಸಂಚಾರ ಬಂದ ಇರುತ್ತದೆ. ಪರ್ಯಾಯ ಮಾರ್ಗಗಳು: ಶ್ರೀ ಸಿದ್ದೇಶ್ವರ ಗುಡಿಯಿಂದ ಕೋರಿಚೌಕ ಮತ್ತು ಅಹಲ್ಯಾಬಾಯಿ ಸರ್ಕಲ್ (ಎಪಿಎಮ್‌ಸಿ ಸರ್ಕಲ್) ಮೂಲಕ ಹಾಯ್ದು (ಸ್ಟೇಷನ್ ಬ್ಯಾಕ್ ರೋಡ್) ಲೋಯೋಲಾ ಸ್ಕೂಲ್‌ಗೆ ತೆರಳಬಹುದು, ಇಂಡಿ ರಸ್ತೆಯ ಮುಖಾಂತರ ಎಪಿಎಮ್‌ಸಿಯಿಂದ ಅಹಲ್ಯಾಬಾಯಿ ಸರ್ಕಲ್ ಮುಖಾಂತರ ಲೋಯೋಲಾ ಸ್ಕೂಲಗೆ ತೆರಳಬಹುದು, ಸ್ಟೇಷನ್ ಬ್ಯಾಕ್ ರೋಡ್ ಬಡಿಕಮಾನ ಕ್ರಾಸ್ ಬಳಸಿಕೊಂಡು ಲೋಯೋಲಾ ಸ್ಕೂಲ್‌ಗೆ ತೆರಳಬಹುದಾಗಿದೆ.
ಸರ್ಕಾರಿ ಗಂಡು ಮಕ್ಕಳ ಜ್ಯೂನಿಯರ್ ಕಾಲೇಜ್ (೦೨ ಕೇಂದ್ರಗಳು), ಗಾಂಧಿಚೌಕ ಹತ್ತಿರವಿರುವ ಸರ್ಕಾರಿ ಬಾಲಕಿಯರ ಜ್ಯೂನಿಯರ್ ಕಾಲೇಜ್: ಬಸವೇಶ್ವರ ಸರ್ಕಲ್‌ದಿಂದ ಶಿವಾಜಿ ಸರ್ಕಲ್ ಹಾಗೂ ಅದರ ಮುಂದಿನ ಮಾರ್ಗದಲ್ಲಿ ವೃಕ್ಷಥಾನ ಓಟಗಾರರು ಓಡುವುದರಿಂದ ಗಾಂಧಿಚೌಕದಿಂದ ಈ ಪರೀಕ್ಷಾ ಕೇಂದ್ರಗಳಿಗೆ ತೆರಳುವುದು ಕಷ್ಟ ಸಾಧ್ಯವಾಗಬಹುದು. ಆದ್ದರಿಂದ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬಹುದಾಗಿದೆ. ಪರ್ಯಾಯ ಮಾರ್ಗಗಳು -ಮೀನಾಕ್ಷಿ ಚೌಕದಿಂದ ಹಾಗೂ ಟಿಪ್ಪು ಸುಲ್ತಾನ ಸರ್ಕಲ್ ಮುಖಾಂತರ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬಹುದು.
ಮರಾಠಿ ವಿದ್ಯಾಲಯ ಹಾಗೂ ಅಂಜುಮನ್ ಬಾಲಕಿಯರ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಪರೀಕ್ಷಾರ್ಥಿಗಳು ಜಲನಗರ ಕಡೆಯಿಂದ ಹಾಗೂ ಬಸ್‌ಸ್ಟಾö್ಯಂಡನಿಂದ ಬರಬಹುದಾಗಿದೆ. ಸೋಲಾಪೂರ ರಸ್ತೆಯ ಆದರ್ಶನಗರ, ಪುಲಕೇಶಿ ನಗರ ಇತ್ಯಾದಿ ಪ್ರದೇಶಗಳಿಂದ ಈ ಪರೀಕ್ಷಾ ಕೇಂದ್ರಗಳಿಗೆ ಬರುವವರು ವಾಟರ್‌ಟ್ಯಾಂಕ, ಬಬಲೆಶ್ವರ ನಾಕಾ, ನಾಯರಾ ಪೆಟ್ರೋಲ್ ಪಂಪ ನವಬಾಗ ರಸ್ತೆ, ಬಸ್ ಸ್ಟಾö್ಯಂಡ ಮೂಲಕ ಈ ಪರೀಕ್ಷಾ ಕೇಂದ್ರಗಳಿಗೆ ಬರಬಹುದಾಗಿದೆ.
ಬಿಡಿಇ ಸೋಸೈಟಿ ಬಾಲಕಿಯರ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವವರು ಸೋಲಾಪುರ ರಸ್ತೆಯ ಪುಲಕೇಶಿ ನಗರ, ಬಂಜಾರಾ ಕ್ರಾಸ್ ಇತ್ಯಾದಿ ಹಾಗೂ ಶ್ರೀ ಸಿದ್ದೆಶ್ವರ ಆಶ್ರಮದ ಕಡೆಯಿಂದ ಬರಲು ಯಾವುದೇ ಅಡೆತಡೆಯಿರುವುದಿಲ್ಲ.
ಬಸ್‌ಸ್ಟ್ಯಾಂಡ ಕಡೆಯಿಂದ ಬರುವವರು ಮೀನಾಕ್ಷಿ ಚೌಕ, ಮಧುಲಾ ಮಾರುತಿ ದೇವಸ್ಥಾನದ ಮುಂಭಾಗದಿಂದ ಬಿಡಿಇ ಸೋಸೈಟಿಗೆ ಹಾಗೂ ಬಬಲೆಶ್ವರ ನಾಕಾ – ಗುಂಡ ಬಾವಡಿ ಕ್ರಾಸ್ – ಮಧುಲಾ ಮಾರುತಿ ದೇವಸ್ಥಾನ ಅಥವಾ ಉಪ್ಪಲಿಬುರ್ಜ ಮುಖಾಂತರ ಮೇಲ್ಕಂಡ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

