ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಭೈರವಾಡಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುರುಪ್ರಸಾದ ಸ್ವಾಮೀಜಿ ಹಾಗೂ ಉಪಾಧ್ಯಕ್ಷರಾಗಿ ಈರಗಂಟೆಪ್ಪ ನಡಕೂರ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಗುರುವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ನಾಲ್ಕನೆಯ ಅವಧಿಗೆ ಜರುಗಿದ ಚುನಾವಣೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಗುಂಪಿಗೆ ಬೆಂಬಲಿಸಿ ಮತ್ತೋಮ್ಮೆ ಸೇವೆ ಮಾಡಲು ಅವಕಾಶ ನೀಡಲಾಯಿತು.
ಅವಿರೋಧವಾಗಿ ಆಯ್ಕೆಗೊಂಡ ಸ್ವಾಮೀಜಿ ಮಾತನಾಡಿ, ಅಭಿವೃದ್ಧಿಪರ ಆಡಳಿತಕ್ಕೆ ಆಶೀರ್ವದಿಸಿದ ಎಲ್ಲ ಮತದಾರರ ಅಪೇಕ್ಷೆಯಂತೆ ಸಂಘದ ಆರ್ಥಿಕ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಬಿರಾದಾರ, ಚುನಾವಣಾಧಿಕಾರಿ ಗೀತಾ ವಾಲಿಕಾರ, ನಿರ್ದೇಶಕರಾದ ಮಹೇಶ ಮುರಾಳ, ಸುನೀಲ ಉತ್ನಾಳ, ವೆಂಕಟೇಶ ಕುಲಕರ್ಣಿ, ಪ್ರೇಮಾವತಿ ಬಿರಾದಾರ, ಸಾಹೇಬಗೌಡ ಉತ್ನಾಳ, ಮಡಿವಾಳಪ್ಪ ಅವರಾದಿ, ಅಮೀನಸಾ ಡೋಣೂರ, ಶಾಂತಾಬಾಯಿ ದೇವೂರ, ಚನ್ನಪ್ಪ ಬಮ್ಮನಳ್ಳಿ, ಚಿದಾನಂದ ನಡಗೇರಿ, ಹಣಮಂತ್ರಾಯ ಬಿರಾದಾರ, ಸಿದ್ಧರಾಯ ಪಟೇದ, ಗುಂಡು ಅಂಗಡಿ, ಸಂತೋಷ ಹಿರೇಮಠ, ಈರಣ್ಣ ಲಚ್ಯಾಣ, ನಾನಾಗೌಡ ಬಿರಾದಾರ, ಗೊಲ್ಲಾಳ ಬಿರಾದಾರ, ಶಾಂತು ಬಿರಾದಾರ ಇದ್ದರು.

