ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ, ಉತ್ತರ ಪ್ರಾಂತ ವತಿಯಿಂದ ಗೋವಿನ ಜೋಳ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಪ್ರತಿ ಪಂಚಾಯತಿ ಮಟ್ಟದಲ್ಲಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಭಾರತೀಯ ಕಿಸಾನ ಸಂಘದ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ರವೀಂದ್ರ ಮೇಡೆಗಾರ ಮಾತನಾಡಿ, ರೈತರು ಬೆಳೆದ ಗೋವಿನ ಜೋಳ ಹಾಗೂ ತೊಗರಿ ಉತ್ಪನ್ನಗಳನ್ನು ಮಿತಿ ಹಾಕದೆ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಸಂಘಗಳ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಂಬಂಧ ಪಟ್ಟವರಿಗೆ ಅತಿ ಶೀಘ್ರದಲ್ಲಿ ಖರೀದಿಸಲು ಕ್ರಮ ಕೈಕೊಳ್ಳಬೇಕು. ಅದಕ್ಕೆ ಬೇಕಾದ ಮೈಸ್ಸನ ಚೆಕ್ ಮಾಡುವದನ್ನು ಖರೀದಿ ಕೇಂದ್ರಗಳಲ್ಲಿ ಪೂರೈಸಬೇಕು. ತಡ ಮಾಡಿದರೆ ರೈತರು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭಧಲ್ಲಿ ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಶ್ರೀಶೈಲ ಜಾಲಗೇರಿ, ಮಹಾಂತೇಶ ಬಾಗೇವಾಡಿ, ಸಿದರಾಯ ಕುಂಬಾರ, ಬಸವರಾಜ ಸುತಗುಂಡಿ, ಪುಟ್ಟಸ್ವಾಮಿ ಸಂಗಮೇಶ ಕುಂಬಾರ, ಶ್ರೀಶೈಲ ಜವಳಗಿ, ಚನ್ನಪ್ಪ ಮಿರಗಿ, ಚಿದನಂದ ಮದರಿ, ಶಿವಲಿಂಗಪ್ಪ ಕಟ್ಟಿ, ಶಾಂತಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

