ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ೨೦೨೫-೨೬ನೇ ಸಾಲಿನ ಸ್ನಾತಕೋತ್ತರ ಎಂಸಿಎ ಕೋರ್ಸ್ಗಳ ವ್ಯಾಸಂಗಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಂಸಿಎ ವಿಭಾಗದಲ್ಲಿ ಕೆಇಎಯಿಂದ ಭರ್ತಿಯಾಗದೇ ಬಾಕಿ ಉಳಿದಿರುವ ಸೀಟುಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ವಿಜಯಪುರದ ಗಣಕ ವಿಜ್ಞಾನ ವಿಭಾಗ ಸ್ನಾತಕೋತ್ತರ ಕೇಂದ್ರದಿಂದ ಪಡೆದುಕೊಳ್ಳಬಹುದಾಗಿದೆ.
ಅರ್ಜಿಪಡೆದುಕೊಳ್ಳಲು ಕೊನೆಯ ದಿನಾಂಕ: ೧೦-೧೨-೨೦೨೫ ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು, ಸ್ನಾತಕೋತ್ತರ ಕೇಂದ್ರ ವಿಜಯಪುರ ಇವರನ್ನು ಹಾಗೂ ಅಶೋಕ ಮೀಶಿ ಮೊ: ೯೯೦೦೭೬೨೮೮೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
