ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಕಾರ್ಯಾಗಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ. ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಡಿ.೦೪ ರಂದು ‘ಸಾಧನೆ, ಮಾನ್ಯತೆ ಮತ್ತು ಗುಣಮಟ್ಟದ ಭರವಸೆಗಾಗಿ ಸಿಒ-ಪಿಒ ಮ್ಯಾಪಿಂಗ್‌ನಲ್ಲಿ ಪರಿಣಾಮಕಾರಿ ಅಭ್ಯಾಸಗಳು’ ಎಂಬ ವಿಷಯದ ಒಂದು ದಿನದ ಅಧ್ಯಾಪಕರ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಈ ವೇಳೆಯಲ್ಲಿ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ. ಬಿ. ವೈ. ಖಾಸ್ನಿಸ್ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಫಲಿತಾಂಶ ಆಧಾರಿತ ಶಿಕ್ಷಣ (ಒಬಿಇ) ಮುಖ್ಯವಾಗಿದೆ. ಇದು ವಿದ್ಯಾರ್ಥಿ ಕೇಂದ್ರಿತವಾಗಿದ್ದು ಅವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ, ವಿಭಿನ್ನ ಶೈಲಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ. ಅಗತ್ಯಕ್ಕೆ ಸಂಬಂಧಿತ ಕೌಶಲ್ಯಗಳನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
(ಒಬಿಇ)ಯ ಮೂಲಭೂತ ಅಂಶಗಳನ್ನು ಕೇಂದ್ರೀಕರಿಸುವ, ಸ್ಮಾರ್ಟ್ ಕೋರ್ಸ್ ಫಲಿತಾಂಶಗಳನ್ನು (ಸಿಒಎಸ್) ರೂಪಿಸುವುದು ಕಾರ್ಯಕ್ರಮದ ಫಲಿತಾಂಶಗಳನ್ನು (ಪಿಒಎಸ್) ಅರ್ಥಮಾಡಿಕೊಳ್ಳುವುದು, (ಸಿಒ-ಪಿಒ)ಮ್ಯಾಪಿಂಗ್ ಮ್ಯಾಟ್ರಿಕ್ಸ್ ಅನ್ನು ಕರಗತ ಮಾಡಿಕೊಳ್ಳುವುದು, ಸಾಧನೆಯ ಮಟ್ಟವನ್ನು ಲೆಕ್ಕಾಚಾರ ಮತ್ತು ನ್ಯಾಕ್ ಗಾಗಿ ನಿರ್ಣಾಯಕ ಮಾನ್ಯತೆ ಅವಶ್ಯಕತೆಗಳನ್ನು ಪರಿಹರಿಸುವ ಬಗ್ಗೆ ಹೆಚ್ಚು ಸಂವಾದಾತ್ಮಕ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿದರು.
ಈ ಸಂದರ್ಭದಲ್ಲಿ ,ಐಕ್ಯೂಎಸಿ ಸಂಯೋಜಕ ಡಾ. ಪಿ. ಎಸ್. ಪಾಟೀಲ,ನ್ಯಾಕ್ ಸಂಯೋಜಕ ಡಾ.ಕೆ. ಮಹೇಶ್ ಕುಮಾರ್ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಡಾ.ಆರ್.ಜಿ ಕಮತರ ಪ್ರಾರ್ಥಿಸಿದರು, ಪ್ರೊ.ಜಯಶ್ರೀ ಬಿರಾದಾರ ನಿರೂಪಿಸಿರು, ಡಾ.ಗಿರಿಜಾ ನಿಂಬಾಳ ಸ್ವಾಗತಿಸಿದರು, ಡಾ.ರಾಮಚಂದ್ರ ನಾಯಕ ವಂದಿಸಿದರು.

