Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಮಹತ್ವ ಸಾರಿ, ಸಾವಯವ ಕೃಷಿಗೆ ಒತ್ತು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧಿಸಿರುವ ಕ್ರಮ ಖಂಡನೀಯ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಶ್ರೀಗಳ ಜಿಲ್ಲಾ ನಿಷೇಧ ಹೇರುವ ಮೂಲಕ ರಾಜ್ಯ ಸರ್ಕಾರ ತನ್ನ ಕುಟೀಲ ನೀತಿಯನ್ನು ಪ್ರಯೋಗಿಸಿದೆ. ಮುಖ್ಯಮಂತ್ರಿಗಳ ಕೃಪಾ ಘೋಷಿತ ಮಂಡಳಿ ಎಂಬ ಸತ್ಯವನ್ನು ಶ್ರೀಗಳು ಹೇಳಿದ್ದಾರೆ, ಇದನ್ನು ಅರಗಿಸಿಕೊಳ್ಳಲಾಗದ ರಾಜ್ಯ ಸರ್ಕಾರ ಶ್ರೀಗಳ ಮೇಲೆ ಈ ರೀತಿ ನಿರ್ಬಂಧ ಆದೇಶ ಹೊರಡಿಸಿದೆ, ಆದರೆ ಶ್ರೀಗಳು ಇದರಿಂದ ಹೆದರುವುದಿಲ್ಲ, ಶ್ರೀಗಳ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸ್ಪಷ್ಟಪಡಿಸಿದರು.ಕನೇರಿ ಶ್ರೀಗಳ ವ್ಯಕ್ತಿತ್ವ ಶ್ರೇಷ್ಠ, ಅಧ್ಯಾತ್ಮಿಕ ಮನೋಭಾವನೆ,…
ಲೇಖನ- ಮಲ್ಲಪ್ಪ ಸಿ. ಖೊದ್ನಾಪೂರ(ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಐನಸ್ಟೀನ್ ಅವರು “ತಾಳ್ಮೆ ದುರ್ಬಲತೆಯಲ್ಲ, ಮನುಷ್ಯನನ್ನು ದೀರ್ಘ ಕಾಲ ಸ್ಥಿರವಾಗಿ ನಿಲ್ಲಿಸುವ ಪ್ರಬಲವಾದ ಶಕ್ತಿ” ಎಂದು ಹೇಳಿದ್ದಾರೆ. ಬದುಕಿನಲ್ಲಿ ಯಶಸ್ಸು ಎನ್ನವುದು ರಾತ್ರಿ ಬೆಳಗಾಗುವುದರೊಳಗೆ ದೊರೆಯುವಂತದಲ್ಲ. ಅದು ಹಲವಾರು ವರ್ಷಗಳ ಅವಿರತ ಪ್ರಯತ್ನ, ಸಾಧನೆಯ ಫಲ ಮತ್ತು ಶ್ರಮ ವಹಿಸುವಿಕೆಯಿಂದ ಲಭಿಸುತ್ತದೆ. ಅದಕ್ಕೆ ಆ ಯಶಸ್ಸು ಪಡೆಯಲು ಆ ವ್ಯಕ್ತಿಯಲ್ಲಿ ಇರಬೇಕಾದದ್ದು ತಾಳ್ಮೆ. ಅದಕ್ಕಂತಲೇ ಹಿರಿಯರು ‘ತಾಳಿದವನು ಬಾಳಿಯಾನು’ ಎಂದು ಹೇಳಿದ್ದಾರೆ. ಬದುಕೆಂಬುದು ಒಂದು ಸಾಗರವಿದ್ದಂತೆ. ಅದರಲ್ಲಿ ಸಮಸ್ಯೆಗಳು, ಸವಾಲುಗಳು ಅಲೆಗಳಂತೆ ಒಂದರ ಮೇಲೊಂದರಂತೆ ಬರುತ್ತಲೇ ಇರುತ್ತವೆ. ಅವೆಲ್ಲವುಗಳನ್ನು ದುರಿಸಿ ಮುಂದೆ ಗುರಿಯತ್ತ ಸಾಗಬೇಕಾದರೆ ತಾಳ್ಮೆ ಅತೀ ಅಗತ್ಯವಾಗಿದೆ. ಗೌತುಮ ಬುದ್ಧ ಅವರು “ತಾಳ್ಮೆ ಎಂದರೆ ನಾವು ಗುರಿಯ ಬೆನ್ನು ಹತ್ತಿ ಹೊರಟಾಗ ಬಂದೆರಗುವ ಸಂಕಷ್ಟಗಳನ್ನು ಹೇಗೆ ಸಮರ್ಥವಾಗಿ ಎದುರಿಸುತ್ತೇವೆ ಎಂಬುದಲ್ಲ, ಹೊರತು ಆ ಸಂದರ್ಭದಲ್ಲಿ ನಾವು ತೋರುವ ಪ್ರತಿಕ್ರಿಯೆ ಮತ್ತು ಶಾಂತ-ಮುಕ್ತ ಮನಸ್ಸಿನಿಂದ ಆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಕಾಯುವ ಪ್ರತಿಯೊಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜಕ್ಕೆ ಇಂದು ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದ್ದು ಭಾವಿ ಶಿಕ್ಷಕರು ಈ ದಿಶೆಯಲ್ಲಿ ಸನ್ನದ್ಧರಾಗಬೇಕು ಎಂದು ಗದಗ- ಹುಲಕೋಟಿ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಶ್ರೀ ಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜ ಹೇಳಿದ್ದಾರೆ.ಬುಧವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 45ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದು ಸಮಾಜಕ್ಕೆ ಸಮಭಾವದ, ಸಮಸಮಾಜ ಮತ್ತು ದೇಶದ ಐಕ್ಯತೆಯನ್ನು ಉಂಟುಮಾಡುವ ಶಿಕ್ಷಕರು ಬೇಕಾಗಿದ್ದಾರೆ. ಕಾಯಕದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ, ಸಚ್ಚಾರಿತ್ರ್ಯ, ಸದ್ಗುಣ, ಜ್ಞಾನಭರಿತ ಶಿಕ್ಷಕರು ತಾವಾಗಬೇಕು ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ. ಎಲ್. ಲಕ್ಕಣ್ಣವರ ಮಾತನಾಡಿ, ಪ್ರಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು. ನಿರಂತರವಾಗಿ ಓದುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಜ್ಞಾನವನ್ನು ಹೊಂದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆದರದೆ ಮೆಟ್ಟಿ ನಿಲ್ಲುವ ಮನೋಭಾವದೊಂದಿಗೆ ನಿರಂತರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧಿಸಿರುವ ಕ್ರಮ ಖಂಡನೀಯ. ಸಂತರನ್ನು ಮುಟ್ಟಿದವರು ಯಾರು ಉಳಿದಿಲ್ಲ, ಜನಕಳಕಳಿಯ ಮತ್ತು ಸಮಾಜಮುಖಿ ಸಂತರನ್ನು ಅಡ್ಡಿಪಡಿಸಿ, ಕಾಂಗ್ರೆಸ್ ಸರ್ಕಾರ ತನ್ನ ಸಂಕುಚಿತ ಮನಸ್ಸನ್ನು ಮತ್ತೊಮ್ಮೆ ಸಾಬೀತುಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಧರ್ಮದ ಪರವಾಗಿ ಮಾತನಾಡುವುದೇ ಅಪರಾಧವೇ? ಹಿಂದೂ ದೇವರ ಬಗ್ಗೆ ಅವಹೇಳನದ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಳಜಿಯಿಂದ ಕನೇರಿ ಗುರುಗಳು ಕೆಲವೊಂದು ವಿಚಾರಗಳನ್ನು ಪ್ರತಿಪಾದಿಸಿದ್ದರು, ರಾಜ್ಯ ಸರ್ಕಾರದ ಕೆಲವು ನೀತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯ ಹಂಚಿಕೊಂಡ ಮಾತ್ರಕ್ಕೆ ಶ್ರೀಗಳಿಗೆ ಜಿಲ್ಲೆಗೆ ಪ್ರವೇಶಸಿದಂತೆ ನಿರ್ಬಂಧ ಹೇರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಗಳಿಗೆ ದೊಡ್ಡ ಅಪಮಾನ ಮಾಡಿ ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ನಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.ಗ್ರಾಮೀಣ ಜೀವನೋಪಾಯ, ಸ್ವಾವಲಂಬಿ ಯೋಜನೆಗಳು, ಕೌಶಲ್ಯ ತರಬೇತಿ ಮುಂತಾದ ಕ್ಷೇತ್ರಗಳಲ್ಲಿ ಅನನ್ಯ ಸೇವೆ ನೀಡಿರುವ ಶ್ರೀ ಕನೇರಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ರೋಟರಿ ಸಂಸ್ಥೆಯ ಅಡಿಯಲ್ಲಿ ಬಾಗಲಕೋಟೆಯ ಡಾ.ಮಾಸೂರಕರ ಅವರ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ಬಡವರಿಗೆ ಉಚಿತವಾಗಿ ಕಣ್ಣು ತಪಾಸಣೆ ಶಿಬಿರ ಆಯೋಜಿಸಲಾಗುವುದು. ಶೇ 50ರ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು. ರೋಟರಿ ಸಂಸ್ಥೆ ಸೂಚಿಸುವ ಕಡೆ ಶಿಬಿರವನ್ನು ಆಯೋಜಿಸಲಾಗುವುದು ಎಂದು ರೋಟರಿ ಜಿಲ್ಲೆ 3170ದ ಸಹಾಯಕ ಗವರ್ನರ ನಾರಾಯಣ ಹೆರಕಲ್ ಹೇಳಿದರು.ಇಲ್ಲಿನ ವಿಜಯಪುರ ರಸ್ತೆಯ ಹೊರವಲಯದಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯ ಆಶ್ರಯದಲ್ಲಿ ನಡೆದ ವಾರದ ಸಭೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪಲ್ಸ್ ಪೋಲಿಯೋ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ವ್ಯವಸ್ಥೆ ಮಾಡಬೇಕು. ಮಳೆ ನೀರು ಕೊಯ್ದು, ಚೆಕ್ ಡ್ಯಾಂ ನಿರ್ಮಾಣದ ಮಹತ್ವ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಶಾಲಾ-ಕಾಲೇಜು ಮಕ್ಕಳಿಗೆ ಗಣಕಯಂತ್ರ ಮತ್ತು ಸೈಕಲ್ ವಿತರಿಸುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು 13 ಸಲಹೆ ನೀಡಿದರು.ರೋಟರಿ ಜಿಲ್ಲೆ ಗವರ್ನರ ಆಗುವಂತ ಅರ್ಹತೆವುಳ್ಳ ವ್ಯಕ್ತಿಗಳನ್ನು ಗುರುತಿಸಿ ರೋಟರಿ ಸದಸ್ಯರನ್ನಾಗಿ…
ಬಸವನಬಾಗೇವಾಡಿ ಕ್ಷೇತ್ರಕ್ಕೆ 3 ಕೆ.ಪಿ.ಎಸ್ ಶಾಲೆಗಳು ಮಂಜೂರು | ಇವಣಗಿ, ಯಂಬತ್ನಾಳ ಗ್ರಾಮಗಳ ಮಕ್ಕಳಿಗೂ ಸೌಲಭ್ಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರ ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆ.ಪಿ.ಎಸ್.) ಉನ್ನತೀಕರಿಸಿ ಆದೇಶ ಹೊರಡಿಸಿದೆ.ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತವರು ಕ್ಷೇತ್ರವಾದ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರಕ್ಕೂ 3 ಕೆ.ಪಿ.ಎಸ್ ಶಾಲೆಗಳನ್ನು ಮಂಜೂರು ಮಾಡಿ ಆದೇಶಿಸಿದೆ.ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೊಲ್ಹಾರದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಇವಣಗಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಯಂಬತ್ನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇವುಗಳನ್ನು ಕೆ.ಪಿ.ಎಸ್. ಶಾಲೆಗಳಾಗಿ ಉನ್ನತೀಕರಿಸಲಾಗಿದೆ.ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಪುನರ್ವಸತಿ ಕೇಂದ್ರ ಹಾಗೂ ತಾಲೂಕ ಕೇಂದ್ರವಾಗಿರುವ ಕೊಲ್ಹಾರ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇರಲಿಲ್ಲ. ಪರಿಣಾಮ ಖಾಸಗಿ ಶಿಕ್ಷಣ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕೇ ಹೊರತು ಅಜ್ಞಾನಿಗಳಾಗಬಾರದು. ಚನ್ನಬಸವಣ್ಣನವರ ವಚನಗಳನ್ನು ಓದುತ್ತಿದ್ದರೆ ಉತ್ತಮ ಸಂಸ್ಕಾರಗಳು ಒಡಮೂಡಿ,ಉತ್ತಮ ವ್ಯಕ್ತಿತ್ವ ಅರಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಂಶೋಧಕ ಡಿ ಎನ್ ಅಕ್ಕಿ ಹೇಳಿದರು.ಗುರುವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಕದಳಿ ವೇದಿಕೆ ಯುವ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸದಾಚಾರ, ಸದ್ವಿಚಾರಗಳನ್ನು ತಿಳಿಯುವುದು. ಸತ್ಯವನ್ನೇ ನುಡಿಯಬೇಕು, ಹಿಂಸೆಯನ್ನು ಮಾಡಬಾರದು, ಪರೋಪಕಾರ ಬುದ್ಧಿ ಇರಬೇಕು, ಕಾಯಕ ಶ್ರದ್ಧೆ ಬೆಳೆಸಿಕೊಳ್ಳಬೇಕು, ಯಾರಿಗೂ ಕೇಡು ಬಯಸಬಾರದು ಎಂಬ ಚನ್ನಬಸವಣ್ಣನವರ ಜೀವನ ಸಂದೇಶ ಇಂದಿನ ಯುವಪೀಳಿಗೆಗೆ ಪ್ರೇರಕವಾಗಿದೆ ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ ಮಾತನಾಡಿ, ಅರಿವು ಮತ್ತು ಆಚಾರದ ಮೂಲಕ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಚನ್ನಬಸವಣ್ಣನವರ ಬದುಕು ಬಹು ವಿಶಿಷ್ಟವಾದುದು. ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರಿಗೆ ಚನ್ನಬಸವಣ್ಣನವರ ಬದುಕು ಮತ್ತು ವಚನಗಳು ಹೆಗ್ಗುರುತು ಆಗಬೇಕಿದೆ ಎಂದು ಹೇಳಿದರು.ಅರಿವು, ಆಚಾರ,…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಲ್ಲರೂ ಸೇರಿ ಸಮೀಕ್ಷೆ ಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಸಿಂದಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮುಜಿ ಅಗ್ನಿ ಸೂಚಿಸಿದರು.ತಾಲೂಕಿನ ದೇವಣಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಣಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಗಣತಿದಾರ ಶಿಕ್ಷಕರ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.ಇನ್ನು ಮೂರು ದಿನಗಳಲ್ಲಿ ಗಣತಿಯನ್ನು ಪೂರ್ಣಗೊಳಿಸಬೇಕಿದೆ, ಸಮೀಕ್ಷೆ ಪೂರ್ಣಗೊಳಿಸಲು ಆಗುತ್ತಿರುವ ಅಡೆತಡೆಗಳು ಯಾವುವು ಅವುಗಳನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕೆಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.ತಾಂತ್ರಿಕ ಅಡೆತಡೆಗಳಿರುವ ಸಮೀಕ್ಷೆಯನ್ನು ಪಂಚನಾಮಿ ಮಾಡುವ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಸೂಚಿಸಿದರು.ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶದಿಂದ ಅವರನ್ನು ಬಳಸಿಕೊಂಡು ಶೇ.100 ಗುರಿಯನ್ನು ಸಾಧಿಸಿ ಎಂದು ಹೇಳಿದರು.ದೇವಣಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ ಮಾತನಾಡಿ ಸಮೀಕ್ಷೆದಾರರಿಗೆ ಎಲ್ಲ ರೀತಿಯ ಸಹಾಯ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಾಯಿತ ಕುಟುಂಬಗಳ ಜಾಬ್ ಕಾರ್ಡ ವ್ಯಾಲಿಡೇಶನ್ ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲಾಗುತ್ತಿದೆ. ಎಲ್ಲಾ ಕೂಲಿಕಾರರು ತಪ್ಪದೇ ಇ-ಕೆವೈಸಿ ಅಪ್ಡೇಟ್ ಮಾಡಿಸುವಂತೆ ಸಿಂದಗಿ ಮತ್ತು ಆಲಮೇಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಮು ಜಿ ಅಗ್ನಿ ಅವರು ತಿಳಿಸಿದ್ದಾರೆ.ಕೇಂದ್ರ ಗ್ರಾಮೀಣಾಭಿವೃದ್ದಿ ಮಂತ್ರಾಲಯದ ಆದೇಶದಂತೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಣಾಧಿಕಾರಿಯವರ ಸೂಚನೆಯಂತೆ ವಿಜಯಪುರ ಜಿಪಂ ಸಿಇಒ ರವರು ಹಾಗೂ ಉಪಕಾರ್ಯದರ್ಶಿಗಳ ಮಾರ್ಗದರ್ಶನದಂತೆ ಸಿಂದಗಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡನ್ನು ಇ-ಕೆವೈಸಿ ಮುಖಾಂತರ ವ್ಯಾಲಿಡೇಟ್ ಮಾಡಲಾಗುತ್ತಿದೆ. ನರೇಗಾ ಯೋಜನೆಯ ಎಲ್ಲ ಗ್ರಾಪಂಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ ವ್ಯಾಲಿಡೇಶನ್ ಅಭಿಯಾನ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮುಖಾಂತರ ಪೋರ್ಣಗೊಳಿ¸ಲು ಸೂಚಿಸಿದ್ದಾರೆ ಎಂದು ತಿಳಿಸಿದರು.ನರೇಗಾ ಯೋಜನೆಯಡಿ ನೊಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್ ಎಮ್ ಎಮ್ ಎಸ್ ಮೊಬೈಲ ತಂತ್ರಾಂಶದಲ್ಲಿ…
ಶಾಸಕ ಅಶೋಕ ಮನಗೂಳಿ ಗೆ ಮಾಜಿ ಶಾಸಕ ರಮೇಶ ಭೂಸನೂರ ಸವಾಲು ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮ ಮಾತುಗಳಿಗೆ ತಿರುಚಿ ಮಾತನಾಡುವುದನ್ನು ಬಿಟ್ಟು ವಾಸ್ತವಿಕ ವರದಿಯನ್ನು ಜನರಿಗೆ ತಿಳಿಸಬೇಕು. ನಿಮಗೆ ತಾಕತ್ತು ದಮ್ಮು ಇದ್ದರೆ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ದೀಪಾವಳಿ ಬಳಿಕ ಕಬ್ಬು ನುರಿಸುವ ಕಾರ್ಯವನ್ನು ರೈತರು ಪ್ರಾರಂಭ ಮಾಡುತ್ತಾರೆ. ಅದಕ್ಕಾಗಿ ತಾಲೂಕಿನಾದ್ಯಂತ ಬಿದ್ದಿರುವ ರಸ್ತೆ-ಗುಂಡಿಗಳನ್ನು ಮುಚ್ಚಿಸುವಂತ ಕಾರ್ಯ ನಿಮ್ಮಿಂದಾಗಲಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಕಿಡಿಕಾರಿದರು.ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ೩ನೆಯ ದಿನದ ಧರಣಿ ಸತ್ಯಾಗ್ರಹದ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ಬಿಪಿಎಲ್ ರೇಷನ್ ಕಾರ್ಡ್ನ್ನು ರದ್ದು ಮಾಡುವ ಕಾರ್ಯಕ್ಕೆ ಸರಕಾರ ಕೈಹಾಕಿದ್ದು ಖಂಡನೀಯ. ೨೦೦೯ ಮತ್ತು ೨೦೧೯ರಲ್ಲೂ ಬಂದಿತ್ತು. ಅಂದಿನ ಬಿಜೆಪಿ ಸರಕಾರ ೧ಲಕ್ಷ ಕೋಟಿ ಬಜೆಟ್‌ನಲ್ಲಿ ಸಿಂದಗಿ ತಾಲೂಕಿನ ೮ ಹಳ್ಳಿಗಳನ್ನು ನನ್ನ ಅವಧಿಯಲ್ಲಿ ಸ್ಥಳಾಂತರವನ್ನು ಮಾಡಿದ್ದೇನೆ. ಪ್ರಸ್ತುತ ೩ಲಕ್ಷ ಕೋಟಿಗೂ ಅಧಿಕ…
