೧೦ ಲಕ್ಷ ರೈತರೊಂದಿಗೆ ಬೃಹತ್ ಹೋರಾಟ | ೧ ಲಕ್ಷ ಕೋಟಿ ರೈತರಿಗೆ ಮೀಸಲಿಡಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಡಿಸೆಂಬರ್ ೮-೧೯ ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚುನ್ನಪ್ಪಾ ಪೂಜೇರಿ, ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಡಿಸೆಂಬರ್- ೧೧, ೧೨ ರಂದು ಇಡೀ ರಾಜ್ಯದ ೩೧ ಜಿಲ್ಲೆ, ತಾಲೂಕ, ಹೋಬಳಿ ಹಾಗೂ ಗ್ರಾಮಗಳ ಮನೆ ಮನೆಯಿಂದ ಲಕ್ಷಾಂತರ ರೈತರು ಬೆಳಗಾವಿ ಚಲೋ ಎಂಬ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದಾರೆ, ಮನೆ ಮನೆಯಿಂದ ರೈತರೆಲ್ಲರೂ ಬೆಳಗಾವಿಗೆ ಬರುವಂತೆ ಕರೆ ನೀಡಿದರು.
ತಿಕೋಟಾ ತಾಲೂಕಿನ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಘದ ಪದಾಧಿಗಳಿಗೆ ಹಾಗೂ ರೈತರಿಗೆ, ರೈತ ಮಹಿಳೆಯರಿಗೆ, ರೈತ ಕಾರ್ಮಿಕರಿಗೆ ಬರುವಂತೆ ಕರೆ ಮನವಿ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ವಿಜಯಪುರ ಜಿಲ್ಲೆಯಲ್ಲಿ ಕೂಡಾ ರೈತರಿಗೆ ನೂರಾರು ಸಮಸ್ಯೆಗಳು ತಾಂಡವವಾಡುತ್ತಿವೆ, ಅದರಲ್ಲಿ ಮುಖ್ಯವಾಗಿ ಆಲಿಮಟ್ಟಿಯ ಜಲಾಶಯದ ಅಡಿಗಲು ೧೯೬೪ ರಲ್ಲಿ ಆಗಿ ೬೦ ವರ್ಷಗಳೆ ಕಳೆದರು ಇಲ್ಲಿಯವರೆಗೆ ಆಗಿಲ್ಲ, ಇದಕ್ಕೆಲ್ಲ ನೇರ ಹೋಣೆಗಾರರು ನಾವೂ ಮತದಾನ ಮಾಡಿ ಕಳಿಸಿರುವ ನಮ್ಮ ಜನ ಪ್ರತಿನಿಧಿಗಳು ಎಂದರು.
ಹಗಲಿನಲ್ಲಿ ೧೨ ಘಂಟೆ ತ್ರಿಫೆಸ್ ಕರೆಂಟ್ ಮತ್ತು ರಾತ್ರಿ ಸಿಂಗಲ ಫೆಸ್ ಕರೆಂಟ ಕೊಡಬೇಕು, ವಿದ್ಯುತ್ ಖಾಸಗಿಕರಣ ಕೈಬೀಡಬೇಕು,
೬೦ ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ೫೦೦೦ ಪಿಂಚಣಿ ಕೊಡಬೇಕು,
ರೈತರಿಗೆ ಸಂಬಂಧಿಸಿದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೇ ಇಲಾಖೆಗಳಲ್ಲಿ ಬಹುತೇಕ ೭೦ ಪ್ರತಿಷತ್ ಹುದ್ದೆಗಳು ಖಾಲಿ ಇವೆ, ಅವುಗಳನ್ನು ಭರ್ತಿ ಮಾಡಬೇಕು,
ರೈತರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಲ್ಲಿ ಮೊದಲಿನಂತೆ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು ಮತ್ತು ಹೊಸ ಹೊಸ ತಂತ್ರಜ್ಞಾನಗಳ ಮೂಲಕ ರೈತರ ಆದಾಯವನ್ನು ದ್ವೀಗುಣ ಮಾಡುವುದು, ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಬೆಳಗಾವಿಗೆ ಹೊರಟ್ಟಿದ್ದೆವೆ,
ಅಂದಾಜು ವಿಜಯಪುರ ಜಿಲ್ಲಯಿಂದ ೫೦೦೦೦ ರೈತರು ಬರುವ ನಿರೀಕ್ಷೆ ಇದೆ, ತಾವೇಲ್ಲರೂ ಬನ್ನಿ ಎಂದು ಕರೆ ನೀಡಿದರು.
ಈ ವೇಳೆ ಮುಖಂಡರಾದ ಮಹಾದೇವ ಕದಂ, ಭೀಮಣ್ಣ ಬಾಗಲಕೋಟ, ಸಿದ್ದು ಕೊಟ್ಟಲಗಿ, ಸಲೀಮ್ ಮಾಶ್ಯಳ, ಹೊನ್ನಪ್ಪ ಪೂಜಾರಿ ಸೇರಿದಂತೆ ಆಳಗಿನಾಳ, ಸೋಮದೇವರ ಹಟ್ಟಿ, ಕಳ್ಳ ಕವಟಗಿ, ಬಾಬಾನಗರ, ಬಿಜ್ಜರಗಿ, ಕನಮಡಿ, ಹೋನವಾಡ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬರುವಂತೆ ಕರ ಪತ್ರ ವಿತರಣೆ ಮಾಡಲಾಯಿತು

