ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ಬಬಲೇಶ್ವರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ಸಹಯೋಗದೊಂದಿಗೆ ನಡೆದ ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ತೀರ್ಮಾನದ ಅನುಸಾರ ಈ ಕಾರ್ಯಕ್ರಮ ನಡೆದಿದೆ. ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ ಕಂಪನಿ ಬೆಂಗಳೂರು ಅವರ ಕಣ್ಣಿನ ತಪಾಸಣೆ, ಚಿಕಿತ್ಸೆ ನೀಡುವಲ್ಲಿ ವಿಜಯಪುರ ಗ್ರಾಮೀಣ ವಲಯ ರಾಜ್ಯದಲ್ಲೀಯೆ ಪ್ರಥಮ ಸ್ಥಾನದಲ್ಲಿದೆ. 871 ವಿಶೇಷ ಚೇತನ ಮಕ್ಕಳನ್ನು ಗುರುತಿಸಿದ್ದು ಅವರಲ್ಲಿ 161 ತೀವ್ರತರ ನ್ಯೂನತೆಯ ಮಕ್ಕಳು ಗೃಹ ಆಧಾರಿತ ಶಿಕ್ಷಣಕ್ಕೆ ಒಳಪಟ್ಟಿದ್ದಾರೆ. ಅರ್ಹ ಎಲ್ಲರಿಗೂ ಸಾಧನ ಸಲಕರಣೆ ವಿತರಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಉಚಿತ ಹೃದಯ ಇತರೆ ತೀವ್ರತರ ಕಾಯಿಲೆಗೆ ಸಂಭಂದಿಸಿದ ಚಿಕಿತ್ಸೆ ಇದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆ ವತಿಯಿಂದ 6 ರಿಂದ 18 ವರ್ಷದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ವಿ. ಎಸ್. ಪಾಟೀಲ್ ಮಾತನಾಡಿ ವಿಕಲಚೇತನರ ಗೋಳು ಪಾಲಕರಿಗೆ ಗೊತ್ತು ಅವರಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ಸರಕಾರದ ಸೌಲಭ್ಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ಸಾಗಿಸಲಿ.ಸಮಾಜ ಮತ್ತು ಸರ್ಕಾರ ಇವರ ಬಗ್ಗೆ ಇಚ್ಛಾಶಕ್ತಿ ತೋರಲಿ ಎಂದರು.
ನಿವೃತ್ತ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವ, ಬಿಐಇಆರ್ಟಿ ಎಸ್ ಬಿ ಬಿರಾದಾರ ಮಾತನಾಡಿದರು. ವಿಶೇಷ ಚೇತನ ಮಕ್ಕಳು ಹಾಗೂ ಪಾಲಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಮಂಗಳವೇಡೆ, ಬಿಐಇಆರ್ಟಿಗಳಾದ ಎಸ್. ಜಿ. ಮಳ್ಳಿ, ಎಸ್. ಎಸ್. ಪಟ್ಟಣಶೆಟ್ಟಿ, ಸೋಮಪ್ಪ ಆಯೆಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ. ಜಿ. ಬಿರಾದಾರ, ನೌಕರ ಸಂಘದ ಅಧ್ಯಕ್ಷ ಎ.ಎಂ. ಬೂದಿಹಾಳ, ಸಿಆರ್ಪಿ ಜಯಲಕ್ಷ್ಮಿ ಪಾಟೀಲ, ಎಸ್. ಪಿ. ಬಿರಾದಾರ, ಎಚ್.ವಿ. ಮಾಲಗಾರ, ಸಿ. ಕೆ. ಚಲವಾದಿ, ಆರ್. ಜಿ. ಗುಂದಗಿ, ಎ.ಎಂ.ತಮಗೊಂಡ, ಎಂ.ಎಚ್.ಮಾದರ, ಶಿಕ್ಷಣ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು, ಪಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕ ಪಿ. ಎಂ.ಹಳ್ಳಿ ಸ್ವಾಗತಿಸಿದರು, ವಿ. ಎಸ್. ಹಲಸಗಿ ನಿರೂಪಿಸಿದರು, ಪಿ.ಎಸ್.ಇಜೇರಿ ವಂದಿಸಿದರು.

