ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೇಶದ ಶೋಷಿತ, ನಿರ್ಗತಿಕರು, ತಳ ಸಮುದಾಯದ ಏಳಿಗೆಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ ಬಾಬಾಸಾಹೇಬ ಅಂಬೇಡ್ಕರ್ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ಮಾಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಮುಂದುಗಡೆ ಶನಿವಾರ ಶೋಷಿತ ಸಮುದಾಯದ ನಾಯಕ, ಮಹಾ ಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರ 69 ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರರು ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿದ ಮೊದಲ ಭಾರತೀಯ ಅವರ ಹಕ್ಕಿಗಾಗಿ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಸಾಮಾಜಿಕ ನ್ಯಾಯದ ಹರಿಕಾರ ಎಂದವರು. ಸರ್ವ ಜನಾಂಗಕ್ಕೆ ನ್ಯಾಯವನ್ನು ಒದಗಿಸಿ ಕೊಟ್ಟ ಶ್ರೇಷ್ಠ ಕಾನೂನು ತಜ್ಞರು ಎಂದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ಪ್ರೀಯಾ ರಾಮನಗೌಡ ಪೊಲೀಸ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀಬಾಯಿ ಕಂಬಾರ, ಯುವ ನಾಯಕ ಆದಿತ್ಯಗೌಡ ಪೊಲೀಸ್ ಪಾಟೀಲ್, ಪುರಸಭೆ ಸದಸ್ಯರುಗಳಾದ ರವಿಶಂಕರ ಸೊನ್ನದ, ಆರಿಫ್ ಖಾಜಿ, ಭೀಮನಗೌಡ ಮಲ್ಕಾಪುರ, ಪರಶುರಾಮ ಬಳಬಟ್ಟಿ, ಪುರಸಭೆ ಮುಖ್ಯಅಧಿಕಾರಿ ಮಹ್ಮದ್ ಯೂಸುಫ, ಉಪ ತಹಶೀಲ್ದಾರ್ ಪ್ರವೀಣಕುಮಾರ ಸಜ್ಜನ, ಕಂದಾಯ ನಿರೀಕ್ಷಕ ರಜಾಸಾಬ್ ಕಂದಗಲ್, ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ ಅಶೋಕ ತಳಗೇರಿ, ಶಿವಶರಣಪ್ಪ ಮಾಳಳ್ಳಿಕರ್, ಮಲ್ಲಿಕಾರ್ಜುನ ಕರಡಕಲ್, ಶಿವಶರಣಪ್ಪ ವಾಡಿ, ಶರಣಪ್ಪ ನಗನೂರ, ಮಡಿವಾಳಪ್ಪ ಕಟ್ಟಿಮನಿ, ಧರ್ಮಣ್ಣ ಬಡಿಗೇರ,ಅಯ್ಯಣ್ಣ ಮಾಳಳಿಕರ್, ಮರೆಪ್ಪ ಮಾಳಳ್ಳಿಕರ್, ಅಂಬರೀಶ ಬೊಮ್ಮನಹಳ್ಳಿ, ಬಸವಣ್ಣಪ್ಪ ಮಾಳಳ್ಳಿಕರ್,ಲಕ್ಷ್ಮಣ್ ಬಸರಿಗಿಡ, ಪರಶುರಾಮ ಮಾಳಳ್ಳಿಕರ್, ಲಕ್ಷ್ಮಣ ಬಾವಿಮನಿ, ರವಿಕುಮಾರ ಯಮನೂರ, ಜಟ್ಟೆಪ್ಪ ಮುಷ್ಠಹಳ್ಳಿ, ಶಿವಪ್ಪ ಕಂಬಾರ, ಮಲ್ಲಿಕಾರ್ಜುನ ಕಟ್ಟಿಮನಿ, ಭೀಮಣ್ಣ ದೊಡ್ಡಮನಿ, ಸಿದ್ದರಾಮಯ್ಯ ಇಂಡಿ, ಮೌನೇಶ, ಭೀಮು ಮಾಳಿಕೇರಿ, ಪ್ರಕಾಶ್ ಮಾಳಳ್ಳಿಕರ್, ತಿಪ್ಪಣ್ಣ ಅಗ್ನಿ, ಬಾಲರಾಜ್ ಬಸರಿಗಿಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

