Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಆಮಂತ್ರಣವಿದ್ದ ಕಾರ್ಯಕ್ರಮದಲ್ಲಿ ಹೋಗಿ ಕುಳಿತಿರುವಾಗ, ನಡೆಯಲಾರದೆ ಊರುಗೋಲಿನ ಸಹಾಯದಿಂದ ನಡೆದು ಒಳಬಂದ ಮಹಿಳೆಯ ಕಡೆಗೆ ನನ್ನ ಕಣ್ಣು ಹರಿಯದೆ ಇರಲಿಲ್ಲ. ದೊಡ್ಡದೊಂದು ಮೈಸೂರು ಸಿಲ್ಕ್ ಸೀರೆ, ಅದಕ್ಕೊಪ್ಪುವ ಕುಪ್ಪಸ, ಕಾಸ್ಟ್ಲಿ ಪುಟಾಣಿ ಬ್ಯಾಗೂ, ದೊಡ್ಡದೊಂದು ಚಿನ್ನದ ಬಳೇ.. ಎಲ್ಲವೂ ಇದೆ. ಆದರೆ ಆಕೆಯ ದಡೂತಿ ದೇಹದ ಭಾರವನ್ನು ಆಕೆಯ ಕಾಲು ಭರಿಸಲಾಗುತ್ತಿಲ್ಲ. ‘ವಾಕಿಂಗ್ ಸ್ಟಿಕ್’ ಆಕೆಯ ಕಾಲಿನ ಸಂಗಾತಿಯಾಗಿ ನಡೆಸುತ್ತಿದೆ. ‘ಇಷ್ಟು ಚಿಕ್ಕ ಕಾರ್ಯಕ್ರಮಕ್ಕೆ ಇಷ್ಟೊಂದು ಆಡಂಬರ ಬೇಕಿತ್ತಾ? ಅನ್ನಿಸಿತು ನನಗೆ. ತಕ್ಷಣವೆ ‘ಹಣವಂತರು. ಪಾಪ! ಇರುವ ಹಣದ ಸದ್ವಿನಿಯೋಗ ಮಾಡಿಕೊಳ್ಳಲೇಬೇಕಲ್ಲಾ.. ಜೊತೆಗೆ ಪ್ರತಿಷ್ಠೆಯ ಪ್ರಶ್ನೆ ಬೇರೆ’ ಎಂದುಕೊಂಡವಳೇ ಸುಮ್ಮನಾದೆ. ವಿಷಯ ಅಷ್ಟೇ ಅಲ್ಲ. ಅದು ನಾ ಮೊದಲೇ ಯಾವಾಗಲೋ ನೋಡಿದ್ದ ಮುಖ.ಹೌದು ಇದು ಅದೇ ಮುಖ.ನಾ ಚಿಕ್ಕವಳಿದ್ದಾಗ ನೋಡಿದ್ದ ಮುಖ. ಬೀಗರ ಔತಣಕ್ಕೆ ಇನ್ವಿಟೇಶನ್ ಕೊಟ್ಟು ಕರೆದಿದ್ದರು. ಟೀಚರ್ ಆಗಿದ್ದ ಅಂಟಿಗೆ ರಜಾ ಇಲ್ಲದ ಕಾರಣ, ರಜೆಗೆಂದು ಅವರ ಮನೆಗೆ ಬಂದಿದ್ದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಆಂಗ್ಲ ಭಾಷಾ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನೆಯ ಮುಂದಿನ ಹೂದೋಟದಲ್ಲಿ ಶತಪಥ ಹಾಕುತ್ತ ಒಂಭತ್ತು ಗಂಟೆಗೆ ರ‍್ತಿನಿ ಅಂದವರು ಒಂಭತ್ತು ಹೊಡೆದು ಅರ್ಧ ತಾಸಾದರೂ ಇನ್ನೂ ಪತ್ತೆ ಇಲ್ಲ ಆಸಾಮಿ ನನ್ನ ಇವತ್ತಿನ ಮುಂದಿನ ಕೆಲಸ ಎಲ್ಲಾ ಉಲ್ಟಾ ಪಲ್ಟಾ ಆಗ್ತಾವ ಪೆಂಡಿಂಗ್ ಉಳಿತಾವ. ಟೈಂ ಸೆನ್ಸ್ ಇಲ್ಲ ಇವರಿಗೆ. ಇಂಥವರನ ನಂಬಿದರ ಉದ್ಧಾರ ಆದಂಗ ಎಂದು ಬಾರದೇ ಇರುವವರಿಗೆ ಸಹಸ್ರ ನಾಮಾರ್ಚನೆಯನ್ನು ವಟ ವಟಿಸುವಿಕೆಯಲ್ಲಿ ಸಲ್ಲಿಸುತ್ತ ನಮ್ಮ ಟೈಮ್‌ನ್ನು ಧಾರಾಳವಾಗಿ ಹಾಳು ಮಾಡೋದು ನಮಗೆ ಗೊತ್ತೇ ಆಗುವುದಿಲ್ಲ. ಬದುಕಿರುವವರೆಗೆ ಎಲ್ಲವನ್ನೂ ಗಳಿಸಬೇಕು ಅನುಭವಿಸಬೇಕು ಎನ್ನುವ ಹಟ ನಮ್ಮದು. ಸಾಯುವದಕ್ಕೆ ಮುನ್ನ ಒಂದೆರಡು ದೊಡ್ಡ ಬಂಗಲೆ. ಬಂಗಲೆ ಮುಂದೆ ಐದಾರು ಉದ್ದನೆಯ ಕಾರು ಬ್ಯಾಂಕ್‌ನಲ್ಲಿ ಬಿಗ್ ಬ್ಯಾಲನ್ಸ್ ಪದವಿ ಬಿರುದು ಸನ್ಮಾನ ಒಟ್ಟಿನೊಳಗೆ ನಮ್ಮ ಸಿರಿವಂತಿಕೆ ನಾಲ್ಕು ಜನರ ಬಾಂiÀiಲ್ಲಿರಬೇಕೆಂದು ಬೆಳಿಗ್ಗೆ ಬೇಗ ಎದ್ದು ರಾತ್ರಿ ಎಷ್ಟು ಹೊತ್ತಾದರೂ ಮನೆ ಸೇರುವುದಿಲ್ಲ. ಏನನ್ನೋ ಗಳಸ್ತಿವಿ ಅಂತ…
ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ತಿಂಗಳು ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಜೋರಾಗಿತ್ತು ಆದ್ರೆ ಈಗ ಕಾರ್ಖಾನೆಗಳೆಲ್ಲ ಬಂದಾಗಿ ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಬಂದಾಗಿದ್ದು ಸಧ್ಯ ಎಲ್ಲೆಡೆ ಜೋಳದ ಕಣಿಕೆ ಹೊತ್ತ ಟ್ರ್ಯಾಕ್ಟರ್‌ಗಳ ಓಡಾಟ ಹೆಚ್ಚಾಗಿದೆ. ಕಬ್ಬಿನ ಟ್ರ್ಯಾಕ್ಟರ್‌ಗಳು ಸಕ್ಕರೆ ಕಾರ್ಖಾನೆಗಳತ್ತ ಮುಖಮಾಡುತ್ತಿದ್ದವು, ಕಣಿಕೆ ಹೊತ್ತ ವಾಹನಗಳು ಒಣಬೇಸಾಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಹೋಗುತ್ತಿವೆ.ನೆರೆ ರಾಜ್ಯಕ್ಕೂ ಸಾಗಣೆ : ಬಾಗಲಕೋಟೆˌ ಹುನಗುಂದ, ಬಾದಾಮಿ ಮತ್ತು ವಿಜಯಪೂರ ಜಿಲ್ಲೆಯ ಬಹುತೇಕ ತಾಲೂಕುಗಳ ಭಾಗದಲ್ಲಿ ಬೆಳೆದ ಬಿಳಿಜೋಳದ ಕಣಿಕೆ ಬೀಳಗಿ, ಮುಧೋಳ ಮತ್ತು ಜಮಖಂಡಿ ತಾಲೂಕಿನ ಗ್ರಾಮಗಳಿಗೆ ಬರುತ್ತಿದೆ. ಅಷ್ಟಾದರೆ ಪರವಾಗಿಲ್ಲ. ಬಾಗಲಕೋಟೆ ಮತ್ತು ವಿಜಯಪೂರ ಜಿಲ್ಲೆಯ ಕಣಿಕೆ ಅಕ್ಕಪಕ್ಕದ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರಕ್ಕೂ ಸಾಗಣೆ ಆಗುತ್ತಿದೆ. ರಾಜ್ಯ ಹೆದ್ದಾರಿಗಳ ಮೇಲೆ ಕಣಿಕೆ ಸಾಗಣೆ ಜೋರಾಗಿದೆ. ಟ್ರ್ಯಾಕ್ಟರ್ ಟೇಲರ್ˌ ಲಾರಿˌ ಚಕ್ಕಡಿಯಲ್ಲೂ ಕಣಿಕೆ ಸಾಗಣೆ ದೃಶ್ಯ ಕಾಣಬಹುದಾಗಿದೆ.ಹೆಚ್ಚಿದ ಬೇಡಿಕೆ: ಬಾಗಲಕೋಟೆ ಜಿಲ್ಲೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಕಿವಿ, ಮೂಗು, ಗಂಟಲು ವಿಭಾಗದಿಂದ ಅಲರ್ಜಿ ಕ್ಷೇತ್ರದ ಹೊಸ ಒಳನೋಟಗಳು ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(CME) ಮತ್ತು ಕಾರ್ಯಾಗಾರ ಏಪ್ರಿಲ್ 4 ರಂದು ಶನಿವಾರ ನಡೆಯಲಿದೆ.ಬಿ.ಎಲ್.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ 2ನೇ ಮಹಡಿಯ ಮಿನಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಅಲರ್ಜಿ ತಜ್ಞೆ ಡಾ. ಗಾಯತ್ರಿ ಪಂಡಿತ, ಡಾ. ಶೃತಿ ಮಂಜುನಾಥ ಮತ್ತು ಹುಬ್ಬಳ್ಳಿ ಚಿಕ್ಕಮಕ್ಕಳ ತಜ್ಞ ಡಾ. ಬಾಹುಬಲಿ ಇಂಗಳೆ ಅವರು ಅಲರ್ಜಿ ಮತ್ತು ಇಮ್ಯುನಾಲಜಿ ಕ್ಷೇತ್ರದಲ್ಲಿನ ವಿನೂತನ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.ಅಲ್ಲದೇ, ಬಿ. ಎಲ್. ಡಿ. ಇ ಪಲ್ಮನಾಲಜಿಸ್ಟ್ ವಿಭಾಗದ ಡಾ. ಕೀರ್ತಿವರ್ಧನ ಕುಲಕರ್ಣಿ ಅವರು ಅಸ್ಥಮಾ ಕುರಿತು ಉಪನ್ಯಾಸ ನೀಡಲಿದ್ದಾರೆ.ಅಲರ್ಜಿ ಸಂಬಂಧಿತ ರೋಗಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ ಕುರಿತ ಮಾಹಿತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ನಂದು ಗಡಗಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೆಂದ್ರ ಅವರ ನಾಯಕತ್ವವನ್ನ ಒಪ್ಪಿಕೊಂಡು ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹಾಗೂ ವಿಜಯಪುರ ನಗರ ಮಂಡಲ ಅಧ್ಯಕ್ಷರಾದ ಸಂದೀಪ್ ಪಾಟೀಲ್ ಸಮ್ಮುಖದಲ್ಲಿ ಬಾಗಲಕೋಟೆ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದ ಹಿರಿಯ ನಾಯಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.ದೇಶದ ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ವಿಜಯೆಂದ್ರ ಅವರ ನಾಯಕತ್ವ ಹಾಗೂ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಬೆಳೆವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಂದು ಗಡಗಿ ತಿಳಿಸಿದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವಿಠ್ಠಲ ಮಂದಿರದಲ್ಲಿ ಚಿದಂಬರ ಸೇವಾ ಸಮಿತಿಯಿಂದ ಹನುಮಾನ ಜಯಂತಿಯನ್ನು ಭಕ್ತಿ ಭಾವದೊಂದಿಗೆ ಆಚರಿಸಲಾಯಿತು.ಬುಧವಾರ ಬೆಳಿಗ್ಗೆ ಹನುಮಾನ ಜಯಂತಿ ನಿಮಿತ್ಯ ಚಿದಂಬರ ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿ ವಿವಿಧ ಹೂವು, ಹಾರ, ತಳಿರು ತೋರಣಗಳಿಂದ ಸಿಂಗರಿಸಿ ಹನುಮಾನ ಜಯಂತಿಗೆ ಚಾಲನೆ ನೀಡಿದರು. ಶ್ರೀಪಾದಭಟ್ ಹಾಗೂ ಅಶೋಕಭಟ್ ಜೋಷಿ ನೇತೃತ್ವದಲ್ಲಿ ಪಂಚಾಮೃತದೊಂದಿಗೆ ಅಭಿಷೇಕಗೈದು, ಅಷ್ಟೋತ್ತರ ಸಹಿತ ಎಲ್ಲ ವಿಧಿವಿಧಾನಗಳನ್ನು ಶಾಸ್ತೋಕ್ತವಾಗಿ ನೆರವೇರಿಸಿ ಭಕ್ತಿ ಸಮರ್ಪಿಸಲಾಯಿತು. ತದನಂತರ ಮಹಿಳೆಯರೆಲ್ಲ ಸೇರಿ ಬಾಲ ಹನುಮನ ಕುರಿತಾದ ಭಕ್ತಿಗೀತೆಗಳ ಗಾಯನದ ಮೂಲಕ ತೊಟ್ಟಿಲೋತ್ಸವ ನೆರವೇರಿಸಿದರು. ನಂತರ ಅಭಿಷೇಕ, ಪಾನಕ, ಕೋಸಂಬರಿ ವಿತರಣೆ ಕಾರ್ಯಕ್ರಮ ಜರುಗಿತು. ಆನಂತರ ಬಂದ ಭಕ್ತಾದಿಗಳಿಗೆಲ್ಲ ಮಹಾಪ್ರಸಾದ ವಿತರಿಸಲಾಯಿತು.ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ, ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಪಾಂಡುರಂಗ ದೇಶಪಾಂಡೆ, ಚಿದಂಬರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರಮೋದ ನಾಡಗೌಡ, ಶರತ ನಾಡಗೌಡ, ದತ್ತಾತ್ರೇಯ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಆನಂದ ನಾಡಗೌಡ, ಶ್ರೀನಿವಾಸ ಪಾಟೀಲ, ಶ್ರೀಧರ ನಾಡಗೌಡ, ಸಹಿತ ಮಹಿಳೆಯರು, ಮಕ್ಕಳು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಕ್ಕಳಲ್ಲಿ ಯಾವುದೇ ರೀತಿಯ ಭೇದಭಾವ ಸಲ್ಲದು. ಮಕ್ಕಳಿಗೆ ಅಡಿಪಾಯದ ಶಿಕ್ಷಣ ಬಹಳ ಮುಖ್ಯ ಎಂದು ಉತ್ತರ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ್ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಮಂಗಳವಾರ ಅಂಗನವಾಡಿ ಮಕ್ಕಳ ಸಮ್ಮೇಳನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ಬುಧವಾರ ಸ್ನೇಹಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ. ನಮ್ಮೆಲ್ಲರಿಗೂ ಮಕ್ಕಳೇ ದೇವರು ಮಕ್ಕಳಿಗಾಗಿ ಅವರ ಶಿಕ್ಷಣಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಸಮುದಾಯದ ಸಹಕಾರ ಹಾಗೂ ಗ್ರಾಮದ ಸರ್ವರೂ ಕೂಡ ನಿಮ್ಮ ಜೊತೆಗಿರುತ್ತಾರೆ ಎಂದರು.ಸಾನಿಧ್ಯ ವಹಿಸಿದ ಮಂಜುನಾಥ ಹಿರೇಮಠ ಮಾತನಾಡಿ, ಪಾಲಕರು ಅಂಗನವಾಡಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ಒಳ್ಳೆಯ ಅಭಿಪ್ರಾಯ ಬೆಳೆಸಿಕೊಳ್ಳಬೇಕು. ಗ್ರಾಮದ ಶರಣಬಸು ಅಪ್ಪಾಸಾಹೇಬ ಬಸವರೆಡ್ಡಿ ಎಂಬುವರು ೨೦ ಲಕ್ಷ ರೂ. ಮೌಲ್ಯದ ಜಾಗವನ್ನು ಅಂಗನವಾಡಿ ಕಟ್ಟಡಕ್ಕೆ ಕೊಟ್ಟಿರುವುದು ಶ್ಲಾಘನೀಯ ಎಂದರು.ಸ್ನೇಹ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ ಮಾತನಾಡಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ ಎಂದರು.ಇದೇ ಸಂದರ್ಭದಲ್ಲಿ ಅಂಗನವಾಡಿ…
ನಿಗದಿತ ಸಮಯಕ್ಕೆ ಕಚೇರಿಯಲ್ಲಿರಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನೆಲೆಯಲ್ಲಿ ಏಪ್ರಿಲ್.೧ರಿಂದ ಜಿಲ್ಲೆಯಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆಯಾಗುತ್ತಿದ್ದಂತೆಯೇ, ಬುಧವಾರ ಬೆಳಗ್ಗೆಯೇ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ,ಅಧಿಕಾರಿ, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.ಕಚೇರಿ ಸಮಯ ಬದಲಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ವಿವಿಧ ಇಲಾಖೆಗಳ ಕಚೇರಿಗೆ ದಿಢೀರ್ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದರು. ಎಲ್ಲ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ದೈನಂದಿನ ಕಚೇರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಯಾವುದೇ ಸಿಬ್ಬಂದಿ ಯಾವುದೇ ಕಡತ:ವಹಿ ಬಾಕಿ ಉಳಿಸಿಕೊಳ್ಳದೇ ಕಾರ್ಯ ನಿರ್ವಹಿಸುವ ಮೂಲಕ ಕಡತಗಳನ್ನು ವಿಲೇವಾರಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.ಸಾರ್ವಜನಿಕರಿಗೆ ಸ್ಪಂದಿಸಿ: ತಮ್ಮ ಎಂದಿನ ಕೆಲಸ ಕಾರ್ಯಗಳಿಗೆ ಆಯಾ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿ ಬರುವ ಕಾಲುವೆ ಜಾಲಕ್ಕೆ ೨೦೨೫-೨೬ರ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಹರಿಸುವ ಅವಧಿಯನ್ನು ಏ.೧ ರಿಂದ ಏ.೭ರವರೆಗೆ ವಿಸ್ತರಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಮುಳವಾಡ ಏತ ನೀರಾವರಿ ಯೋಜನೆಯ ಟಕ್ಕಳಕಿ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.೨೦೨೫-೨೬ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿಯಲ್ಲಿ ಬರುವ ಹಂತ-೨ ರ ಪೂರ್ವ ಮತ್ತು ಪಶ್ಚಿಮ ಕಾಲುವೆ, ಸೊನ್ನ ಏತ ನೀರಾವರಿ, ರೊಳ್ಳಿ ಮನ್ನೀಕೇರಿ ಏತ ನೀರಾವರಿ ಮತ್ತು ತೆಗ್ಗಿ ಸಿದ್ದಾಪೂರ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಕ್ಕೆ ಹಿಂಗಾರು ಹಂಗಾಮಿಗೆ ದಿನಾಂಕ: ೦೨-೧೨-೨೦೨೫ ರಿಂದ ೦೩-೦೪-೨೦೨೬ ರವರೆಗೆ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ ಅನುಸರಿಸಿ ಒಟ್ಟು ೧೨೩ ದಿನಗಳವರೆಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ವಜ್ರ ಹನುಮಾನ ದೇವಸ್ಥಾನದ ಸೇವಾ ಸಮಿತಿ ಆಶ್ರಯದಲ್ಲಿ ಚೈತ್ರ ಮಾಸ ಪೂರ್ಣಿಮೆ ಪ್ರಯುಕ್ತ ಶ್ರೀ ಹನುಮಾನ ದೇವರ ಜಯಂತ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಪಾಂಡು ಸಾಹುಕಾರ ದೊಡ್ಡಮನಿ ತಿಳಿಸಿದ್ದಾರೆ.ಜಯಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ 4 ಗಂಟೆಗೆ ಮಂಗಳವಾದ್ಯಗಳೊಂದಿಗೆ ಶ್ರೀ ಹನುಮಾನ ದೇವರಿಗೆ ವಿಶೇಷ ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಲಾಗುತ್ತದೆ. ಬೆಳಿಗ್ಗೆ 6.22ಕ್ಕೆ ಶ್ರೀ ವಜ್ರ ಹನುಮಾನ್ ದೇವರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಂಗಳಾರತಿ ಹಾಗೂ ಆಶೀರ್ವಚನ ಕಾರ್ಯಕ್ರಮಗಳು ಜರುಗಲಿವೆ.ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಆವರಣದಲ್ಲಿ ಅನ್ನಪ್ರಸಾದ ಸೇವೆ ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
