ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಡಳೆ ಬೆಳೆಗೆ ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿ ಎ ಪಿ ಯನ್ನು ಡ್ರೋಣ ಮೂಲಕ ತಾಲೂಕಿನ ಅಥರ್ಗಾ ರೈತ ಸುನೀಲ ಪಾಟೀಲ ಇವರ ಹೊಲದಲ್ಲಿ ಸಿಂಪಡಣೆ ಮಾಡಲಾಯಿತು.
ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಡ್ರೋನಗಳನ್ನು ಹೆಚ್ಚಾಗಿ ಬೆಳೆಗಳಿಗೆ ಕೀಟನಾಶಕ ರಸ ಗೊಬ್ಬರ ಸಿಂಪಡಿಸಲು ಬಳಸಲಾಗುತ್ತಿದೆ. ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಎಂದರು.
ರೈತರು ಹೊಸ ಹೊಸ ತಂತ್ರಜ್ಞಾನ ಬಳಸಿ ಲಾಭ ಪಡೆದುಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಎನ್.ಎಂ.ಹಿಟ್ಟಿನಹಳ್ಳಿ, ಸಹಾಯಕ ಅಧಿಕಾರಿ ಮಂಜುನಾಥ ಘಂಟಿ, ಉಮೇಶ ಜೇರಟಗಿ, ಶ್ರೀಕಾಂತ ಭೋಸಗಿ, ರಾಕೇಶ ಗೌಡಗಾಂವಿ, ಸಚಿನ್ ಬಿರಾದಾರ, ಈಶ್ವರ ಜೇವೂರ ಮತ್ತಿತರಿದ್ದರು.

