ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿಗೆ ಸರಕಾರದ ಕೃಷಿ ಇಲಾಖೆಯಿಂದ ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಾಪಿಸದೆ ಇರುವುದು ಚಡಚಣ ತಾಲೂಕಿನ ರೈತರಲ್ಲಿ ಅಸಮಾಧಾನ ಉಂಟಾಗಿದೆ.
ಚಡಚಣ ತಾಲೂಕಿಗಿಲ್ಲ ಸರಕಾರದ ಸೌಲಭ್ಯ: ಮೊದಲೆ ಈ ವರ್ಷ ಅಕಾಲಿಕ ಹಸಿ ಮಳೆಗಾಲದಲ್ಲಿ ಮತ್ತು ಭೀಮಾನದಿಯ ಪ್ರವಾಹಕ್ಕೆ ರೈತರ ಹೊಲಗದ್ದೆಗಳು ಸಿಲುಕಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಎಲ್ಲ ಅಧಿಕಾರಿಗಳಿಗೆ ಗೊತ್ತಿದ್ದರೂ ಚಡಚಣ ತಾಲೂಕು ಇದೆ ಎಂಬುದನ್ನು ಮರೆತ ಜಿಲ್ಲಾಧಿಕಾರಿಗಳು ಹಾಗು ಕೃಷಿ ಜಂಟಿ ನಿರ್ದೇಶಕರು ಚಡಚಣ ತಾಲೂಕಿಗೆ ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಾಪಿಸದೆ ಇರುವ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
೨೦೨೫-೨೬ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಮೆಕ್ಕೆಜೋಳ ಖರೀದಿಸಲು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಹಾಗೂ ಸಿಂದಗಿ ತಾಲೂಕಿನ ತಾಲೂಕಾ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ.ನಿ (ಟಿಎಪಿಸಿಎಂಎಸ್) ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರಿಂದ ಚಡಚಣ ತಾಲೂಕಿನಲ್ಲಿ ಖರೀದಿ ಕೇಂದ್ರ ಇಲ್ಲದೆ ಇರುವದನ್ನು ಗಮನಿಸಿದ ರೈತರಲ್ಲಿ ಆತಂಕ ಉಂಟಾಗಿದೆ ಎಂದು ರೈತರೊಬ್ಬರು ಪತ್ರಿಕೆ ರೊಂಗಿಗೆ ಅಳಲು ತೋಡಿಕೊಂಡರು.
ಚಡಚಣ ರೈತ ಸಂಜೀವಕುಮಾರ ಕಾಮಗೋಂಡ ಮಾತನಾಡಿ, ಈ ವರ್ಷ ವಾಡಿಗೆಕಿಂತ ಅಪಾರ ಪ್ರಮಾಣದ ಮಳೆಯಾಗಿ ನಮ್ಮ ರೈತರ ಹೊಲದಲ್ಲಿ ಬೆಳೆದ ಬೆಳೆ ಬಹುತೇ ಸಂಪೂರ್ಣ ಹಾನಿಯಾಗಿದ್ದರು ಅಲ್ಪ ಸ್ವಲ್ಪ ಬಂದ ಮೆಕ್ಕೆಜೋಳ ಸರಕಾರ ಸೂಚಿಸಿದ ಇಂಡಿ ಅಥವಾ ಬೇರೆಡೆ ಇರುವ ವ್ಯಾಪಾರಸ್ಥ ಖರಿದಿದಾರರಿಗೆ ಮಾರಾಟ ಮಾಡಬೇಕೆಂದರೆ ಸುಮಾರು ಚಡಚಣದಿಂದ ೪೦ ಕಿ.ಮೀ ಮತ್ತು ನಮ್ಮ ಹೊಲಗದ್ದೆಗಳಿಂದ ಹೋಗಬೇಕಾದರೆ ಸುಮಾರು ೬೦ ಕಿ.ಮೀ ದೂರ ಹೋಗಬೇಕಾಗುತ್ತದೆ ಇದರಿಂದ ನಮ್ಮ ಕೈಯಲ್ಲಿ ದುಡ್ಡು ಬಂದರು ಕಡಿಮೆ ಉಳಿಯುತ್ತದೆ ಮೋದಲೆ ಬೆಳೆ ಹಾನಿಯಿಂದ ಕಂಗಾಲಾದ ರೈತ ಇನ್ನಷ್ಟು ಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಾದ ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ನಾಗಠಾಣ ಶಾಸಕರು ಮಧ್ಯಸ್ಥಿಕೆ ವಹಿಸಿ ಚಡಚಣ ಭಾಗದ ರೈತರಿಗೆ ಆಗುವ ಅನ್ಯಾಯವನ್ನು ಸರಿಪಡಿಸಿ ಕೂಡಲೆ ಚಡಚಣದಲ್ಲಿಯು ಮೆಕ್ಕೆ ಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ಕ್ರಮಕೈಗೋಳ್ಳಬೇಕೆಂದು ಚಡಚಣ ತಾಲೂಕಿನ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರನ್ನು ಪತ್ರಿಕೆ ಪ್ರತಿನಿಧಿ ಸಂಪರ್ಕಿಸಿದಾಗ ಶಾಸಕರು ಮಾತನಾಡಿ, ನಮ್ಮ ಚಡಚಣ ತಾಲೂಕಿನ ರೈತರು ಈ ವರ್ಷ ವಾಡಿಕೆಗಿಂತ ಅಪಾರ ಪ್ರಮಾಣದ ಮಳೆ ಉಂಟಾಗಿ ಅದರಲ್ಲಿ ಭೀಮಾನದಿ ಪಾತ್ರದಲ್ಲಿ ಬರುವ ಜಮೀನುಗಳು ರೈತರು ತಾವು ಬೇಳೆದ ಫಸಲು ನೀರು ಪಾಲಾಗಿ ಈಗಾಗಲೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಸುಮಾರು ೬೦ ಕಿ.ಮೀ ಅಂತರದಲ್ಲಿ ಖರೀದಿ ಕೇಂದ್ರ ಸ್ಥಪಿಸಿದ್ದು ಸಹಜವಾಗಿಯೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖರೀದಿ ಕೇಂದ್ರದ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ, ಆದ್ದರಿಂದ ಚಡಚಣ ರೈತರಿಗೆ ಇದರಿಂದ ಅನ್ಯಾಯವಾಗಲು ಬಿಡುವದಿಲ್ಲ, ಕೂಡಲೆ ನಾನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾದ ಜಂಟಿ ಕೃಷಿ ನಿರ್ದೇಶಕರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಚಡಚಣದಲ್ಲಿಯೂ ಸರಕಾರದ ಕೃಷಿ ಇಲಾಖೆಯಿಂದ ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಪಿಸದೆ ಬಿಡುವದಿಲ್ಲ ಎಂದು ಹೇಳಿದರು.

