ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಬರಿಮಲೆಯು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿಯು (ಮಣಿಕಂಠ) ಕೋಟ್ಯಾನುಕೋಟಿ ಭಕ್ತರ ಆರಾಧ್ಯ ದೈವನಾಗಿದ್ದಾನೆ. ಅಲ್ಲಿ ಬೆಳಗುವ ಮಕರ ಜ್ಯೋತಿಯ ದರ್ಶನ ಭಾಗ್ಯದಿಂದ ಭಕ್ತರು ಪುನೀತರಾಗುತ್ತಾರೆ. ಅಯ್ಯಪ್ಪ ಸ್ವಾಮಿಯ ಭಕ್ತರು ೪೧ ದಿನಗಳವರೆಗೆ ಕಠಿಣ ವ್ರತಾಚರಣೆ ಮಾಡುತ್ತಾ, ಸ್ವಾಮಿಯ ನಾಮಸ್ಮರಣೆಯ ಮೂಲಕ ಭಕ್ತಿ-ಭಾವವನ್ನು ತೋರ್ಪಡಿಸುತ್ತಾರೆ ಎಂದು ವಿಜಯಪುರದ ಗುರುಸ್ವಾಮಿ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ನವರಸಪುರದ ಏಕತಾ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಿ.೧೦ ರಂದು ರಂದು ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಮಹಪೂಜೆ ಕರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಮಣಿಕಂಠ (ಅಯ್ಯಪ್ಪ ಸ್ವಾಮಿ)ಯ ಅನುಗ್ರಹ ಪಡೆಯಲು ಮತ್ತು ಕರುಣಾಮೃತಕ್ಕೆ ಪಾತ್ರರಾಗಲು ಪವಿತ್ರವಾದ ೧೮ ಮೆಟ್ಟಿಲುಗಳನ್ನು ಹತ್ತಿ ಧನ್ಯತಾ ಭಾವ-ಭಕ್ತಿಯನ್ನು ಹೊಂದುತ್ತಾರೆ. ಪ್ರತಿಯೊಂದು ಮೆಟ್ಟಿಲು ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದ್ದು, ಮೊದಲ ಐದು ಮೆಟ್ಟಿಲುಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಈ ಎಲ್ಲ ಪಂಚೇಂದ್ರಿಗಳು ಸದಾ ದೇವರ ದರ್ಶನದಲ್ಲಿ ತೊಡಗುತ್ತಾ ಅಯ್ಯಪ್ಪ ಸ್ವಾಮಿಯ ಸ್ಮರಣೆ ಮತ್ತು ಧ್ಯಾನದಲ್ಲಿ ಮಗ್ನರಾಗಿರಬೇಕೆಂಬ ಸಂಕೇತವನ್ನು ಹೊಂದಿವೆ. ಅಂದರೆ ಎಲ್ಲರ ಬದುಕು ಕುಡ ಸದ್ವಿಚಾರದಲ್ಲಿ ತುಂಬಿರಬೇಕು. ನಂತರ ಎಂಟು ಮೆಟ್ಟಿಲುಗಳು ಅರಿಷಡ್ವರ್ಗಗಳ ನಿಗ್ರಹಕ್ಕೆ ಸಂಬಂಧಿಸಿವೆ ಮತ್ತು ಕೊನೆಯ ಮೂರು ಮೆಟ್ಟಿಲುಗಳು ಮನವ ಗುಣದ ಸಂಕೇತವಾದ ಒಳ್ಳೆಯತನ, ರಜಸ್ಸು ಮತ್ತು ತಮಸ್ಸು ಎಂಬ ಸಂಕೇತಗಳ ಪ್ರತೀಕವಾಗಿವೆ ಎಂದು ಹೇಳಿದರು.
ಈ ಮಹಾಪೂಜೆ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ಎಲ್ಲ ಅಯ್ಯಪ್ಪ ಸ್ವಾಮಿ ಹಿರಿಯ ಮತ್ತು ಕಿರಿಯ ಸ್ವಾಮಿಗಳು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸೇರಿದಂತೆ ೨೦೦ ಕ್ಕೂ ಸ್ವಾಮಿಗಳು ಭಾಗವಹಿಸಿದ್ದರು.
ಈ ಮಹಾಪೂಜಾ ಕಾರ್ಯಕ್ರಮದಲ್ಲಿ ಮಣಿಕಂಠನ ಮಹಾಪೂಜೆ, ೧೮ ಮೆಟ್ಟಿಲುಗಳ ವಿಶೇಷ ಪೂನೆ ಮತ್ತು ಭಜನೆ, ಧ್ಯಾನ ಮತ್ತು ದೈವಭಕ್ತಿ-ಭಾವದ ಮೂಲಕ ಮಣಿಕಂಠನ ಆರಾಧನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಅಣ್ಣಾಸಾಹೇಬ ಸಂಖ, ನಿವೃತ್ತ ಪೋಲಿಸ ಅಧಿಕಾರಿ ಬಿ.ಡಿ.ಮಜ್ಜಿಗಿ, ಎಸ್,ಬಿ.ದೊಡಮನಿ, ಸುರೇಶ ಹಲಕುಡೆ, ನಿಂಗಪ್ಪ ನಿಂಬಾಳಕರ,
ಪ್ರೊ. ಎಂ.ಎಸ್.ಖೊದ್ನಾಪೂರ, ಬಸವರಾಜ ಕನ್ನೂರ, ಶ್ರೀಶೈಲ ಕಿಚಡಿ, ನ್ಯಾಯವಾದಿ ಪ್ರಭಾಕರ ಕೂಚಬಾಳ, ರಾಮಚಂದ್ರ ಜೋಶಿ, ರಿತೇಶ ಕನಮಡಿ, ಎಸ್.ಎಸ್.ಹಳ್ಳೂರ, ಶೋಭಾ ಚವ್ಹಾಣ, ಎನ್.ಎಸ್.ಕ್ಷತ್ರಿ, ಎಸ್.ಎ.ಅಂಗಡಿ, ಇನ್ನಿತರರು ಸಹ ಉಪಸ್ಥಿತರಿದ್ದರು. ನವರಸಪುರ ಬಡಾವಣೆಯ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

