Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

೫ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ

ಮಣ್ಣು ವಿಜ್ಞಾನದ ಜ್ಞಾನ ದಾಸೋಹ ನಿರಂತರವಾಗಿರಲಿ :ಶರಣಗೌಡ

ಚನ್ನಬಸವಶ್ರೀಗಳ ವಚನಶಿಲಾ ಮಂಟಪ ಕೊಡುಗೆ ಸದಾ ಸ್ಮರಣೀಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂಗಳೇಶ್ವರ ವಚನಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀ ಲಿಂಗೈಕ್ಯ
(ರಾಜ್ಯ ) ಜಿಲ್ಲೆ

ಇಂಗಳೇಶ್ವರ ವಚನಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀ ಲಿಂಗೈಕ್ಯ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ,ಡಿ.10
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತ ಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ (93) ಗುರುವಾರ ಲಿಂಗೈಕ್ಯರಾದರು. ಪೂಜ್ಯರ ಅಂತಿಮ ವಿಧಿವಿದಾನ ಡಿ.11 ರಂದು ಇಂಗಳೇಶ್ವರ ವಿರಕ್ತಮಠದ ಆವರಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಡಾ. ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.
ಪಾದಯಾತ್ರೆ ಮೂಲಕವೇ ಇಡೀ ಭರತಖಂಡ ಸುತ್ತಿ ನಡೆದಾಡುವ ಬಸವೇಶ್ವರ ಎಂದೇ ಖ್ಯಾತರಾಗಿದ್ದ ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃಗಳೂ ಆಗಿದ್ದ ವಿರಕ್ತಮಠದ ಪೀಠಾಧಿಪತಿ ಚನಬಸವ ಶ್ರೀಗಳು ಅಪಾರ ಭಕ್ತಸಮೂಹ ಹೊಂದಿದ್ದಾರೆ. ಇವರ ಲಿಂಗೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಗಳ ಅಂತಿಮ ದರ್ಶನಕ್ಕಾಗಿ
ವಿವಿಧೆಡೆಗಳಿಂದ ಇಂಗಳೇಶ್ವರ ಕಡೆಗೆ ಧಾವಿಸುತ್ತಿದ್ದಾರೆ.
1932 ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹುಚ್ಚಮ್ಮ ಹಾಗೂ ವೀರಯ್ಯ ಎಂಬ ಪುಣ್ಯ ದಂಪತಿಗಳ ಉದರದಲ್ಲಿ ಚನ್ನಬಸವ ಶ್ರೀಗಳು ಜನಿಸಿದ್ದರು.
ಬಾಗಲಕೋಟೆಯ ಟೀಕಿನಮಠ ಹಾಗೂ ಧಾರವಾಡ ಮುರುಘಾ ಮಠದಲ್ಲಿ ಗುರುಕುಲ ಪದ್ಧತಿಯಲ್ಲಿ ಮೃತ್ಯುಂಜಯ ಶ್ರೀಗಳ ಸೇವೆಯೊಂದಿಗೆ ಸಂಸ್ಕೃತದಲ್ಲಿ ಶಿಕ್ಷಣ ಪಡೆದು, ಭಾಷಾ ಪಾಂಡಿತ್ಯ ಪಡೆದಿದ್ದರು.
ಈ ಹಂತದಲ್ಲೇ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಶೋದದಲ್ಲಿದ್ದಾಗ ಚನ್ನಬಸವ ಶ್ರೀಗಳು ಕಣ್ಣಿಗೆ ಬೀಳುತ್ತಾರೆ.
ಚನ್ನಬಸವ ಶ್ರೀಗಳಲ್ಲಿನ ವಿದ್ವತ್ಪೂರ್ಣ ಜ್ಞಾನ, ವಿಶೇಷವಾಗಿ ಬಸವಾದಿ ಶರಣರ ವಚನಗಳ ವಿಶ್ಲೇಷಣೆ, ಬಸವ ಸಿದ್ಧಾಂತದಲ್ಲಿನ ಬದ್ಧತೆ, ಶರಣ ಪರಂಪರೆಯ ಪ್ರಸಾರದ ಕಟಿಬದ್ಧತೆ ಅರಿತ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಚನ್ನಬಸವ ಶ್ರೀಗಳೇ ಎಂದು ನಿರ್ಧರಿಸುತ್ತಾರೆ.
ಪರಿಣಾಮ ತಮ್ಮ ಅಂತರಂಗದ ಶ್ರೀಗಳೊಂದಿಗೆ ಚರ್ಚಿಸಿ,1948 ರಲ್ಲಿ ಪೀಠಾಧಿಕಾರಿಯಾಗಿ ನಿಯೋಜಿಸುತ್ತಾರೆ. ಬಳಿಕ ಮುದ್ದೇಬಿಹಾಳದ ಖಾಸ್ಗತೇಶ್ವರ ಮಠದ ಗುರುಗಳಿಂದ ತಮ್ಮ 16ನೇ ವಯಸ್ಸಿನಲ್ಲಿ ಪಟ್ಟಾಧಿಕಾರದ ದೀಕ್ಷೆ ಪಡೆಯುತ್ತಾರೆ.
ದೀಕ್ಷೆಯ ಬಳಿಕ ತಮ್ಮ ಗುರುಗಳ ಆಶಯದಂತೆ ಬಸವತತ್ವ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡ ಶ್ರೀಗಳು ಇಂಗಳೇಶ್ವರ ವಿರಕ್ತ ಶ್ರೀ ಮಠದಲ್ಲಿ ಸಜ್ಜಕ-ತುಪ್ಪದ‌ ನಿತ್ಯ ದಾಸೋಹಕ್ಕೆ ಚಾಲನೆ ನೀಡಿದ್ದು, ಇಂದಿಗೂ ಮುಂದುವರೆದಿದೆ.
ಸಂಚಾರಿ ಬಸವ: ದೀಕ್ಷೆಯ ಬಳಿಕ ಮಠದಲ್ಲಿ ಕುಳಿತುಕೊಳ್ಳದ ಚನ್ನಬಸವ ಶ್ರೀಗಳು, ಬಸವ ತತ್ವ ಪ್ರಸಾರಕ್ಕಾಗಿ ಪಾದಯಾತ್ರೆಯ ಮೂಲಕ ಅಖಂಡ ಭಾರತವನ್ನು ಸುತ್ತಲು ಆರಂಭಿಸುತ್ತಾರೆ.
ಪೀಠಾಧಿಪತಿಗಳಾದ ಮೂರೇ ವರ್ಷಕ್ಕೆ ಅಂದರೆ 1951 ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗಳೇಶ್ವರ ಗ್ರಾಮದಿಂದ ಅಥಣಿಗೆ ಪಾದಯಾತ್ರೆ ಆರಂಭಿಸಿದ್ದ ಶ್ರೀಗಳು, 2018 ರಲ್ಲಿ ಎರಡನೇ ಬಾರಿಗೆ ಸಿದ್ಧಲಿಂಗೇಶ್ವರರ ಪುಣ್ಯಕ್ಷೇತ್ರವಾದ ಯಡಿಯೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಸುದೀರ್ಘ ಸುಮಾರು ಏಳು ದಶಕಗಳ ಅವಧಿಯಲ್ಲಿ 37 ಬಾರಿ ಭಾರತದ ವಿವಿಧ ಧರ್ಮ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿದ್ದರು.
ಇದಲ್ಲದೇ ವಚನ ಸಂರಕ್ಷಕ ಧೀರ ಶರಣ ಚನ್ನಬಸವಣ್ಣನ‌ ಜನ್ಮಭೂಮಿ ಇಂಗಳೇಶ್ವರ ಕ್ಷೇತ್ರದಿಂದ ಐಕ್ಯಸ್ಥಳವಾದ ಉಳುವಿ ಕ್ಷೇತ್ರದ ವರೆಗೆ 32 ವರ್ಷಗಳ ವರೆಗೆ ಸತತವಾಗಿ ಪಾದಯಾತ್ರೆ ನಡೆಸಿದ್ದರು.
ಭಾರತದಾದ್ಯಂತ ಬಸವ ತತ್ವ ಬಿತ್ತುವುದುಕ್ಕಾಗಿ ವಾರಣಾಸಿಯ ವಿಶ್ವನಾಥ, ಕೇದಾರನಾಥ, ರಾಮೇಶ್ವರ ಸೇರಿದಂತೆ ನೂರಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ದರ್ಶಿಸಿದ್ದರು.
ಈ ಅವಧಿಯಲ್ಲಿ ಕೇದಾರನಾಥ ಪಾದಯಾತ್ರೆ ಮುಗಿಸಿ ಮರಳುವಾಗ ಋಷಿಕೇಶದ ಪಾರಮಾರ್ಥ ಆಶ್ರಮದಲ್ಲಿ ತಂಗಿದ್ದರು. ಆಶ್ತಮದ ಗೋಡೆಗಳ ಮೇಲೆ ಭಗವದ್ಗೀತೆಯ ಸಾರವನ್ನು ವಿಸ್ತಾರವಾಗಿ ಬರೆದುದದನ್ನು ಗಮನಿಸಿದ ಶ್ರೀಗಳು ಬಸವಾದಿ ಶರಣರ ವಚನಗಳನ್ನು ಇದೇ ಮಾದರಿಯನ್ನು ರೂಪಿಸಲು ಯೋಚಿಸಿದ್ದರು.
ಇಂಗಳೇಶ್ವರ ಮಠಕ್ಕೆ ಮರಳುವ ಹಂತದಲ್ಲಿ ಶ್ರೀಗಳ ಮನದಲ್ಲಿ ಮಂಕಾಗಿ, ಅಳಿಸಿಹೋಗುವ ಗೋಡೆ ಬರಹದ ಬದಲಾಗಿ ಸುಲಭವಾಗಿ ಅಳಿಸಲಾಗದ ಶಿಲೆಗಳಲ್ಲಿ ಅದರಲ್ಲೂ ಪ್ರತಿಬಿಂಬಿ ಶಿಲೆಗಳಲ್ಲಿ ವಚನಗಳನ್ನು ಕೆತ್ತಿಸಿ, ಅದರಿಂದಲೇ ಮಂಟಪ ನಿರ್ಮಿಸಲು ಮುಂದಾದರು.
ಐತಿಹಾಸಿಕ ಅರ್ಧ ಶತಮಾನ
ವಚನ ಶಿಲಾ ಮಂಟಪ ನಿರ್ಮಾಣದ ದಿಟ್ಟ ಸಂಕಲ್ಪ ಮಾಡಿದ ಚನ್ನಬಸವ ಶ್ರೀಗಳು,1972 ರಲ್ಲಿ ವಚನಶಿಲಾ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇಸಿದ್ದರು.
ಜಗದ್ವಿಖ್ಯಾತಿ ಪಡೆಯಲಿರುವ ವಚನಶಿಲಾ ಮಂಟಪದ ಐತಿಹಾಸಿಕ ದೂರಗಾಮಿ ಯೋಜನೆ ಅನುಷ್ಠಾನಕ್ಕಾಗಿ ಜೋಳಿಗೆ ಹಿಡಿದ ಶ್ರೀಗಳಿಗೆ ಆರಂಭದಲ್ಲಿ ಉತ್ತಮ ಸ್ಪಂದನೆ ಸಿಗಲಿಲ್ಲ. ಆದರೆ ಬಸವೇಶ್ವರರ ಇಚ್ಛಾಶಕ್ತಿ, ಚನ್ನಬಸಣ್ಣನ ಧೀರತನ ಸೇರಿದಂತೆ ಬಸವಾದಿ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಚನ್ನಬಸವ ಶ್ರೀಗಳು ಅಧೀರರಾಗದೇ ಸುದೀರ್ಘ ಅರ್ಧ ಶತಮಾನದ ಪರಿಶ್ರಮದಿಂದ ತಮ್ಮ ಪರಿಕಲ್ಪನೆಯ ವಚನ ಶಿಲಾ ಮಂಟಪ ನಿರ್ಮಿಸಿಯೇ ದೈಹಿಕವಾಗಿ ನಿಗರ್ಮಿಸಿದ್ದಾರೆ.
ಪೂರ್ಣಗೊಂಡಿದ್ದ ವಚನ ಶಿಲಾಮಂಟಪವನ್ನು ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರಿಂದ ಲೋಕಾರ್ಪಣೆ ಗೊಳಿಸಬೇಕೆಂಬ ಹಂಬಲವಿತ್ತು. ಹಲವು ಕಾರಣಗಳಿಂದ ಸಾಧ್ಯವಾಗದಿದ್ದಾಗ, ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರಿಂದ 2022 ರಲ್ಲಿ ಲೋಕಾರ್ಪಣೆ ಆಗಿತ್ತು.
ಷಟ್ ಕೋನದಲ್ಲಿ 1700 ವಚನಗಳ ಶಿಲಾ ಮಂಟಪ
ಇಂಗಳೇಶ್ವರದಲ್ಲಿ ಷಟ್ ಕೋನಗಳಲ್ಲಿ ನಿರ್ಮಾಣಗೊಂಡದ್ದು, ವಚನ ಶಿಲಾ ಮಂಟಪ 1700 ವಚನಗಳನ್ನು ಶಿಲೆಗಳಲ್ಲಿ ಕೆತ್ತಿ ರೂಪಿಸಲಾಗಿದೆ.
ಇದರಲ್ಲಿ ಬಸವೇಶ್ವರರು ರಚಿಸಿದ 1300 ವಚನಗಳನ್ನು ಕೆತ್ತಲಾಗಿದೆ. ಉಳಿದಂತೆ ಚೆನ್ನಬಸವಣ್ಣ, ಅಲ್ಲಮ ಪ್ರಭುದೇವರು, ಸಿದ್ದರಾಮೇಶ್ವರರು ಹಾಗೂ ಅಕ್ಕಮಹಾದೇವಿ ಇವರ ವಚನಗಳನ್ನು ಕೆತ್ತಲಾಗಿದೆ.
ಚನ್ನಬಸವಣ್ಣನವರ ಕರಣ ಹಸಿಗೆ ಗ್ರಂಥವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ರಾಜ್ಯದ ಕೆಲವೇ ಮಠಾಧೀಶರಲ್ಲಿ ಇವರು ಪ್ರಮುಖರಾಗಿದ್ದರು. ಚಾಮರಸನ ಪ್ರಭುಲಿಂಗ ಲೀಲೆ ಗ್ರಂಥವನ್ನು ಕರಗತ ಮಾಡಿಕೊಂಡಿದ್ದರು. ಅಲ್ಲಮಪ್ರಭುಗಳ ವಚನಗಳು ವಿಶ್ಲೇಷಣೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಡಿನ ಖ್ಯಾತ ಸಾಹಿತಿ ಡಾ.ಸೋಮನಾಥ ಯಳವಾರ ಅವರ ಸಂಪಾದಕತ್ವದಲ್ಲಿ ನಿರಂಜನ ಜ್ಯೋತಿ ಎನ್ನುವ ಅಭಿನಂದನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

೫ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ

ಮಣ್ಣು ವಿಜ್ಞಾನದ ಜ್ಞಾನ ದಾಸೋಹ ನಿರಂತರವಾಗಿರಲಿ :ಶರಣಗೌಡ

ಚನ್ನಬಸವಶ್ರೀಗಳ ವಚನಶಿಲಾ ಮಂಟಪ ಕೊಡುಗೆ ಸದಾ ಸ್ಮರಣೀಯ

ಸಾರಿಗೆ ನಿಗಮದಿಂದಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ವಿಶೇಷ ಸಾರಿಗೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ೫ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ
    In (ರಾಜ್ಯ ) ಜಿಲ್ಲೆ
  • ಮಣ್ಣು ವಿಜ್ಞಾನದ ಜ್ಞಾನ ದಾಸೋಹ ನಿರಂತರವಾಗಿರಲಿ :ಶರಣಗೌಡ
    In (ರಾಜ್ಯ ) ಜಿಲ್ಲೆ
  • ಚನ್ನಬಸವಶ್ರೀಗಳ ವಚನಶಿಲಾ ಮಂಟಪ ಕೊಡುಗೆ ಸದಾ ಸ್ಮರಣೀಯ
    In (ರಾಜ್ಯ ) ಜಿಲ್ಲೆ
  • ಸಾರಿಗೆ ನಿಗಮದಿಂದಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ವಿಶೇಷ ಸಾರಿಗೆ
    In (ರಾಜ್ಯ ) ಜಿಲ್ಲೆ
  • ಬೀದಿನಾಯಿಗಳ ದತ್ತು ಪಡೆಯಲು ಅವಕಾಶ
    In (ರಾಜ್ಯ ) ಜಿಲ್ಲೆ
  • ಬೀದಿನಾಯಿಗಳ ಹಾವಳಿ: ಸಹಾಯವಾಣಿ ಸ್ಥಾಪನೆ
    In (ರಾಜ್ಯ ) ಜಿಲ್ಲೆ
  • ಪಪಂ ಮುಖ್ಯಾಧಿಕಾರಿ & ಅಧ್ಯಕ್ಷರಿಂದ ಸರ್ವಾಧಿಕಾರ ಧೋರಣೆ
    In (ರಾಜ್ಯ ) ಜಿಲ್ಲೆ
  • ಕಡಲೆ ಬೆಳೆಗೆ ಡ್ರೋಣ ಮೂಲಕ ಔಷದ ಸಿಂಪಡನೆ
    In (ರಾಜ್ಯ ) ಜಿಲ್ಲೆ
  • ಮಹಾರಾಷ್ಟ್ರದಿಂದ ನೀರು ಬಿಡದೇ ಅನ್ಯಾಯ :ಸರಕಾರ ನಿರ್ಲಕ್ಷ್ಯ
    In (ರಾಜ್ಯ ) ಜಿಲ್ಲೆ
  • ಶ್ರೀಗಳು ತೋರಿದ ಮಾರ್ಗ ಸೂರ್ಯ ಚಂದ್ರ ಇರುವರೆಗೂ ಚಿರಸ್ಥಾಯಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.