ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜನಾಗ್ರಹ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶವು ದಲಿತರ ಭೂಮಿ, ವಸತಿ, ಬ್ಯಾಕ್‌ಲಾಗ್ ಉದ್ಯೋಗ ನೇಮಕಾತಿ, ವಿಶೇಷ ಘಟಕ ಯೋಜನೆ ಏಕಗವಾಕ್ಷಿ ನೀತಿಗಾಗಿ ಹಕ್ಕೊತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜುಲೈ 3 ರಂದು ಬೃಹತ್ ಸಮಾವೇಶ ನಡೆಯಲಿದೆ. ಎಂದು ಬೆಳಗಾವ ವಿಭಾಗ ಸಂಚಾಲಕ ಸಂಜು ಕೆಂಬಾವಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಲಮೇಲ ತಾಲೂಕಿನ ನೂತನ ಸಂಘಟನೆ ಪ್ರಾರಂಭಿಸಿ, ಪದಾದಿಕಾರಿಗಳ ನೇಮಕ ಮಾಡಿ, ನಂತರ ಜುಲೈ 3 ರಂದು ನಡೆಯುವ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ರಾಜ್ಯ ಸರ್ಕಾರ ದಲಿತರ ಅಭಿವೃದ್ಧಿಗೆ ಮಿಸಲಿರುವ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಹಣವನ್ನು ಗ್ಯಾರೇಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದು ಇದನ್ನು ವಿರೋಧಿ ಸರ್ಕಾರಕ್ಕೆ ಮನವರಿಕೆ ಮಾಡಿ ದಲಿತರಿಗೆ ಮಿಸಾಲಿರುವ ಹಣವನ್ನು ದಲಿತರಿಗಾಗಿಗೆಯೇ ಬಳಕೆ ಮಾಡುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಹಾಕ್ಕೋತ್ತಾಯ ಮಂಡಿಸಲಿದ್ದೇವೆ ಎಂದು ಹೇಳಿದರು.
ದಲಿತ ಮುಖಂಡರಾದ ದತ್ತಾತ್ರೆಯ ಆಲಮೇಲ್ಕರ, ಸಂತೋಷ ಬಾಸ್ಕರ, ಶಿವು ಮೇಲಿ ಮನಿ, ಶಶಿಧರ ನಾಯಕೋಡಿ, ನವಿನ ವಗ್ಗಿ, ಸಂಜು ಇಟಗಾರ, ಬಸೀರ ತಾಂಬೋಳಿ, ಸಾಯಬಣ್ಣ ದಳಪತಿ, ಸುರೇಶ ನಾಟೀಕಾರ, ರಾಜು ಮೇತ್ರಿ ಸೇರಿದಂತೆ ಅನೇಕರು ಇದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಸಂಘಟನೆಯ ನೂತನ ಪದಾಧಿಕಾರಿಗಳು ಪ್ರಧಾನ ಸಂಚಾಲಕ ಶಶಿಧರ ನಾಯ್ಯೋಡಿ, ಸಂಘಟನಾ ಸಂಚಾಲಕ ಸಂಜು ಇಟಗಾರ, ಸದಸ್ಯರಾಗಿ ಹುಚ್ಚಪ್ಪ ಸೀಮಗೆ, ಪುಂಡಲಿಕ ಗುಂದಗಿ, ಸುರೇಶ ನಾಟೀಕರ, ಮಾದವರಾವ ಕಡಣಿ, ದಾವಲಮಲಿಕ ದೇವರಮನಿ, ಖಾಜು ಐರೋಡಗಿ ರಾಜು ಸಿಂಗೆ, ಅಲ್ಪ ಸಂಖ್ಯಾತರ ಘಟಕದ ಬಸೀರ ತಾಂಬೋಳಿ, ಆಲಮೇಲ ನಗರ ಘಟಕದಿಂದ ರಾಜು ಮೇತ್ರಿ, ಶರಣು ಬಿಳಂಬಗಿ, ಪ್ರಕಾಶ ಬ್ಯಾಕೋಡ ಇವರನ್ನು ನೇಮಕ ಮಾಡಲಾಯಿತು.

