Author: editor.udayarashmi@gmail.com

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ವಿನೂತನವಾಗಿ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಪಟ್ಟಣದ ತಾಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗ್ರತಿ ವಿನೂತನವಾಗಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರಿಗೆ ಮತದಾನದ ಮಹತ್ವ ತಿಳಿಸಲು ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಪ್ರಾಚಾರ್ಯ ಡಾ ಎಸ್ ಬಿ ರಾಠೋಡ ಮಾತನಾಡಿ, ಮತದಾನ ಸಂವಿಧಾನ ನೀಡಿರುವ ಹಕ್ಕು ಮತ್ತು ವರ, ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.ತಾ.ಪಂ. ಯೋಜನಾಧಿಕಾರಿ ಶಿವದತ್ತ ಕೊಟ್ಟಲಗಿ ಮಾತನಾಡಿ, ಏ. 11 ರ ವರೆಗೆ ಚುನಾವಣೆ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರ ಹೆಸರು ಸೇರಿಸಲು ಅವಕಾಶ ನೀಡಿದೆ, ಎಲ್ಲರೂ ಹೆಸರು ನೋಂದಾ ಯಿಸಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಅತಿಹೆಚ್ಚು ಮತದಾನಮಾಡಲು…

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರ ಬಡಾವಣೆಯ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ ಬಾಪುಗೌಡ ಪೀರಾಪೂರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ನ್ನು ಸೇರ್ಪಡೆಗೊಂಡರು.ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಿರಿಯ ಮುಖಂಡ ಎಂ.ಬಿ.ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಸುರೇಶಗೌಡ ಪಾಟೀಲ, ರುದ್ರುಗೌಡ ಅಂಗಡಗೇರಿ, ಸಂಗನಗೌಡ ಬಿರಾದಾರ, ಸೇರಿದಂತೆ ಹಲವರು ಇದ್ದರು.

Read More

ಸುರಗಂಗೆ ಸುರಿದ್ಹಂಗೆಗೆ ನನ್ನವಳ ನಗುವು|ಕೋಲ್ಮಿಂಚು ಹೊಳೆದಂಗೆ ಬಾನಗಲವೂ|| ಗೋಧೂಳಿ ಸಮಯದಾ ಕೆಂಧೂಳಿನಾ ಕೆಂಪು|ಮೊಗವೆತ್ತಿ ತನ್ಮಯದಿ ನಾ ರಮಿಸಲು||ಕಂಪಿಸುವ ಅಧರಗಳು ಬಿರಿದ ಕುಸುಮದ ದಳವು|ಭೂಮಿ ತೂಕದ ಹೆಣ್ಣು ಪಾರಿಜಾತೆ||||ಸುರಗಂಗೆ|| ತಿದ್ದಿ ತೀಡಿಹ ಹುಬ್ಬು ಬಣ್ಣಿಸಲಿ ನಾನೆಂತು|ಮನ್ಮಥನು ಹಿಡಿದಿರುವ ಇಂದ್ರಚಾಪ||ವೈದೇಹಿ ಗುಣದವಳ ವಾರಿಧಿಯ ಮನದವಳ|ಕೈಹಿಡಿದ ನನಗಿನ್ನು ಇಲ್ಲ ತಾಪ||||ಸುರಗಂಗೆ|| ಕರುವ ಕೊರಳಿನ ಗೆಜ್ಜೆ ಅವಳ ಕಾಲಿನ ಗೆಜ್ಜೆ|ನನ್ನೆದೆಯು ಮುದಗೊಂಡು ಘಲ್ಲೆನುವುದು||ಮನವು ಒಲವಿನ ಇಳೆ ಕೈತುಂಬ ಹಸಿರು ಬಳೆ |ಸೋತ ಬದುಕಲಿ ಎದ್ದು ಗೆಲ್ಲೆನುವುದು||||ಸುರಗಂಗೆ||

Read More

“ಉದ್ಯೋಗo ಪುರುಷ ಲಕ್ಷಣಂ” ಎಂಬ ಮಾತು ಇತ್ತು.ಉದ್ಯೋಗ ಅನ್ನುವುದು ಪುರುಷರಿಗಾಗಿ ಅನ್ನುವ ಒಂದು ಕಾಲವಿತ್ತು. “ಗೃಹಿಣಿ ಗೃಹಮುಚ್ಯತೆ” ಎಂದು ಹೆಣ್ಣು ಮನೆ ಒಳಗೆ , ಪುರುಷರು ಹೊರಗೆ ದುಡಿದು ತರೋದು,ಹೆಣ್ಣು ಅಡುಗೆ ಮನೆಗೆ ಸೀಮಿತವಾಗಿ, ಮಕ್ಕಳನ್ನು ಹೆರುವ ಯಂತ್ರವಾಗಿ, ಅವರನ್ನು ಸಾಕುವುದರಲ್ಲೆ ಜೀವನ ಕಳೆದು ಹೋಗುತ್ತಾ ಇತ್ತು. ಆದರೆ, ಆಗಿನ ಕಾಲದಲ್ಲಿ, ಕೂಡ, ರೈತ ಮಹಿಳೆಯರು, ಹೊಲದಲ್ಲಿ ದುಡಿಯುವುದು, ಮನೆ ಗೆಲಸಕ್ಕೆ ಹೋಗುವುದು ಕೂಡ ಇತ್ತು. ಕಾರಣ ಆರ್ಥಿಕವಾಗಿ ಹಿಂದುಳಿತ. ಆಗಲೂ, ಇಬ್ಬರೂ , ದುಡಿಯುತ್ತಾ ಇದ್ದರು. ಸಂಸಾರದ ನೊಗ ಹೊರಲು. ಜೊತೆಗೆ, ಎಷ್ಟೋ ಹೆಣ್ಣುಮಕ್ಕಳು, ಕೂಡ, ಗಂಡನನ್ನು ಕಳೆದುಕೊಂಡವರು, ಅಡುಗೆ ಕೆಲಸಕ್ಕೆ ಹೋಗುವುದು, ಹಪ್ಪಳ ಸಂಡಿಗೆ,ಉಪ್ಪಿನಕಾಯಿ, ಪುಡಿಗಳನ್ನು, ಮನೆಯಲ್ಲೇ ಮಾಡಿ, ಮಾರಾಟ ಮಾಡುತ್ತಾ ಸಂಸಾರ ಸಾಗಿಸುತ್ತ ಇದ್ದರು. ಆಗೆಲ್ಲ ಎರಡನೇ ಮದುವೆಗೆ ಅವಕಾಶ ಕೂಡ ಇರಲಿಲ್ಲ. ಅಪ್ಪ ಅಮ್ಮ ಎರಡು ಆಗಿ ಮಕ್ಕಳನ್ನು ಸಾಕಿ ಬೆಳೆಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ.ಆಗಲೂ ಕೆಲವು ಮನೆಗಳಲ್ಲಿ ಹೆಣ್ಣು ಮಗುವನ್ನು ಓದಿಸಿ…

Read More

ಮಹಾನಗರ ಪಾಲಿಕೆ ಮತ್ತು ವಿಡಿಎ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ವಿಜಯಪುರ: ಮಹಾನಗರ ಪಾಲಿಕೆ ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದು ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ವಿಚಾರಣೆಗಾಗಿ ಏ.೨೭ರಂದು ಹಾಜರಾಗಲು ನೋಟೀಸ್ ಬಂದಿವೆ ಎಂದು ನಗರದ ಆರ್‌ಟಿಐ ಕಾರ್ಯಕರ್ತ ಸನ್ನಿ ಊರ್ಪ್ ತ್ರಿಲೋಚನ ಗವಿಮಠ ತಿಳಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಅವರು ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.ವಿಜಯಪುರ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಲೆಕ್ಕ ತನಿಖಾ ವರದಿಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಪಾಲಿಕೆ ಆರಂಭಗೊ0ಡಾಗಿನಿ0ದ ಈವರೆಗೂ ರೂ. 97ಕೋಟಿ ಆಕ್ಷೇಪಣಾ ಮೊತ್ತದಲ್ಲಿ ಅವ್ಯವಹಾರ ಆಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಕಂಡು ಬಂದಿದೆ. ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರೂ.16ಕೋಟಿ ವಸೂಲಾತಿ ಮೊತ್ತದಲ್ಲೂ ಅವ್ಯವಹಾರವಾಗಿದೆ. ಹೆಚ್ಚುವರಿ ಹುದ್ದೆಗಳ ನೇಮಕ ಹಾಗೂ ಒಂದೇ ತೆರನಾದ ಕಾಮಗಾರಿಗೆ ಟೆಂಡರ್ ಕರೆಯುವ ಮೂಲಕ ಅಧಿಕಾರಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅವ್ಯವಹಾರವೆಸಗಿದ್ದಾರೆ. ಸರಕಾರಿ ಬಿಡ್ ಬಿಟ್ಟು ರೂ.೩೨ಲಕ್ಷ ಬೆಲೆಯ…

Read More

ಗುತ್ತಿಗೆದಾರನಿಂದ ಲಂಚ ಪಡೆವಾಗ ಲಾಕ್ | ಮನೆ ಮೇಲೂ ದಾಳಿ | ಲಕ್ಷಾಂತರ ಮೌಲ್ಯದ ಚಿನ್ನಾಭರಣ ರೂ.30 ಲಕ್ಷ ನಗದು ಪತ್ತೆ ಮುದ್ದೇಬಿಹಾಳ: ಗುತ್ತಿಗೆದಾರರೊಬ್ಬರು ದೂರು ನೀಡಿದ್ದ ಹಿನ್ನೆಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಕುಡಿವ ನೀರಿನ ಕಾಮಗಾರಿಗೆ ಸಂಬAಧಿಸಿದAತೆ ಬಿಲ್ ಬರೆಯಲು ೩೦ ಸಾವಿರ ರೂ.ಲಂಚ ಪಡೆದುಕೊಳ್ಳುತ್ತಿರುವಾಗ ಮಂಗಳವಾರ ಆರ್.ಡಬ್ಲೂ.ಎಸ್ ಇಲಾಖೆ ಎಇಇ ಜೆ.ಪಿ.ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಲೋಕಾಯುಕ್ತ ಅಧಿಕಾರಿಗಳು ಅವರ ಮನೆಯ ಮೇಲೂ ದಾಳಿ ಮಾಡಿದ್ದು ಲಕ್ಷಾಂತರ ರೂ.ಹಣ ಮತ್ತು ಚಿನ್ನಾಭರಣ, ಮಹತ್ವದ ಬ್ಯಾಂಕ್ ಖಾತೆಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ತಾಳಿಕೋಟಿ ತಾಲೂಕಿನ ಖ್ಯಾತನಡೋಣಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಕುಡಿವ ನೀರಿನ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರೊಬ್ಬರು ೧೬ ಲಕ್ಷ ರೂ. ಬಿಲ್ ಪಾವತಿಸುವಂತೆ ಜೆ.ಪಿ.ಶೆಟ್ಟಿ ಅವರನ್ನು ಕೋರಿದ್ದರು. ಇದಕ್ಕೆ ಶೇ.೩ ರಷ್ಟು ಕಮೀಷನ್ ಕೊಡಬೇಕು ಎಂಬ ಬೇಡಿಕೆಯನ್ನು ಅಧಿಕಾರಿ ಶೆಟ್ಟಿ ಇರಿಸಿದ್ದರು ಎನ್ನಲಾಗಿದೆ. ಅದರಂತೆ ೬೦ ಸಾವಿರ ರೂ.ಪೈಕಿ ೩೦…

Read More

ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರೆಲ್ಲ ಸೇರಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ಭರ್ಜರಿ ಆಚರಣೆ ಮಾಡಿ ಕೋಮು ಸೌಹಾರ್ದತೆ ಮೆರೆದರು.ಜಾತ್ರೆಗೆ ಬಂದ ಹಿಂದೂ ಭಕ್ತಾಧಿಗಳಿಗೆಲ್ಲ ಮುಸ್ಲಿಂ ಯುವಕರು ಹೆಗಲ ಮೇಲೆ ಕೇಸರಿ ಶಾಲು ಧರಿಸಿ, ತಲೆಯ ಮೇಲೆ ಟೋಪಿ ಹಾಕಿ ತಂಪು ಪಾನಿಯ, ಕುಡಿಯುವ ನೀರು, ಶರಬತ್ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು.ಭಾವೈಕ್ಯತೆಗೆ ಸಾಕ್ಷಿಯಾದ ಮುಳಸಾವಳಗಿ:ಸುಮಾರು ನೂರಾರು ವರ್ಷಗಳಿಂದ ಭಾವೈಕ್ಯತೆಗೆ ಹೆಸರಾಗಿರುವ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಮಾಡದೆ ಎಲ್ಲರೂ ಸೇರಿ ಮಲ್ಲಿಕಾರ್ಜುನ ಜಾತ್ರೆ ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ. ಇಡೀ ರಾಜ್ಯದಲ್ಲಿ ಧರ್ಮ ಸಂಘರ್ಷ ಏರ್ಪಟ್ಟಿದ್ದು, ಇಲ್ಲಿ ಮಾತ್ರ ಪ್ರತಿಯೊಂದು ಕುಟುಂಬವೂ ಭಾವೈಕ್ಯತೆಯಿಂದ ಬದುಕುತ್ತಿರುವುದು ಮಾದರಿಯಾಗಿದೆ. ಅಪರೂಪ ಎಂಬAತೆ ಎಲ್ಲ ಸಮುದಾಯದ ಹಿರಿಯರು, ಯುವಕರು ಸೇರಿಕೊಂಡು ಜಾತ್ರೆ ಆಚರಿಸುತ್ತಿರುವುದು ಇಡೀ ರಾಜ್ಯಕ್ಕೆ ಸಾಮರಸ್ಯದ ಸಂದೇಶ ಸಾರಿದಂತಿದೆ.ಜಾತ್ರೆಯ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಶೈಲ ಹಾಗೂ ವಿವಿಧ ಕಡೆಯಿಂದ…

Read More

ಮುದ್ದೇಬಿಹಾಳ: ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಸಹ ಬಿಜೆಪಿ ಸರಕಾರ ಸಂಪೂರ್ಣ ಸಂವಿದಾನ ವಿರೋಧಿ, ಜನವಿರೋಧಿ, ರೈತ ವಿರೋಧಿ ಸರಕಾರವಾಗಿದೆ. ಜನರ ಕಷ್ಟ ಸುಖದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇಂತಹ ಸರಕಾರವನ್ನು ಕಿತ್ತು ಹಾಕಿ ಸಾಮಾಜಿಕ ನೆಲೆಗಟ್ಟಿನ ಬಡವರ ದೀನ ದಲಿತರ ಪರವಾದ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದಾಗ ಮಾತ್ರ ದೇಶದಲ್ಲಿ ಸಮಾನತೆ ತರಲು ಸಾಧ್ಯ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಹೇಳಿದರು.ಪಟ್ಟಣದ ತಾಳಿಕೋಟಿ ರಸ್ತೆ ಪಕ್ಕದಲ್ಲಿರುವ ದಿ ಬಾಗವಾನ ಅಲ್ಪಸಂಖ್ಯಾತರ ಕೋ ಆಪ್ ಬ್ಯಾಂಕ್ ಸಭಾಭವನದಲ್ಲಿ ಸೋಮವಾರ ಸಂಜೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಿ ಅವರು ಮಾತನಾಡಿದರು.ಬಿಜೆಪಿಯವರು ಕೇವಲ ಭ್ರಷ್ಟಾಚಾರ ನಡೆಸುವುದರ ಜೊತೆಗೆ ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಕೇವಲ ಅಧಿಕಾರಕ್ಕಾಗಿ ತಮ್ಮ ಸರಕಾರದ ವೈಫಲ್ಯಗಳು ಜನರಿಗೆ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಜಾತಿ-ಧರ್ಮಗಳ ಮಧ್ಯೆ ವೈಷಮ್ಯಗಳನ್ನು ಸೃಷ್ಠಿಸಿ ಜನರನ್ನು ಗೊಂದಲದಲ್ಲಿ ಸಿಲುಕವಂತೆ ಮಾಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ವೇಳೆ…

Read More

ಕೊಲ್ಹಾರ: ಸತತ ಎರಡು ದಶಕಗಳ ಹೋರಾಟದ ಪ್ರತಿಫಲವಾಗಿ ಆದಿಬಣಜಿಗ ಸಮಾಜವು ಸರಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವದು ಹೆಮ್ಮೆಯ ವಿಷಯವಾಗಿದ್ದು ಪ್ರತಿಯೊಬ್ಬರ ಸಹಕಾರದಿಂದ ಇದು ಸಾದ್ಯವಾಗಿದೆ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಕಲ್ಯಾಣ ಸಮೀತಿ(ರಿ) ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ಹೇಳಿದರು.ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ, ನಿರ್ದೇಶಕ ಮಂಡಳಿಯವರಿಗೆ ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ಸಮಾಜ ಬಾಂಧವರು ಸೇರಿ ಗೌರವಿಸುವ ಸಮಯ ನಡೆದ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಹೋರಾಟ ಯಶಸ್ವಿಯಾಗಬೇಕಾದರೆ ಸಂಬAಧ ಪಟ್ಟ ಇಲಾಖಾ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ಶಕ್ತಿ ದೊರೆತಾಗ ಸಾಧ್ಯವಾಗುತ್ತದೆ ಎಂದರು.ಸAಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುರನಳ್ಳಿ ಮಾತನಾಡಿ ಆದಿಬಣಜಿಗ ಸಮಾಜದ ಯುವಕರ ಹಿರಿಯರ ಹಾಗೂ ಸಂಘದ ಪದಾದಿಕಾರಿಗಳ ಅವಿರತ ಶ್ರಮದ ಫಲವಾಗಿ ಹಾಗೂ ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಬರುವ ಧರೆಪ್ಪಗೌಡ ಪಾಟೀಲ, ಶಂಕರಗೌಡ ಪಾಟೀಲ ಗುಂಡೂರ, ನೇತೃತ್ವದ ಆದಿಬಣಜಿಗ ಸಮಾಜ ಭಾಂಧವರ ಶ್ರಮದಿಂದ ಇಂದು ನಮ್ಮ ಸಮಾಜ ಸರಕಾರದ ಜಾತಿ…

Read More