ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ವಿನೂತನವಾಗಿ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಪಟ್ಟಣದ ತಾಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗ್ರತಿ ವಿನೂತನವಾಗಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರಿಗೆ ಮತದಾನದ ಮಹತ್ವ ತಿಳಿಸಲು ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಪ್ರಾಚಾರ್ಯ ಡಾ ಎಸ್ ಬಿ ರಾಠೋಡ ಮಾತನಾಡಿ, ಮತದಾನ ಸಂವಿಧಾನ ನೀಡಿರುವ ಹಕ್ಕು ಮತ್ತು ವರ, ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.
ತಾ.ಪಂ. ಯೋಜನಾಧಿಕಾರಿ ಶಿವದತ್ತ ಕೊಟ್ಟಲಗಿ ಮಾತನಾಡಿ, ಏ. 11 ರ ವರೆಗೆ ಚುನಾವಣೆ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರ ಹೆಸರು ಸೇರಿಸಲು ಅವಕಾಶ ನೀಡಿದೆ, ಎಲ್ಲರೂ ಹೆಸರು ನೋಂದಾ ಯಿಸಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಅತಿಹೆಚ್ಚು ಮತದಾನಮಾಡಲು ನಿವೇಲ್ಲರೂ ಸಹಕರಿಸಬೇಕು. ಹಾಗೆಯೇ ಅಲ್ಲಲ್ಲಿ ಮತದಾನದ ಜಾಗೃತಿ ಅಭಿಯಾನಗಳನ್ನು ಮಾಡಿ ತಿಳುವಳಿಕೆ ನೀಡಬೇಕೆಂದು ಕೊಟ್ಟಲಗಿ ಹೇಳಿದರು.
ಮತದಾನ ಜಾಗೃತಿಯಲ್ಲಿ ಗ್ರಂಥಪಾಲಕ ಎಂ.ಕೆ. ಬಿರಾದಾರ, ಪ್ರಾಧ್ಯಾಪಕಿ ರಶ್ಮಿ ಗಜಾಕೋಷ , ಪ್ರೊ.ಮಾಹತೇಂಶ ಜನವಾಡ. ಹಾಗೂ ಎಲ್ಲ ಶಿಕ್ಷಕ ವೃಂದ ಮತ್ತು ಉಪನ್ಯಾಸಕ ಸಂಗಮೇಶ ಹಿರೇಮಠ ಭಾಗವಹಿಸಿದ್ದರು.
Related Posts
Add A Comment