ಮುದ್ದೇಬಿಹಾಳ: ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಸಹ ಬಿಜೆಪಿ ಸರಕಾರ ಸಂಪೂರ್ಣ ಸಂವಿದಾನ ವಿರೋಧಿ, ಜನವಿರೋಧಿ, ರೈತ ವಿರೋಧಿ ಸರಕಾರವಾಗಿದೆ. ಜನರ ಕಷ್ಟ ಸುಖದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇಂತಹ ಸರಕಾರವನ್ನು ಕಿತ್ತು ಹಾಕಿ ಸಾಮಾಜಿಕ ನೆಲೆಗಟ್ಟಿನ ಬಡವರ ದೀನ ದಲಿತರ ಪರವಾದ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದಾಗ ಮಾತ್ರ ದೇಶದಲ್ಲಿ ಸಮಾನತೆ ತರಲು ಸಾಧ್ಯ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಾಳಿಕೋಟಿ ರಸ್ತೆ ಪಕ್ಕದಲ್ಲಿರುವ ದಿ ಬಾಗವಾನ ಅಲ್ಪಸಂಖ್ಯಾತರ ಕೋ ಆಪ್ ಬ್ಯಾಂಕ್ ಸಭಾಭವನದಲ್ಲಿ ಸೋಮವಾರ ಸಂಜೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಬಿಜೆಪಿಯವರು ಕೇವಲ ಭ್ರಷ್ಟಾಚಾರ ನಡೆಸುವುದರ ಜೊತೆಗೆ ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಕೇವಲ ಅಧಿಕಾರಕ್ಕಾಗಿ ತಮ್ಮ ಸರಕಾರದ ವೈಫಲ್ಯಗಳು ಜನರಿಗೆ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಜಾತಿ-ಧರ್ಮಗಳ ಮಧ್ಯೆ ವೈಷಮ್ಯಗಳನ್ನು ಸೃಷ್ಠಿಸಿ ಜನರನ್ನು ಗೊಂದಲದಲ್ಲಿ ಸಿಲುಕವಂತೆ ಮಾಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ)ಯವರು ಮಾತನಾಡಿ, ಸ್ಥಳಿಯ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ತಾವು ಬಿಜೆಪಿಯಿಂದ ಗೆದ್ದು ಬಂದ ಮೇಲೆ ಕೆಲ ಮುಸ್ಲಿಂ ಸಮಾಜದವರು ಯಾವುದೋ ಸಹಾಯಕ್ಕಾಗಿ ಅವರ ನಿವಾಸಕ್ಕೆ ಹೋದರೆ, ನೀವು ನನಗೆ ಮತ ಹಾಕಿಲ್ಲ ನನ್ನ ಹತ್ತಿರ ಬರಬೇಡಿ ಎಂದು ಅಪಮಾನಿಸಿ ಕಳಿಸಿದ್ದರು. ಆದರ ಈಗ ಚುನಾವಣೆ ಕಾರಣ ಮುಸ್ಲಿಂ ಬಡಾವಣೆಗಳಿಗೆ ತೆರಳಿ ಮತ ಭಿಕ್ಷೆ ಬೇಡುತ್ತಿರುವುದು ಅವರ ಆಷಾಡಭೂತಿತನ ತೋರಿಸುತ್ತದೆ ಎಂದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಬಾಪುರಾಯ ದೇಸಾಯಿ, ರಾಯನಗೌಡ ತಾತರಡ್ಡಿ, ಗೋವಾ ಕನ್ನಡಿಗರ ಹೋರಾಟಗಾರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಸಂಗೀತಾ ನಾಡಗೌಡ, ಪುರಸಭೆ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ರೀಯಾಜ ಅಹ್ಮದ ಢವಳಗಿ, ಮೈಬೂಬ ಗೊಳಸಂಗಿ, ಪಿಂಟು ಸಾಲಿಮನಿ, ಕಾಮರಾಜ ಬಿರಾದಾರ, ಹುಲಗಪ್ಪ ನಾಯಕಮಕ್ಕಳ, ಅಲ್ಲಾಭಕ್ಷ ದೇಸಾಯಿ(ಲಾರಾ), ಬಹದ್ದೂರ ರಾಠೋಡ, ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment