ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ರೈತಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಅ. ೩೧ ರಿಂದ ಸೆ. ೪ ವರೆಗೆ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಶುಕ್ರವಾರ ಮುಕ್ತಾಯಗೊಳಿಸಿದರು.
ಈ ವೇಳೆ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಇಂಡಿ ತಾಲೂಕಿನಲ್ಲಿ ಮಳೆಯ ಕೊರತೆ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮರುಪರಿಶೀಲಿಸುವದು ಅಗತ್ಯವಾಗಿದೆ ಎಂದರು.
ಬಿಜೆಪಿಯ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿ, ಇನ್ನು ಮುಂದೆ ಇಂಡಿ ಬರಗಾಲ ಪ್ರದೇಶವೆಂದು ಘೋಷಣೆ ಮಾಡದೇ ಇದ್ದರೆ ಪಾದಯಾತ್ರೆ ಮಾಡುವುದಾಗಿ ತಿಳಿಸಿದರು.
ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಇವರಿಗೆ ಮನವಿ ಸಲ್ಲಿಸಿದರು.
ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ದೇವೆಂದ್ರ ಕುಂಬಾರ, ಶಂಕರಗೌಡ ಪಾಟೀಲ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ಸಂತೋಷ ಪಾಟೀಲ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಮಲ್ಲು ಗುಡ್ಲ, ಪ್ರಶಾಂತ ಗವಳಿ, ಮಂಜು ದೇವರ, ಶ್ರೀಶೈಲಗೌಡ ಪಾಟೀಲ, ಮಲ್ಲು ವಾಲೀಕಾರ, ಈರಣ್ಣಗೌಡ ಪಾಟೀಲ, ಎಸ್.ಬಿ. ಕೆಂಬೋಗಿ, ಗಜಾನನ ಗಿಣ್ಣಿ, ಮತ್ತಿತರರಿದ್ದರು.

