ಕೊಲ್ಹಾರ: ಸತತ ಎರಡು ದಶಕಗಳ ಹೋರಾಟದ ಪ್ರತಿಫಲವಾಗಿ ಆದಿಬಣಜಿಗ ಸಮಾಜವು ಸರಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವದು ಹೆಮ್ಮೆಯ ವಿಷಯವಾಗಿದ್ದು ಪ್ರತಿಯೊಬ್ಬರ ಸಹಕಾರದಿಂದ ಇದು ಸಾದ್ಯವಾಗಿದೆ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಕಲ್ಯಾಣ ಸಮೀತಿ(ರಿ) ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ, ನಿರ್ದೇಶಕ ಮಂಡಳಿಯವರಿಗೆ ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ಸಮಾಜ ಬಾಂಧವರು ಸೇರಿ ಗೌರವಿಸುವ ಸಮಯ ನಡೆದ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಹೋರಾಟ ಯಶಸ್ವಿಯಾಗಬೇಕಾದರೆ ಸಂಬAಧ ಪಟ್ಟ ಇಲಾಖಾ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ಶಕ್ತಿ ದೊರೆತಾಗ ಸಾಧ್ಯವಾಗುತ್ತದೆ ಎಂದರು.
ಸAಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುರನಳ್ಳಿ ಮಾತನಾಡಿ ಆದಿಬಣಜಿಗ ಸಮಾಜದ ಯುವಕರ ಹಿರಿಯರ ಹಾಗೂ ಸಂಘದ ಪದಾದಿಕಾರಿಗಳ ಅವಿರತ ಶ್ರಮದ ಫಲವಾಗಿ ಹಾಗೂ ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಬರುವ ಧರೆಪ್ಪಗೌಡ ಪಾಟೀಲ, ಶಂಕರಗೌಡ ಪಾಟೀಲ ಗುಂಡೂರ, ನೇತೃತ್ವದ ಆದಿಬಣಜಿಗ ಸಮಾಜ ಭಾಂಧವರ ಶ್ರಮದಿಂದ ಇಂದು ನಮ್ಮ ಸಮಾಜ ಸರಕಾರದ ಜಾತಿ ಗೆಜೆಟನಲ್ಲಿ ಸೇರುವಂತಾಗಿದೆ ಎಂದರು.
ಹಿAದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್.ಎಸ್.ಕಲ್ಯಾಣಕುಮಾರ, ಬಿ.ಎಸ್.ರಾಜಶೇಖರ, ಶ್ರೀಮತಿ ಶಾರದಾ ನಾಯಕ, ಜಗದೀಶ, ಕೆ.ಟಿ.ಸುವರ್ಣಾ, ಅರುಣಕುಮಾರ, ಲಕ್ಷö್ಮಣ ಉಪ್ಪಾರ, ಸಂಘದ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುರನಳ್ಳಿ, ಗುರಸಿದ್ದಪ್ಪ ಬಡ್ನಿ, ನಂದಪ್ಪ ನಿಂಬೆನ್ನಪ್ಪ ಗಣಿ, ಅಶೋಕ ಸೋಂಪುರ, ಸುಧಾಕರ ಬೈರಗೊಂಡ, ಪರಶುರಾಮ ಗಣಿ (ಕೊಲ್ಹಾರ) ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment