ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ೧೫ನೇ ದಿನದಂದು ಧರಣಿ ಸತ್ಯಾಗ್ರಹ ಸ್ಥಳದಿಂದ ಮೊಹರೆ ಹಣಮಂತ್ರಾಯ ವೃತ್ತದವರೆಗೆ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು.
ಪಟ್ಟಣದ ಅಂಬೇಡ್ಕರ್ ವೃತ್ತದ ಧರಣಿ ಸ್ಥಳದಿಂದ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ-೫೦ ರಲ್ಲಿನ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಅರ್ಧ ಗಂಟೆಗಳ ಕಾಲ ಧರಣಿ ಕುಳಿತು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಾಲುಗಟ್ಟಿ ನಿಲ್ಲುವಂತಾಯಿತು. ನಂತರ ಧರಣಿ ಸ್ಥಳಕ್ಕೆ ಆಗಮಿಸಿ ವೇದಿಕೆಯಲ್ಲಿ ಸಭೆ ಕೈಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ ದಿಂಡವಾರ, ಶರಣು ಸಿಂಧೆ, ಲಕ್ಕಪ್ಪ ಬಡಿಗೇರ, ಮಲ್ಕು ಬಾಗೇವಾಡಿ ಮಾತನಾಡಿ, ಎಸ್‌ಸಿ, ಎಸ್‌ಟಿ ಅನುದಾನ ದುರುಪಯೋಗ, ಜಲಧಾರೆ ಯೋಜನೆಯಲ್ಲಿನ ಅವ್ಯವಹಾರ ಖಂಡಿಸಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರ ಮಾಡಬೇಕು ಹಾಗೂ ಸಮಗ್ರ ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದೂ ಘೋಷಿಸಲು ಆಗ್ರಹಿಸಿದರು.
ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಸಂಘಟನಾ ಸಂಚಾಲಕ ಬಸವರಾಜ ಇಂಗಳಗಿ, ಸುರೇಶ ನಡೆಗಡ್ಡಿ, ಮಂಜುನಾಥ ಎಂಟಮಾನ, ನಜೀರ ಬೀಳಗಿ, ಆಕಾಶ ಕೊಂಬಿನ, ಯಮನಪ್ಪ ಭೂತಾಳಿ, ಪರಸಪ್ಪ ಬಡಿಗೇರ, ಅಶೋಕ ಗುಡಿಸಲಮನಿ, ರಾಘವೇಂದ್ರ ಗುಡಿಮನಿ, ಮಾಂತೇಶ ಚಲವಾದಿ, ಪ್ರಕಾಶ ಮಣೂರ, ರವಿ ತಳಕೇರಿ, ದೇವೇಂದ್ರ ಹಡಪದ, ಕಾಶೀನಾಥ ಕಟ್ಟಿಮನಿ, ಸಾಯಬಣ್ಣ ದಳಪತಿ, ದಯಾನಂದ ರಾಠೋಡ, ಮಾಂತೇಶ ಗುಡಿಮನಿ ಪಿಂಟೂ ಭಾಸುತ್ಕರ್, ಕಾಳಪ್ಪ ಕಡಕೋಳ ಇದ್ದರು.

