ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಸೆಂಬರ್ 13ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2026 ಅಂಗವಾಗಿ ಸೆಪ್ಟೆಂಬರ್ 6 ರಂದು ರವಿವಾರ ಮಹಿಳೆಯರಿಗಾಗಿ ಪ್ರೋಮೋ ರನ್ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ನಗರದ ಗಗನ್ ಮಹಲ್ ನಿಂದ ಈ ಓಟ ಪ್ರಾರಂಭವಾಗಲಿರುವ ಈ ರನ್ ಉಚಿತವಾಗಿದ್ದು, ಎಲ್ಲ ಮಹಿಳೆಯರೂ ಭಾಗವಹಿಸಬಹುದಾಗಿದೆ. ಗಗಲ್ ಮಹಲ್ ನಿಂದ ಪ್ರಾರಂಭವಾಗಲಿರುವ ಈ ಓಟ ಐತಿಹಾಸಿಕ ಗೋಳಗುಮ್ಮಟವರೆಗೆ ಸಾಗಿ ಮರಳಿ ಗಗನ್ ಮಹಲ್ ನಲ್ಲಿ ಮುಕ್ತಾಯವಾಗಲಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಗೆ ಮತ್ತು ಫ್ಯಾನ್ಸಿ ಡ್ರೆಸ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ವೃಕ್ಷಥಾನ್ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶಿವು ಕುಂಬಾರ- 9972795289, ಅಮಿತ ಬಿರಾದಾರ- 9880107038 ಹಾಗೂ ರಮೇಶ ಬಿರಾದಾರ- 9972025236 ಅವರನ್ನು ಸಂಪರ್ಕಿಸಬಹುದಾಗಿದೆ.

