ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಸಿಬಿಎಸ್ಇ ಶಾಲೆಯಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕೃಷ್ಣನು ಮಾಡಿದ ಮಹತ್ಕಾರ್ಯಗಳ ಕುರಿತು ಎಂಟನೇ ತರಗತಿಯ ವಿದ್ಯಾರ್ಥಿನಿ ಮೃನ್ಮಯಿ ಪ್ರಾಸ್ತವಿಕ ಮಾತನಾಡಿದಳು.
ಎಲ್ಲ ಸದನದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ನೋಡುಗರ ಮೈ ನವಿರೇಳಿಸುವಂತ ಮಾಡಿತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಬಾಲ ಗೋಪಾಲ ಮತ್ತು ರಾಧೆಯ ವೇಷಭೂಷಣದಲ್ಲಿ ಬಂದು ಇಡೀ ಶಾಲಾ ಆವರಣವನ್ನು ನಂದಗೋಕುಲವನ್ನಾಗಿ ಮಾಡಿದರು.
ಪ್ರೌಢ ಶಾಲಾ ಎಲ್ಲಾ ವಿದ್ಯಾರ್ಥಿಗಳು. ಶಾಲಾ ಮೈದಾನಕ್ಕಿಳಿದು ಕೋಲಾಟ ಆಡಿದರು. ಪ್ರಾಚಾರ್ಯರು ಸೇರಿದಂತೆ ಎಲ್ಲರೂ ಸಮೂಹ ನೃತ್ಯದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಹಾಡು ಕುಣಿತ ಕೇಕೆ ಮುಗಿಲು ಮುಟ್ಟುವಂತಿತ್ತು. ಪ್ರಾರ್ಥನಾ ಸಭೆಯ ಮಂತ್ರಿ ಸ್ನೇಹಾ ಪೂಜಾರಿ ನಿರೂಪಿಸಿದರು.
ಮಕ್ಕಳ ಈ ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ಪ್ರಾಚಾರ್ಯೆ ವಸುಧಾ ನಾರ್ವೇಕರ ಪ್ರಶಂಸಿಸಿದರು.

