ಮಹಾನಗರ ಪಾಲಿಕೆ ಮತ್ತು ವಿಡಿಎ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ
ವಿಜಯಪುರ: ಮಹಾನಗರ ಪಾಲಿಕೆ ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದು ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ವಿಚಾರಣೆಗಾಗಿ ಏ.೨೭ರಂದು ಹಾಜರಾಗಲು ನೋಟೀಸ್ ಬಂದಿವೆ ಎಂದು ನಗರದ ಆರ್‌ಟಿಐ ಕಾರ್ಯಕರ್ತ ಸನ್ನಿ ಊರ್ಪ್ ತ್ರಿಲೋಚನ ಗವಿಮಠ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಅವರು ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.
ವಿಜಯಪುರ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಲೆಕ್ಕ ತನಿಖಾ ವರದಿಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಪಾಲಿಕೆ ಆರಂಭಗೊ0ಡಾಗಿನಿ0ದ ಈವರೆಗೂ ರೂ. 97ಕೋಟಿ ಆಕ್ಷೇಪಣಾ ಮೊತ್ತದಲ್ಲಿ ಅವ್ಯವಹಾರ ಆಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಕಂಡು ಬಂದಿದೆ. ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರೂ.16ಕೋಟಿ ವಸೂಲಾತಿ ಮೊತ್ತದಲ್ಲೂ ಅವ್ಯವಹಾರವಾಗಿದೆ. ಹೆಚ್ಚುವರಿ ಹುದ್ದೆಗಳ ನೇಮಕ ಹಾಗೂ ಒಂದೇ ತೆರನಾದ ಕಾಮಗಾರಿಗೆ ಟೆಂಡರ್ ಕರೆಯುವ ಮೂಲಕ ಅಧಿಕಾರಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅವ್ಯವಹಾರವೆಸಗಿದ್ದಾರೆ. ಸರಕಾರಿ ಬಿಡ್ ಬಿಟ್ಟು ರೂ.೩೨ಲಕ್ಷ ಬೆಲೆಯ ನಿವೇಶನಗಳನ್ನು ರೂ.10 ಲಕ್ಷಕ್ಕೆ ಮಾರಾಟ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆಂದು ಆರೋಪಿಸಿದರು.
ಈ ಎಲ್ಲ ಹಗರಣಗಳ ಕುರಿತು ತಾವು ಲೋಕಾಯುಕ್ತರಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದು, ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.