ಉದಯರಶ್ಮಿ ದಿನಪತ್ರಿಕೆ
ಇಂಡಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಒಬ್ಬ ಶ್ರೇಷ್ಠ ದೇಶಭಕ್ತ ಅಷ್ಟೇ ಅಲ್ಲ ಕನ್ನಡ ನಾಡಿನ ಕಟ್ಟಾಳು. ಕನ್ನಡ ನಾಡಿನ ಹಿರಿಮೆಯನ್ನು ಇಡೀ ದೇಶದಲ್ಲಿ ಎತ್ತಿಹಿಡಿದ ಕ್ರಾಂತಿಕಾರಿ ಪುರುಷ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಯಣ್ಣ ಬ್ರಿಟಿಷರೊಂದಿಗೆ ಸದಾ ಹೋರಾಟ ಮಾಡುವ ಮೂಲಕ ಸಿಂಹ ಸ್ವಪ್ನವಾಗಿದ್ದ. ತಾಯಿ ಚೆನ್ನಮ್ಮಳ ಬಲಗೈ ಬಂಟನಾಗಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಎಂದರು.
ಬ್ರಿಟಿಷರಿಂದ ಭಾರತ ದಾಸ್ಯ ಸಂಕೋಲೆ ಮುಕ್ತ ಮಾಡಲು ನೆಲ, ಜಲ, ರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ. ರಾಯಣ್ಣ ಇವರ ಬಲಿದಾನ ವರ್ಣಾತೀತ. ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಶೌರ್ಯ, ಇಂದಿನ ಯುವ ಪೀಳಿಗೆಗೆ ಪ್ರೇರಣೆ ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದರು.
ಹಾಲುಮತ ಸಮಾಜದ ಹಿರಿಯ ಮುಖಂಡ ಜಟ್ಟೆಪ್ಪ ರವಳಿ, ನಿಲಕಂಠ ರೂಗಿ ಮಾತನಾಡಿದರು.
ಕೆಡಿಪಿ ಸದಸ್ಯ ಕೆಂಪೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಮಲ್ಲಕಣ್ಣಗೌಡ ಬಿರಾದಾರ, ಶಿಕ್ಷಕ ಅಂಕಲಗಿ, ಶಹಾಜಿ ಮಿಸಾಳೆ, ತಾಲೂಕಾ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆ, ಶ್ರೀಕಾಂತ ಕೂಡಿಗನೂರ, ನೀಲಕಂಠ ರೂಗಿ, ಸದಾಶಿವ ಪ್ಯಾಟಿ, ಜಾವೀದ ಮೋಮಿನ, ವಿಠ್ಠಲಗೌಡ ಪಾಟೀಲ, ಅಣ್ಣಾರಾಯ ಬಬಲಾದ, ಪರಶುರಾಮ ಹತ್ತರಕಿ, ಸಣ್ಣಪ್ಪ ತಳವಾರ, ಅಬ್ದುಲ ಇಂಡಿಕರ್, ಅಣ್ಣಪ್ಪ ತಳವಾರ, ಹುಚ್ಚಪ್ಪ ತಳವಾರ, ಆನಂದ ಕಾಂಬಳೆ, ಸೇರಿದಂತೆ ಇನ್ನಿತರರು ಇದ್ದರು.

