Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನ ಬಾಗೇವಾಡಿ: ವಿದ್ಯಾರ್ಥಿಗಳು ಸ್ಪರ್ಧಿಸುವ ಗುಣ ಬೆಳಸಿಕೊಳ್ಳಬೇಕು, ಸೋಲು, ಗೆಲುವು ಏನೇ ಇರಲಿ ಸ್ಫರ್ಧಿಸುವ ಮನೋಭಾವನೆ ಮುಖ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಬಿಹೊಸಮನಿ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘದ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ೨೦೨೩-೨೪ನೇ ಸಾಲಿನ ತಾಲೂಕು ಮಟ್ಟದ ವಿವಿಧ ಸ್ಫರ್ಧೆಗಳು ಮಹಾವಿದ್ಯಾಲಯದಲ್ಲಿ ನಡೆದವು.ಪ್ರಬಂಧ ಸ್ಪರ್ಧೆ, ಬಿತ್ತಿಚಿತ್ರ ಸ್ಫರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜರುಗಿದವು. ಈ ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳ ನಂತರ ಫಲಿತಾಂಶ ಪ್ರಕಟಣೆ ಮಾಡುತ್ತಾ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲರು ಮಾತನಾಡಿದರು. ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗುವರು. ಈ ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಡಾ. ಎಚ್. ಎಂ ನಾಟಿಕಾರ ಅವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.ಡಾ ಯುವರಾಜ ಮಾದನಶೆಟ್ಟಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ ನಾಯಕ ಟಿ ಆರ್, ಡಾ ಬಸೀರಾಬಾನು…
ಬಸವನಬಾಗೇವಾಡಿ: ಭಾರತ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ದೇವರ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ಎಂದು ಜವಳಿ.ಸಕ್ಕರೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಲಕ್ಷ್ಮೀ ನಗರದ ಕ್ವಾಟಿ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಅಷ್ಟ ಲಕ್ಷ್ಮೀಯರನ್ನು ಪೂಜಿಸುವ ಪರಂಪರೆ ಹೊಂದಿರುವ ದೇಶ ನಮ್ಮದು, ಅಪಾರ ಭಕ್ತರನ್ನ ಹೊಂದಿರುವ ಕ್ವಾಟಿ ಲಕ್ಷ್ಮೀ ದೇವಿಯ ಜಾತ್ರೆಯು ಪ್ರತಿ ವರ್ಷ ಅದ್ದೂರಿಯಾಗಿ ಜರಗುತ್ತಿರುವದು ಸಂತೋಷದ ಸಂಗತಿಯಾಗಿದೆ. ಅಲ್ಲದೇ ಕ್ವಾಟಿ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕಾಗೆ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಪರಶುರಾಮ ಅಡಗಿಮನಿ ಅವರು ಸರ್ಕಾರದಿಂದ ಅನುದಾನ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ ಸರ್ಕಾರ ಅನುದಾನ ನೀಡಲಿ ನೀಡದೆ ಇರಲಿ ನಾನು ನಿಮಗೆ ಕೊಟ್ಟ ಭರವಸೆಯಂತೆ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪ್ರವಚನ ಪುರಾಣಗಳಿಂದ ಮಾತ್ರ ಪರಿವರ್ತನೆ ಸಾಧ್ಯ, ಪ್ರತಿಯೊಬ್ಬರು ಪುರಾಣ ಪ್ರವಚನಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ…
ದೇವರಹಿಪ್ಪರಗಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಅಂತರ ಕಾಲೇಜುಗಳ ೨ ದಿನಗಳ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಶುಕ್ರವಾರ ಕೊನೆಗೊಂಡಿತು.ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಬಾಲಕರ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಆರಂಭವಾದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಅಂತರ ಕಾಲೇಜುಗಳ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಅಥಣಿ ಶ್ರೀಶಿವಯೋಗಿ ಮುರುಗೇಂದ್ರ ಕಾಲೇಜು ಪ್ರಥಮ, ಎಸ್.ಎ.ಜಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯ ಮರಡಿಮಠ ದ್ವೀತಿಯ, ಎಸ್.ಪಿ.ಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ರಾಯಭಾಗ ತೃತಿಯ ಹಾಗೂ ಬಸವನಬಾಗೇವಾಡಿಯ ಜಿ.ಎಫ್.ಜಿ.ಸಿ ಮಹಾವಿದ್ಯಾಲಯ ನಾಲ್ಕನೆಯ ಸ್ಥಾನ ಪಡೆದವು.ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ ಹಾಗೂ ಪ್ರಾಂಶುಪಾಲ ಅಶೋಕ ಹೆಗಡೆ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ಆರಂಭವಾದ ಕಬಡ್ಡಿ ಪಂದ್ಯಾವಳಿ ಸ್ಥಳೀಯ ಕ್ರೀಡಾಪ್ರೇಮಿಗಳನ್ನು ಆಕರ್ಷಿಸುವಲ್ಲಿ ಸಫಲವಾಗಿ, ಯಶಸ್ವಿಯಾಗಿ ಮುಕ್ತಾಯಗೊಂಡಿತು. ಗುರುವಾರ ರಾತ್ರಿ ೯ ಗಂಟೆಯವರೆಗೆ ಜರುಗಿದ ಹೊನಲು ಬೆಳಕಿನ ಪಂದ್ಯಗಳನ್ನು ಸಾರ್ವಜನಿಕರು ಉತ್ಸಾಹದಿಂದ ವೀಕ್ಷಿಸಿದರು.ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ…
ವಿಜಯಪುರ: ನಗರದ ಚಿಕ್ಕಮಕ್ಕಳ ತಜ್ಞ ಡಾ. ಎಲ್.ಎಚ್.ಬಿದರಿಯವರ ೪೦ ವರ್ಷಗಳ ವೈದ್ಯಕೀಯ ಸೇವೆಯ ಗರಿಯಲ್ಲಿ ಇನ್ನೊಂದು ಗರಿ ಸೇರ್ಪಡೆಯಾಗಲಿದ್ದು, ಎಚ್.ಟಿ.ಬಿದರಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ “ಡಾ.ಬಿದರಿ ಚೈಲ್ಡ್ ಅಕಾಡೆಮಿ”ಯು ಇದೇ ರವಿವಾರ ನವ್ಹೆಂಬರ್ ೧೯ರಂದು ಸಂಜೆ ೫ ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಲೋಕಾರ್ಪಣೆಯಾಗಲಿದೆ.ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ, ಮಕ್ಕಳ ಹಕ್ಕುಗಳ ವಿಶ್ವ ರಾಯಭಾರಿ ಶ್ರೀಮತಿ ವನಿತಾ ತೊರವಿ ಆಗಮಿಸಲಿದ್ದಾರೆ. ಈ ವೇದಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ ಡಾ|| ಎಲ್.ಎಚ್.ಬಿದರಿಯವರು ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳು, ಮಕ್ಕಳಲ್ಲಿ ಹುದುಗಿರುವ ಕಲೆಗಳನ್ನು ಗುರುತಿಸಲು ರಸಪ್ರಶ್ನೆಗಳು, ಚಿತ್ರಕಲೆ, ಪೇಂಟಿಂಗ್, ರಂಗೋಲಿ, ಪ್ರಬಂಧಗಳು, ನೃತ್ಯ, ಗಾಯನ, ಸಾಮಾನ್ಯ ಜ್ಞಾನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದು, ಅಲ್ಲದೆ ಪ್ರೇರಣೆ ನೀಡುವ…
ದೇವರಹಿಪ್ಪರಗಿ: ಸಮಾಜಸೇವೆಗೆ ದೊರೆತ ಅಲ್ಪ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ದೇವರಹಿಪ್ಪರಗಿ ಪಟ್ಟಣ ಪಂಚಾಯತಿಗೆ ನಾಮನಿರ್ದೇಶನಗೊಂಡ ನೂತನ ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಗುರುವಾರ ಸನ್ಮಾನ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.ಒಳ್ಳೆಯ ಕೆಲಸ ಮಾಡಬೇಕು. ಹುದ್ದೆಗಳು ಶಾಶ್ವತವಲ್ಲ, ಸದಾ ಸಮಾಜಸೇವೆಯ ಧ್ಯೇಯವಿಟ್ಟುಕೊಂಡು ಕಾರ್ಯತತ್ಪರರಾಗಬೇಕು ಎಂದು ಸೂಚಿಸಿ, ನೂತನವಾಗಿ ನಾಮನಿರ್ದೇಶನಗೊಂಡ ರಾಜು ಮೆಟಗಾರ, ಸುನೀಲ್ ಕನಮಡಿ, ಹುಸೇನ ಕೊಕಟನೂರ ಇವರಿಗೆ ಮಾರ್ಗದರ್ಶನ ಮಾಡಿದರು.ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ನಾಯಿಕ, ನಜೀರ ಬೀಳಗಿ, ಬಾಶೇಷಾಬ ಹಳ್ಳಿ, ಹಣಮಂತ ದೊಡಮನಿ, ಉಸ್ಮಾನ ಹಚ್ಯಾಳ, ಲಾಲಾಸಾಹೇಬ ಮಳಖೇಡ, ಹುಸೇನ್ ಗೌಂಡಿ, ಮಹಮ್ಮದರಫೀಕ ಮೊಮೀನ, ಹಸನ್ ನಧಾಫ್, ಸಯ್ಯದ ಮುಲ್ಲಾ, ಪೈಗಂಬರ ಹುಣಶ್ಯಾಳ, ಅಬ್ದುಲ್ ವಾಲೀಕಾರ ಸೇರಿದಂತೆ ಇತರರು ಇದ್ದರು.
ಸಿಂದಗಿ: ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆಯಿರುವ ಸಾತವಿರೇಶ್ವರ ಸಭಾಭವನದಲ್ಲಿ ನ.೧೮ ಮತ್ತು ೧೯ ರಂದು ಶ್ರೀ ಪದ್ಮರಾಜ ಮಹಿಳಾ ಪದವಿ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ್ ಕಬಡ್ಡಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಜರುಗಲಿದೆ ಎಂದು ಪ್ರಾಚಾರ್ಯ ಶಿವಮಾಂತ ಪೂಜಾರಿ ತಿಳಿಸಿದರು.ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಹಾವಿದ್ಯಾಲಯದ ವತಿಯಿಂದ ಮಹಿಳಾ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ೧೫ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನೀರಿಕ್ಷೆ ಇದೆ ಎಂದರು.ನ.೧೮ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯವನ್ನು ಜಮಖಂಡಿಯ ಕೊಣ್ಣೂರ ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಲಿದ್ದಾರೆ. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಉದ್ಘಾಟಿಸಲಿದ್ದಾರೆ. ಸಿಪಿಐ ಡಿ.ಹುಲುಗಪ್ಪ ಪಾರಿತೋಷಕ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ…
ದೇವರಹಿಪ್ಪರಗಿ: ದಿ: ೧೮ ರಂದು ಶನಿವಾರ(ಇಂದು) ಬೆಳಿಗ್ಗೆ ೧೦ ಘಂಟೆಗೆ ದೇವರಹಿಪ್ಪರಗಿ ಇಂಡಿ ರಸ್ತೆಯಲ್ಲಿಯ ಹೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.ತಾಲ್ಲೂಕಿನ ಎಲ್ಲಾ ಗ್ರಾಹಕರು ಸಭೆಗೆ ಆಗಮಿಸಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಿಂದಗಿ: ಪಟ್ಟಣದಲ್ಲಿ ನ.೨೬ರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಓಟವನ್ನು ಪ್ಲೆöಯ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗಣೇಶ ಕನ್ಸಸ್ಟ್ರಕ್ಷನ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪರಶುರಾಮ ಕಾಂಬಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಓಟದಲ್ಲಿ ಪ್ರಥಮ ಬಹುಮಾನ ೨೫೦೦೦ರೂ. ಹಾಗೂ ದ್ವೀತಿಯ ಬಹುಮಾನ ೧೧೦೦೦ರೂ. ಜೊತೆಗೆ ಪಾರಿತೋಷಕ ನೀಡಲಾಗುವುದು. ಸದರಿ ಓಟದಲ್ಲಿ ಪಾಲ್ಗೊಂಡ ಓಟಗಾರರಿಗೆ ಆಯೋಜಕರಿಂದ ಅಭಿನಂದನಾ ಪತ್ರ ಹಾಗೂ ಟೀ-ಶರ್ಟ್ ನೀಡಲಾಗುತ್ತದೆ. ಓಟದಲ್ಲಿ ಪಾಲ್ಗೋಳಲು ನ.೨೩ ಸಾಯಂಕಾಲ ೫ಗಂಟೆಯವರೆಗೆ ಹೆಸರು ನೊಂದಣಿಗೆ ಅವಕಾಶವಿದ್ದು, ಆಸಕ್ತರು ನೋಂದಣಿ ಮಾಡಿಕೋಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ನಿಂಗರಾಜ ಗುಡಿಮನಿ, ಶಿವಾನಂದ ಆಲಮೇಲ ೯೬೬೩೯೯೫೫೭೧/೯೯೦೧೪೪೭೫೦೩ ಅವರನ್ನು ಸಂಪರ್ಕಿಸಬಹುದಾಗಿದೆ.
ದೇವರಹಿಪ್ಪರಗಿ: ಕಾಲುವೆಗೆ ಕಾಲು ಜಾರಿ ಬಿದ್ದು ರೈತನೊಬ್ಬ ಮೃತಪಟ್ಟ ಘಟನೆ ಕಡಕೋಳ ಗ್ರಾಮದ ಬಳಿ ಜರುಗಿದೆ.ತಾಲ್ಲೂಕಿನ ಕಡಕೋಳ ಗ್ರಾಮದ ರೈತ ರೇವಣಸಿದ್ಧ ಖೈನೂರ(೩೦) ಕಾಲು ಜಾರಿ ಕಾಲುವೆಗೆ ಬಿದ್ದ ರೈತನಾಗಿದ್ದಾನೆ. ಗುರುವಾರ ಸಾಯಂಕಾಲ ಜಮೀನಿಗೆ ನೀರು ಹರಿಸಿ ಮೋಟಾರು ಬಂದ ಮಾಡಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ ನಂತರ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಶುಕ್ರವಾರ ಬೆಳಿಗ್ಗೆ ಮೃತದೇಹ ದೊರೆತಿದೆ. ಕಲಕೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದ ಕೆರೆ ಬತ್ತಿ ಈ ಭಾಗದ ಜನ ಜಾನುವಾರು ಸಾಕಷ್ಟು ಹೈರಾಣಾಗಿದ್ದಾರೆ. ಕೆರೆ ತುಂಬುವ ಯೋಜನೆಯಡಿ ಅಗಸಬಾಳ ಗ್ರಾಮದ ಕೆರೆ ಕೂಡ ಇದ್ದು ಕೆರೆ ತುಂಬಲು ಅಧಿಕಾರಿಗಳು ಕಾಲುವೆ ಕಾಮಗಾರಿಯ ಅಪೂರ್ಣ ನೆಪ ಹೇಳುತ್ತಿದ್ದಾರೆ. ಅಪೂರ್ಣವಾದ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೂಡಲೇ ಕೆರೆ ತುಂಬಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಡೆ ಅಗಸಬಾಳ ಗ್ರಾಮದಿಂದ ಆಲಮಟ್ಟಿಯ ಕೆಬಿಜೆಎನ್‌ಎಲ್ ಕಚೇರಿಯ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಈ ಭಾಗದ ರೈತರಾದ ಎನ್.ಆರ್.ಮೊಕಾಶಿ, ರುದ್ರಗೌಡ ಪಾಟೀಲ, ದುಂಡಪ್ಪ ಅರಸುಣಗಿ, ಅರವಿಂದ ಕಾಶಿನಕುಂಟಿ, ಶರಣಯ್ಯ ಹಿರೇಮಠ, ಅಪ್ಪು ಕುಂಬಾರ, ಕಾಶಿನಾಥ ಅರಸುಣಗಿ, ಮಹಾಂತೇಶ ಕಾಶಿನಕುಂಟಿ, ರಾಮನಗೌಡ ಬಿರಾದಾರ, ಬಸನಗೌಡ ಪಾಟೀಲ, ಮುತ್ತಪ್ಪ ಉಪ್ಪಲದಿನ್ನಿ, ಸಿದ್ದಪ್ಪ ಚಲವಾದಿ, ಕಾಶಪ್ಪ ಮಾದರ, ಯಲ್ಲಾಲಿಂಗ ಉಪ್ಪಲದಿನ್ನಿ, ಸಿದ್ದು ಲೋಟಗೇರಿ, ನಿಂಗಬಸಪ್ಪ ಬಿಸನಾಳ ಸೇರಿದಂತೆ ಮತ್ತೀತರರು, ಅಗಸಬಾಳ ಗ್ರಾಮದ…
