ಬಸವನಬಾಗೇವಾಡಿ: ಭಾರತ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ದೇವರ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ಎಂದು ಜವಳಿ.ಸಕ್ಕರೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಲಕ್ಷ್ಮೀ ನಗರದ ಕ್ವಾಟಿ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಅಷ್ಟ ಲಕ್ಷ್ಮೀಯರನ್ನು ಪೂಜಿಸುವ ಪರಂಪರೆ ಹೊಂದಿರುವ ದೇಶ ನಮ್ಮದು, ಅಪಾರ ಭಕ್ತರನ್ನ ಹೊಂದಿರುವ ಕ್ವಾಟಿ ಲಕ್ಷ್ಮೀ ದೇವಿಯ ಜಾತ್ರೆಯು ಪ್ರತಿ ವರ್ಷ ಅದ್ದೂರಿಯಾಗಿ ಜರಗುತ್ತಿರುವದು ಸಂತೋಷದ ಸಂಗತಿಯಾಗಿದೆ. ಅಲ್ಲದೇ ಕ್ವಾಟಿ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕಾಗೆ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಪರಶುರಾಮ ಅಡಗಿಮನಿ ಅವರು ಸರ್ಕಾರದಿಂದ ಅನುದಾನ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ ಸರ್ಕಾರ ಅನುದಾನ ನೀಡಲಿ ನೀಡದೆ ಇರಲಿ ನಾನು ನಿಮಗೆ ಕೊಟ್ಟ ಭರವಸೆಯಂತೆ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪ್ರವಚನ ಪುರಾಣಗಳಿಂದ ಮಾತ್ರ ಪರಿವರ್ತನೆ ಸಾಧ್ಯ, ಪ್ರತಿಯೊಬ್ಬರು ಪುರಾಣ ಪ್ರವಚನಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಅದ್ವೈತ ಆಶ್ರಮದ ಸಂಗಮೇಶ ಶರಣರು. ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ. ಮುಖಂಡ ರವಿ ಚಿಕ್ಕೊಂಡ ಮಾತನಾಡಿದರು. ಪುರಸಭೆ ಸದಸ್ಯ ರವಿ ಪಡಶೆಟ್ಟಿ. ಪಂಚಮಸಾಲಿ ಮುಖಂಡ ಮಲ್ಲನಗೌಡ ಪಾಟೀಲ. ರುಕ್ಮಿಣಿಯ ರಾಠೋಡ ಜಾತ್ರ ಉತ್ಸವ ಸಮಿತಿ ಅಧ್ಯಕ್ಷ ಗಣಪತಿ ಬಡಿಗೇರ ಪರಶುರಾಮ ಅಡಗಿಮನಿ ವೇದಿಕೆಯಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

