ದೇವರಹಿಪ್ಪರಗಿ: ಕಾಲುವೆಗೆ ಕಾಲು ಜಾರಿ ಬಿದ್ದು ರೈತನೊಬ್ಬ ಮೃತಪಟ್ಟ ಘಟನೆ ಕಡಕೋಳ ಗ್ರಾಮದ ಬಳಿ ಜರುಗಿದೆ.
ತಾಲ್ಲೂಕಿನ ಕಡಕೋಳ ಗ್ರಾಮದ ರೈತ ರೇವಣಸಿದ್ಧ ಖೈನೂರ(೩೦) ಕಾಲು ಜಾರಿ ಕಾಲುವೆಗೆ ಬಿದ್ದ ರೈತನಾಗಿದ್ದಾನೆ. ಗುರುವಾರ ಸಾಯಂಕಾಲ ಜಮೀನಿಗೆ ನೀರು ಹರಿಸಿ ಮೋಟಾರು ಬಂದ ಮಾಡಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ ನಂತರ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಶುಕ್ರವಾರ ಬೆಳಿಗ್ಗೆ ಮೃತದೇಹ ದೊರೆತಿದೆ. ಕಲಕೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
Related Posts
Add A Comment