ದೇವರಹಿಪ್ಪರಗಿ: ಸಮಾಜಸೇವೆಗೆ ದೊರೆತ ಅಲ್ಪ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ದೇವರಹಿಪ್ಪರಗಿ ಪಟ್ಟಣ ಪಂಚಾಯತಿಗೆ ನಾಮನಿರ್ದೇಶನಗೊಂಡ ನೂತನ ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಗುರುವಾರ ಸನ್ಮಾನ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಒಳ್ಳೆಯ ಕೆಲಸ ಮಾಡಬೇಕು. ಹುದ್ದೆಗಳು ಶಾಶ್ವತವಲ್ಲ, ಸದಾ ಸಮಾಜಸೇವೆಯ ಧ್ಯೇಯವಿಟ್ಟುಕೊಂಡು ಕಾರ್ಯತತ್ಪರರಾಗಬೇಕು ಎಂದು ಸೂಚಿಸಿ, ನೂತನವಾಗಿ ನಾಮನಿರ್ದೇಶನಗೊಂಡ ರಾಜು ಮೆಟಗಾರ, ಸುನೀಲ್ ಕನಮಡಿ, ಹುಸೇನ ಕೊಕಟನೂರ ಇವರಿಗೆ ಮಾರ್ಗದರ್ಶನ ಮಾಡಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ನಾಯಿಕ, ನಜೀರ ಬೀಳಗಿ, ಬಾಶೇಷಾಬ ಹಳ್ಳಿ, ಹಣಮಂತ ದೊಡಮನಿ, ಉಸ್ಮಾನ ಹಚ್ಯಾಳ, ಲಾಲಾಸಾಹೇಬ ಮಳಖೇಡ, ಹುಸೇನ್ ಗೌಂಡಿ, ಮಹಮ್ಮದರಫೀಕ ಮೊಮೀನ, ಹಸನ್ ನಧಾಫ್, ಸಯ್ಯದ ಮುಲ್ಲಾ, ಪೈಗಂಬರ ಹುಣಶ್ಯಾಳ, ಅಬ್ದುಲ್ ವಾಲೀಕಾರ ಸೇರಿದಂತೆ ಇತರರು ಇದ್ದರು.
Related Posts
Add A Comment