ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದ ಕೆರೆ ಬತ್ತಿ ಈ ಭಾಗದ ಜನ ಜಾನುವಾರು ಸಾಕಷ್ಟು ಹೈರಾಣಾಗಿದ್ದಾರೆ. ಕೆರೆ ತುಂಬುವ ಯೋಜನೆಯಡಿ ಅಗಸಬಾಳ ಗ್ರಾಮದ ಕೆರೆ ಕೂಡ ಇದ್ದು ಕೆರೆ ತುಂಬಲು ಅಧಿಕಾರಿಗಳು ಕಾಲುವೆ ಕಾಮಗಾರಿಯ ಅಪೂರ್ಣ ನೆಪ ಹೇಳುತ್ತಿದ್ದಾರೆ. ಅಪೂರ್ಣವಾದ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೂಡಲೇ ಕೆರೆ ತುಂಬಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಡೆ ಅಗಸಬಾಳ ಗ್ರಾಮದಿಂದ ಆಲಮಟ್ಟಿಯ ಕೆಬಿಜೆಎನ್‌ಎಲ್ ಕಚೇರಿಯ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಈ ಭಾಗದ ರೈತರಾದ ಎನ್.ಆರ್.ಮೊಕಾಶಿ, ರುದ್ರಗೌಡ ಪಾಟೀಲ, ದುಂಡಪ್ಪ ಅರಸುಣಗಿ, ಅರವಿಂದ ಕಾಶಿನಕುಂಟಿ, ಶರಣಯ್ಯ ಹಿರೇಮಠ, ಅಪ್ಪು ಕುಂಬಾರ, ಕಾಶಿನಾಥ ಅರಸುಣಗಿ, ಮಹಾಂತೇಶ ಕಾಶಿನಕುಂಟಿ, ರಾಮನಗೌಡ ಬಿರಾದಾರ, ಬಸನಗೌಡ ಪಾಟೀಲ, ಮುತ್ತಪ್ಪ ಉಪ್ಪಲದಿನ್ನಿ, ಸಿದ್ದಪ್ಪ ಚಲವಾದಿ, ಕಾಶಪ್ಪ ಮಾದರ, ಯಲ್ಲಾಲಿಂಗ ಉಪ್ಪಲದಿನ್ನಿ, ಸಿದ್ದು ಲೋಟಗೇರಿ, ನಿಂಗಬಸಪ್ಪ ಬಿಸನಾಳ ಸೇರಿದಂತೆ ಮತ್ತೀತರರು, ಅಗಸಬಾಳ ಗ್ರಾಮದ ಕೆರೆಯು ಐತಿಹಾಸಿಕ ಪ್ರಸಿದ್ದಿ ಪಡೆದಿದ್ದು, ಈ ಗ್ರಾಮದ ಮಾತ್ರವಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ರೈತರು ಇದೇ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ಕಳೆದ ೫-೬ ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ನೀರಿಲ್ಲದೇ ಈ ಕೆರೆ ಬತ್ತಿ ಹೋಗಿದ್ದು ಈ ಭಾಗದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯಲೂ ನೀರು ಸಿಗದೇ ಹಲವಾರು ಜಾರುವಾರುಗಳು ಸಾವನ್ನಪ್ಪಿವೆ. ರೈತರನ್ನು ಒಂದೆಡೆ ಬರಗಾಲ ಕಾಡುತ್ತಿದ್ದರೆ ಇನ್ನೊಂದೆಡೆ ಅಧಿಕಾರಿಗಳು ಕಾಡುತ್ತಿದ್ದಾರೆ. ಕೆರೆ ತುಂಬಿಸುವ ಯೋಜನೆಯ ಅಡಿಯಲ್ಲಿ ಅಗಸಬಾಳ ಕೆರೆ ಕೂಡ ಸ್ಥಾನ ಪಡೆದಿದ್ದು ಹೆಸರಿಗೆ ಮಾತ್ರ ಎಂಬಂತಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಕೆರೆಗಳನ್ನು ತುಂಬಿದ ಅಧಿಕಾರಿಗಳು ಈ ಕೆರೆ ತುಂಬಲು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆರೆ ತುಂಬುಲು ಯಾಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಕೆರೆಗೆ ನೀರು ತುಂಬುವ ಕಾಲುವೆ ಕಾಮಗಾರಿ ಅಪೂರ್ಣವಾಗಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆಯೇ ಹೊರತು ಅಪೂರ್ಣವಾಗ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ.
ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಪೂರ್ಣಗೊಂಡಿರುವ ಕಾಲುವೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ಕೆರೆಗೆ ನೀರು ಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಈ ಭಾಗದ ಅಂದಾಜು ೧೦೦೦ ಕ್ಕೂ ಹೆಚ್ಚು ರೈತರು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವದಾಗಿ ತಿಳಿಸಿದ್ದಾರೆ.
ಕಾಲುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
Related Posts
Add A Comment