ಸಿಂದಗಿ: ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆಯಿರುವ ಸಾತವಿರೇಶ್ವರ ಸಭಾಭವನದಲ್ಲಿ ನ.೧೮ ಮತ್ತು ೧೯ ರಂದು ಶ್ರೀ ಪದ್ಮರಾಜ ಮಹಿಳಾ ಪದವಿ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ್ ಕಬಡ್ಡಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಜರುಗಲಿದೆ ಎಂದು ಪ್ರಾಚಾರ್ಯ ಶಿವಮಾಂತ ಪೂಜಾರಿ ತಿಳಿಸಿದರು.
ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಹಾವಿದ್ಯಾಲಯದ ವತಿಯಿಂದ ಮಹಿಳಾ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ೧೫ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನೀರಿಕ್ಷೆ ಇದೆ ಎಂದರು.
ನ.೧೮ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯವನ್ನು ಜಮಖಂಡಿಯ ಕೊಣ್ಣೂರ ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಲಿದ್ದಾರೆ. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಉದ್ಘಾಟಿಸಲಿದ್ದಾರೆ. ಸಿಪಿಐ ಡಿ.ಹುಲುಗಪ್ಪ ಪಾರಿತೋಷಕ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಪ್ರೊ. ಸಕ್ಪಾಲ್ ಹೂವಣ್ಣ, ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ನಿಂಗಪ್ಪ ಕರೂರ, ಕಾರ್ಯದರ್ಶಿ ನೆಹರೂ ಪೋರವಾಲ್, ಸಹ-ಕಾರ್ಯದರ್ಶಿ ಅಶೋಕ ವಾರದ, ಖಜಾಂಚಿ ಗಂಗಾಧರ ಜೋಗುರ, ಸದಸ್ಯರಾದ ಅಶೋಕ ಮಸಳಿ, ರೇವಣಸಿದ್ದಪ್ಪ ಬೂದಿಹಾಳ, ಹಣಮಂತ್ರಾಯ ಪೂಜಾರ, ಡಾ.ಬಾಲಚಂದ್ರ ಉಪ್ಪಿನ, ವಿವೇಕಾನಂದ ಸಾಲಿಮಠ, ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪಾರಿತೋಷಕ ವಿತರಣೆಯಲ್ಲಿ ನಮ್ಮ ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಎಮ್,ಎಸ್. ಹೈಯಾಳಕರ, ಡಿ.ಎಮ್.ಪಾಟೀಲ, ವಿ.ಡಿ ಪಾಟೀಲ, ಬಿ.ಜಿ ಅವಟಿ, ನಿವೃತ್ತ ದೈಹಿಕ ನಿರ್ದೇಶಕ ಕೆ.ಹೆಚ್ ಸೋಮಾಪೂರ, ದೈಹಿಕ ನಿರ್ದೇಶಕ ರವಿ ಗೋಲಾ, ಜಗದೇವಿ ನಂದಿಕೋಲ ಇರಲಿದ್ದಾರೆ. ಮಾರ್ಗದರ್ಶಕರಾಗಿ ಎಸ್.ಎಸ್. ಮಲ್ಲೇದ, ಎಸ್.ಎಸ್. ಸಂಗಮ ಉದಯಕುಮಾರ ಬಿರಾದಾರ, ರೆಫ್ರಿಯಾಗಿ ಗವಿನಿದ್ದಪ್ಪ ಆನೆಗುಂದಿ, ಮಂಜುನಾಥ ತಳವಾರ, ಗುರುರಾಜ ಕುಳೇಕುಮಟಗಿ, ನೀಲಕಂಠ ಗೋಡೆಕರ, ಆರ್.ಆರ್ ನಿಂಬಾಳಕರ ನಡೆಸಿಕೊಡುವರು.
ಈ ವೇಳೆ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಗದಿಗಯ್ಯ ನಂದಿಮಠ, ಅನಿಲಕುಮಾರ ರಜಪೂತ, ಗಿರೀಶ ಕುಲಕರ್ಣಿ, ಪ್ರಭಾವತಿ ಮಾಲೀಪಾಟೀಲ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಗಂಗಾ ಪಾಟೀಲ, ಮಂಗಳಾ ಈಳಗೇರ, ಡಿ.ಎಮ್.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
Related Posts
Add A Comment