ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪತ್ರಿಕಾ ದಿನಾಚರಣೆ’
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಪತ್ರಿಕೋದ್ಯಮವು ಹೆಮ್ಮರವಾಗಿ ಬೆಳೆಯಲು ನಾಡಿನ ಹಿರಿಯ ಪರ್ತಕರ್ತರ ಕೊಡುಗೆ ಅಪಾರವಾಗಿದ್ದು, ಅವರ ಸನ್ಮಾರ್ಗದಲ್ಲಿ ನಾವಿಂದು ನಡೆಯಬೇಕಾಗಿದೆ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಎಂ.ಎಲ್.ಜಮಾದಾರ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲಿ ಹಮ್ಮಿಕೊಂಡ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಪ್ರತಿಕಾ ದಿನಾಚರಣೆ ಪ್ರತಿ ವರ್ಷ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಕನ್ನಡದ ಮೊಟ್ಟಮೊದಲ ದಿನ ಪತ್ರಿಕೆ ಮಂಗಳೂರು ಸಮಾಚಾರ ಜುಲೈ ೧ ೧೮೪೩ ರಂದು ಪ್ರಾರಂಭಿಸಲಾಯಿತು. ಅದರ ಹಿನ್ನೆಲೆ ಪ್ರತಿ ವರ್ಷ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಕನ್ನಡ ಪತ್ರಿಕೋಧ್ಯಮವು ಡವಿಜಿ. ಪಾಟೀಲ ಪುಟ್ಟಪ್ಪ, ಮೊಹರೆ ಹನುಮಂತರಾಯ ಇಂತಹ ಹಲವಾರು ವ್ಯಕ್ತಿಗಳಿಂದ ಬೃಹತ್ತಾಗಿ ಬೆಳೆದು ನಿಂತಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಪರ್ತಕರ್ತರನ್ನು ಗುರುತಿಸಿ ಗೌರವಿಸಲಾಗುತ್ತದೆ. ಹಿರಿಯ ಪತ್ರಕರ್ತರು ಕಾರ್ಯವೈಖರಿ ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೋಧಕರು, ಪತ್ರಿಕೋದ್ಯಮದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

