ದೇವರಹಿಪ್ಪರಗಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಅಂತರ ಕಾಲೇಜುಗಳ ೨ ದಿನಗಳ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಶುಕ್ರವಾರ ಕೊನೆಗೊಂಡಿತು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಬಾಲಕರ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಆರಂಭವಾದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಅಂತರ ಕಾಲೇಜುಗಳ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಅಥಣಿ ಶ್ರೀಶಿವಯೋಗಿ ಮುರುಗೇಂದ್ರ ಕಾಲೇಜು ಪ್ರಥಮ, ಎಸ್.ಎ.ಜಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯ ಮರಡಿಮಠ ದ್ವೀತಿಯ, ಎಸ್.ಪಿ.ಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ರಾಯಭಾಗ ತೃತಿಯ ಹಾಗೂ ಬಸವನಬಾಗೇವಾಡಿಯ ಜಿ.ಎಫ್.ಜಿ.ಸಿ ಮಹಾವಿದ್ಯಾಲಯ ನಾಲ್ಕನೆಯ ಸ್ಥಾನ ಪಡೆದವು.
ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ ಹಾಗೂ ಪ್ರಾಂಶುಪಾಲ ಅಶೋಕ ಹೆಗಡೆ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ಆರಂಭವಾದ ಕಬಡ್ಡಿ ಪಂದ್ಯಾವಳಿ ಸ್ಥಳೀಯ ಕ್ರೀಡಾಪ್ರೇಮಿಗಳನ್ನು ಆಕರ್ಷಿಸುವಲ್ಲಿ ಸಫಲವಾಗಿ, ಯಶಸ್ವಿಯಾಗಿ ಮುಕ್ತಾಯಗೊಂಡಿತು. ಗುರುವಾರ ರಾತ್ರಿ ೯ ಗಂಟೆಯವರೆಗೆ ಜರುಗಿದ ಹೊನಲು ಬೆಳಕಿನ ಪಂದ್ಯಗಳನ್ನು ಸಾರ್ವಜನಿಕರು ಉತ್ಸಾಹದಿಂದ ವೀಕ್ಷಿಸಿದರು.
ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಆಡಳಿತದಿಂದ ಮಾಡಲಾದ ಊಟ ಹಾಗೂ ಉಪಹಾರ ವ್ಯವಸ್ಥೆ ಅಷ್ಟಾಗಿ ಉತ್ತಮವಾಗಿರಲಿಲ್ಲ. ಗುರುವಾರ ರಾತ್ರಿ ಕ್ರೀಡಾಳುಗಳಿಗೆ ಸಣ್ಣ ತಟ್ಟೆಯಲ್ಲಿ ಮಿತವಾಗಿ ಆಹಾರ ವಿತರಿಸಲಾಯಿತು. ವಸತಿ ವ್ಯವಸ್ಥೆಯು ಸಮಾಧಾನಕರವಾಗಿರಲಿಲ್ಲ ಎಂದು ಸ್ಪರ್ಧಾಳುಗಳು ದೂರಿದ್ದು ಕಂಡು ಬಂತು. ಶುಕ್ರವಾರ ಸಾಯಂಕಾಲ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಪಂದ್ಯಾವಳಿಗೆ ವಿದಾಯ ಹೇಳಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಅಧೀಕ್ಷಕ ಜಗನ್ನಾಥ ಸಜ್ಜನ, ಪ್ರಕಾಶ ಮಲ್ಲಾರಿ, ರಾಜು ಕಾಖಂಡಕಿ, ಪಿ.ಸಿ.ತಳಕೇರಿ, ಎಸ್.ಬಿ.ಜಾಲವಾದಿ, ಅಕ್ರಮ್ ಪಾಷಾ ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

