ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸಿಂದಗಿ ಡಿಪೋದಿಂದ ಬರುವ ಸಿಂದಗಿ ಕೆಂಭಾವಿ ಪುಣೆ (ಕೆಎ-28 .ಎಫ್ -2449) ಬಸ್ಸಲ್ಲಿ ಕೆಂಭಾವಿಗೆ ಆಗಮಿಸಿದ ಮುದನೂರು ಗ್ರಾಮದ ಮಹಿಳೆ ತಮ್ಮ ಚೀಲವನ್ನು ಮರೆತು ಬಿಟ್ಟು ಹೋಗಿದ್ದರು, ಹೌಹಾರಿದ ಮಹಿಳೆ ಮರೆತು ಹೋದ ಚೀಲವನ್ನು ಪುನಃ ಕೆಂಭಾವಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪುಣೆ ಬಸ್ಸಿನ ಕಂಡಕ್ಟರ್ ಆರ್ ಎಸ್ ಬೂದಿಹಾಳ (206) ಡ್ರೈವರ್ ಬಿ ಎಂ ಪೂಜಾರಿ (134) ಇವರನ್ನು ಕೇಳಿದಾಗ ಆ ಚೀಲದಲ್ಲಿ ಏನಿದೆ ಎಂದು ಪ್ರಶ್ನಿಸಿದ ಕಂಡಕ್ಟರ ಚೀಲದಲ್ಲಿ ಸುಮಾರು 2-3 ತೊಲೆ ಬಂಗಾರದ ತಾಳಿ ಕಿವಿಯೋಲೆ ಇವೆ ಎಂದಾಗ ಕೆಂಭಾವಿಯ ಸಂಚಾರಿ ನಿರೀಕ್ಷರ ಸಮ್ಮುಖದಲ್ಲಿ ಮಹಿಳೆಯನ್ನು ವಿಚಾರಣೆ ನಡೆಸಿ ಮರೆತು ಹೋದ ಚೀಲವನ್ನು ಮತ್ತು ಬಂಗಾರದ ಒಡವೆಗಳನ್ನು ಮರಳಿ ಕೊಟ್ಟ ಕಂಡಕ್ಟರ್ ಹಾಗೂ ಡ್ರೈವರ್ ಈರ್ವರು ಪ್ರಾಮಾಣಿಕತೆಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಣೆ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಲ್ಲಿಕಾರ್ಜುನ ಮರಡ್ಡಿ ಮಾತನಾಡಿ ಬಂಗಾರ ಎಂದರೆ ಬಾಯಿ ತೆರೆಯುವ ಕಾಲಘಟ್ಟದಲ್ಲಿ ಇಂತವರು ಸಿಗುವುದು ಅಪರೂಪ ಇವರ ಪ್ರಾಮಾಣಿಕತೆಯನ್ನು ಸರ್ಕಾರ ಗುರುತಿಸಿ ಗೌರವಿಸಬೇಕು ಎಂದರು. ಶಿಕ್ಷಕರಾದ ಅಲಿ ಅಹ್ಮದ್ ಬಡೆಮಗೋಳ್, ಮತ್ತು ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಅನೇಕ ಪ್ರಯಾಣಿಕರು ಕಂಡಕ್ಟರ್ ಹಾಗೂ ಡ್ರೈವರ್ ಪ್ರಾಮಾಣಿಕತೆಯನ್ನು ಮುಕ್ತ ಕಂಠದಿಂದ ಕೊಂಡಾಡಿದರು

