ಸಿಂದಗಿ: ಪಟ್ಟಣದಲ್ಲಿ ನ.೨೬ರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಓಟವನ್ನು ಪ್ಲೆöಯ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗಣೇಶ ಕನ್ಸಸ್ಟ್ರಕ್ಷನ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪರಶುರಾಮ ಕಾಂಬಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಓಟದಲ್ಲಿ ಪ್ರಥಮ ಬಹುಮಾನ ೨೫೦೦೦ರೂ. ಹಾಗೂ ದ್ವೀತಿಯ ಬಹುಮಾನ ೧೧೦೦೦ರೂ. ಜೊತೆಗೆ ಪಾರಿತೋಷಕ ನೀಡಲಾಗುವುದು. ಸದರಿ ಓಟದಲ್ಲಿ ಪಾಲ್ಗೊಂಡ ಓಟಗಾರರಿಗೆ ಆಯೋಜಕರಿಂದ ಅಭಿನಂದನಾ ಪತ್ರ ಹಾಗೂ ಟೀ-ಶರ್ಟ್ ನೀಡಲಾಗುತ್ತದೆ. ಓಟದಲ್ಲಿ ಪಾಲ್ಗೋಳಲು ನ.೨೩ ಸಾಯಂಕಾಲ ೫ಗಂಟೆಯವರೆಗೆ ಹೆಸರು ನೊಂದಣಿಗೆ ಅವಕಾಶವಿದ್ದು, ಆಸಕ್ತರು ನೋಂದಣಿ ಮಾಡಿಕೋಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ನಿಂಗರಾಜ ಗುಡಿಮನಿ, ಶಿವಾನಂದ ಆಲಮೇಲ ೯೬೬೩೯೯೫೫೭೧/೯೯೦೧೪೪೭೫೦೩ ಅವರನ್ನು ಸಂಪರ್ಕಿಸಬಹುದಾಗಿದೆ.
Related Posts
Add A Comment