Author: editor.udayarashmi@gmail.com

ವಿಜಯಪುರ: ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ವಿಜಯಪುರ ನಗರದ ತನು ಫೌಂಡೇಶನ್ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸುವುರೊಂದಿಗೆ ಕನ್ನಡ ನಾಡು ನುಡಿ ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳಿ ತಮ್ಮ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ತನು ಕನ್ನಡ ಮನ ಕನ್ನಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅರ‍್ವಯ ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ತಿಂಗಳ ೨೯ ನೇ ತಾರೀಖಿನಂದು ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹೆಲೆನ್ ಮೈಸೂರು, ಪುಷ್ಪಾ ಹಿರೇಮಠ, ಡಾ||ಪ್ರವೀಣ ಬಗಲಿ, ವೀರೇಶ ವಾಲಿ, ಶ್ರೀವಿಜಯಕುಮಾರ ಮಮದಾಪುರ, ಡಾ.ಸುರೇಶ ಲೋಣಿ, ಮಹಾಂತೇಶ ಮಾಹೂರ, ನಾಶಿ ದಂಪತಿಗಳು, ಸಿದ್ಧಣ್ಣ ವಿಜಾಪುರ, ಸಿದ್ರಾಮ ಅಗಸರ, ಕುಮಾರ ಅಮಾತೆಪ್ಪ ಪೂಜಾರಿ, ವಿಎಸ್‌ಜಿ ಗ್ರೂಪ್ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಅನಿತಾ ಕೆ.ಆರ್ ಪೇಟೆ, ಗಿರೀಶ ಇಟ್ಟಂಗಿ, ಸೋಮನಾಥ ವಾಲಿಕಾರ, ಪ್ರೇಮ ಚಲವಾದಿ, ಧನ ಲಕ್ಷ್ಮಿ ದೊಡಮನಿ, ಸುರೇಶ ಜತ್ತಿ, ಸಂಗನಬಸವರಾಜ ಗೂಡ್ಲುಮನಿ ವಿಶೇಷ ಸನ್ಮಾನ ಪಡೆದುಕೊಳ್ಳಲಿದ್ದಾರೆ.ಇಂಡಿಯ ರಿಸರ್ವ…

Read More

ಆರೆಸ್ಸೆಸ್ ನಗರ ವಾರ್ಷಿಕೋತ್ಸವ | ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಸ್ಪಷ್ಠನೆ ವಿಜಯಪುರ: ಕೊರೊನಾದಂಥ ಅನೇಕ ವೈರಸ್ ನಮ್ಮ ಜೊತೆಗಿದ್ದು ಜಾತಿಗಳ ನಡುವೆ ವಿಘಟನೆ ಮತ್ತು ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತವೆ ಎಂದು ಆರ್ ಎಸ್ ಎಸ್ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದ್ದಾರೆ.ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆರ್ ಎಸ್ ಎಸ್ ನಗರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಹಿಂದೂ ಎಂಬುದು ಕೇವಲ ಮೆರವಣಿಗೆಯ ಘೋಷಣೆಗೆ ಸೀಮಿತವಾಗಬಾರದು. ಪ್ರತಿದಿನ ಹಿಂದೂ ಆಗಬೇಕು. ಹಿಂದೂ ಸಮಾಜ ಎಷ್ಟು ಬೇಗ ಸಂಘಟಿತವಾಗುತ್ತದೆಯೋ ಅಷ್ಟೇ ಸಮಯದಲ್ಲಿ ಗುಂಪುಗಳಾಗಿ ವಿಭಜನೆಯಾಗುತ್ತದೆ. ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ. ದುಷ್ಟಶಕ್ತಿಗಳು ಈ ರೀತಿಯ ಸವಾಲುಗಳನ್ನು ಭಾರತದಲ್ಲಿ ಯಾವಾಗಲೂ ಇರಿಸುತ್ತಿರುತ್ತವೆ. ಅವುಗಳನ್ನು ನಾವು ಸಂಘಟಿತರಾಗಿ ಸಮರ್ಥವಾಗಿ ಎದುರಿಸಬೇಕಿದೆ ಎಂದು ಹೇಳಿದರು.ಅಧಿಕಾರಿಯೊಬ್ಬರನ್ನು ನಾವು ಕರೆದು ಚಹಾ ಕುಡಿಸುತ್ತೇವೆ. ಆದರೆ ಪೌರ ಕಾರ್ಮಿಕ ಬಂಧುಗಳನ್ನು ಕರೆದು ಚಹಾ ಕುಡಿಸುತ್ತೆವೆಯೇ? ಈ ಕಾರಣಕ್ಕಾಗಿಯೇ ಅವರು ರಾಬರ್ಟ್…

Read More

ನವದೆಹಲಿ: ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.2008 ರಲ್ಲಿ ಟಿವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ 5 ನೇ ಆರೋಪಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲೀಕ್ ಹಾಗೂ ಅಜಯ್ ಕುಮಾರ್ ಎಂಬ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಅಪರಾಧಿಗಳಿಗೆ ತಲಾ 1.25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಐದನೇ ಅಪರಾಧಿ ಅಜಯ್ ಸೇಥಿಗೆ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 7.25 ಲಕ್ಷ ರೂ ದಂಡ ವಿಧಿಸಲಾಗಿದೆ.ಆದಾಗ್ಯೂ, ಅಪರಾಧಿಗಳು ಈಗಾಗಲೇ 14 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅಪರಾಧಿಗಳಿಗೆ ವಿಧಿಸಲಾದ ಒಟ್ಟು ದಂಡದ ಮೊತ್ತದಲ್ಲಿ 12 ಲಕ್ಷ ರೂ.ಗಳನ್ನು ಸಂತ್ರಸ್ತೆಯ ಕುಟುಂಬಕ್ಕೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.ಶಿಕ್ಷೆಯ ಪ್ರಮಾಣವನ್ನು ಆದೇಶಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಅಪರಾಧವು ಅಪರೂಪದ ಅಪರೂಪದ…

Read More

ಚಡಚಣ: ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ರವಿವಾರ ದಿನಾಂಕ:೧೯-೧೧-೨೦೨೩ ರಂದು ಬೆಳಿಗ್ಗೆ ೬ ಗಂಟೆಗೆ ಗ್ರಾಮದ ಎಲ್ಲ ದೇವಾದಿಗಳ ಅಭಿಷೇಕ ಕಾರ್ಯಕ್ರಮ ಜರುಗುವುದು,ಮುಂಜಾನೆ ೧೦-೦೦ ಗಂಟೆಗೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ವಾಲಗ ಕಾರ್ಯಕ್ರಮ ಜರುಗುವುದು.ಮದ್ಯಾಹ್ನ ೩-೦೦ ಗಂಟೆಗೆ ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ಧುಮಕನಾಳ,ಶ್ರೀ ಲಾಯಗಂಗಾ ದೇವಿ ಪಲ್ಲಕ್ಕಿ ಹಡಲಸಂಗ,ಹಾಗೂ ಶ್ರೀ ಲಕ್ಷ್ಮಿ ದೇವಿ ಪಲ್ಲಕ್ಕಿ ಸಾತಲಗಾಂವ, ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ನಂದರಗಿ ಹಾಗೂ ಶ್ರೀ ಮಾಳಿಂಗರಾಯ ಪಲ್ಲಕ್ಕಿ ಶಿಗಣಾಪುರ ದೇವರುಗಳ ಭೇಟಿ ಕಾರ್ಯಕ್ರಮ ಸಕಲ ವಾದ್ಯ ವೈಭವದೊಂದಿಗೆ ಎಲ್ಲ ದೇವರುಗಳನ್ನು ಬರಮಾಡಿಕೊಂಡು ಸಮಾಗಮ ಭೇಟಿ ಕಾರ್ಯಕ್ರಮ ಜರುಗುವುದು. ನಂತರ ನುಡಿಮುತ್ತು ಕಾರ್ಯಕ್ರಮ ಜರುಗುವುದು. ಸಾಯಂಕಾಲ ೬-೦೦ ಗಂಟೆಗೆ ದೇವರುಗಳ ಪೂಜಾ ಕಾರ್ಯಕ್ರಮ ಜರುಗುವುದು. ರಾತ್ರಿ ೯-೩೦ ಗಂಟೆಯಿಂದ ಬೆಳಿಗ್ಗೆ ೬-೦೦ ಗಂಟೆಯ ವರೆಗೆ ಧುಮಕನಾಳ ಗ್ರಾಮದ ಶ್ರೀ ಭೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದಿಂದ ಸುಪ್ರಸಿದ್ದ ಡೊಳ್ಳಿನ ಗಾಯಕ ಶ್ರೀ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಠನೆ ಸರ್ಕಾರದಿಂದ ಆಶ್ವಾಸನೆಗಳ ಈಡೇರಿಕೆ | ಎಚ್ಡಿಕೆಯಿಂದ ದ್ವೇಷಾಸೂಯೆ ರಾಜಕಾರಣ | ವಿದ್ಯುತ್ ಕಳವು ಮಾಡಿದವರಿಗೆ ಆರೋಪಿಸುವ ನೈತಿಕತೆಯಿಲ್ಲ ಮೈಸೂರು: ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ. ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಇಂದು ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಕೇವಲ 66 ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅವರ ಮಗ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಅವರ ಪಕ್ಷದ…

Read More

ಕೊಲ್ಹಾರ: ಮಹಿಳೆಯರಿಗೆ ಹೊರ ಜಗತ್ತನ್ನು ಪರಿಚಯಿಸಿ ಆರ್ಥಿಕತೆಯ ಸ್ವಾವಲಂಭಿ ಬದುಕಿಗೆ ದಾರಿದೀಪವಾಗಿರುವುದು ಸಹಕಾರಿ ಸಂಘದ ಹೆಗ್ಗಳಿಕೆಯಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ತಾಲೂಕಿನ ಕೂಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ೭೦ ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ ಸಹಕಾರ ವಿಮಾ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ ಮಾತನಾಡಿ, ಕೇವಲ ೧೦-೧೨ ವರ್ಷಗಳ ಕಾಲಾವಧಿಯಲ್ಲಿ ಕೂಡಗಿ ಸಹಕಾರಿ ಸಂಘ ಸುಸಜ್ಜಿತ ಕಟ್ಟಡ ಹೊಂದಿ ಪ್ರಗತಿಯ ಪಥದತ್ತ ಮುನ್ನಡೆದು ಪ್ರಸ್ತುತ ವರ್ಷ ೭.೯೩ ಲಕ್ಷ ರೂ., ಲಾಭ ಗಳಿಸಿ ಗ್ರಾಮೀಣಾಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಮಾತನಾಡುತ್ತ ಬಸವಣ್ಣನವರ ಕಾಲದಿಂದಲೂ ಸಹಕಾರ ತತ್ವ ಮುನ್ನಡೆದು ಬಂದ ದಾರಿಯನ್ನು ಸ್ಮರಿಸುತ್ತ ಉಪನ್ಯಾಸ ನೀಡಿದರು.ಸಾನಿಧ್ಯ ವಹಿಸಿದ್ದ ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ…

Read More

ಕೊಲ್ಹಾರ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕೊಲ್ಹಾರ ತಾಲೂಕಾ ಯುವ ಘಟಕದ ಪದಾಧಿಕಾರಿಗಳನ್ನು ಅಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಯುವ ಘಟಕದ ಅಧ್ಯಕ್ಷರನ್ನಾಗಿ ಸಂತೋಷ ಬಸಪ್ಪ ಹಡರೊಳ್ಳಿ, ಗೌರವ ಅಧ್ಯಕ್ಷರಾಗಿ ಯಲ್ಲಪ್ಪ ಹಣಮಂತ ಪೂಜಾರಿ, ಉಪಾಧ್ಯಕ್ಷರಾಗಿ ಶಶಿಧರ ಮಠ, ಪದಾದಿಕಾರಿಗಳಾಗಿ ಮಲ್ಲು ಉಗ್ರಾಣ, ಆನಂದ ಬಡಿಗೇರ, ಕಲಬಸಯ್ಯ ಕಂಬಿ, ಕಲ್ಲಪ್ಪ ಬೆಳ್ಳುಬ್ಬಿ, ಸಚಿನ ನೀಲವಾಣಿ, ಶಾಲು ಬಿಜಾಪೂರ, ಶಿವಶಂಕರ ಏಳಗಂಟಿ, ಶಿವಪ್ಪ ಸಂಧಿಮನಿ, ಸಂಗು ಹಡರೊಳ್ಳಿ ಇವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಕೊಲ್ಹಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆರ್.ಅಶೋಕ ಅವರನ್ನು ವರಿಷ್ಠರು ಹಾಗೂ ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸನಸಭೆಯ ಅನುಭವಿ ರಾಜಕಾರಣಿ ಪಕ್ಷದ ನಿಷ್ಟಾವಂತ ಸಾಮಾನ್ಯ ಕಾರ್ಯಕರ್ತನಿಗೆ ಒಲಿದ ಅದೃಷ್ಟ ಆರ್.ಅಶೋಕ ಅವರ ಪಾಲಾಗಿರುವದು ಬಿಜೆಪಿ ಪಕ್ಷವು ಹಿರಿತನಕ್ಕೆ ಮತ್ತು ಪಕ್ಷ ನಿಷ್ಟೆಗೆ ಒಲಿಯುತ್ತದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ಅದರಂತೆ ಯುವ ಮುಖಂಡ ಬಿ.ವಾಯ್.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿರುವ ಹೈಕಮಾಂಡ್ ನಿರ್ಧಾರವನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ ಎಂದರು.ಯುವಕರಾದ ವಿಜಯೇಂದ್ರ ಹಾಗೂ ಹಿರಿಯರಾದ ಆರ್.ಅಶೋಕ ಅವರು ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜೋಡೆತ್ತಿನ ಹಾಗೆ ಪಕ್ಷದ ಸಂಘಟಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ನಿಭಾಯಿಸಲು ಕೆಲಸಮಾಡಿ ಭಾರತೀಯ ಜನತಾಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸಲು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವ ಆಶಾಭಾವನೆ ಮೂಡಿದೆ ಎಂದರು.

Read More

ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಪ್ರಪ್ರಥಮ ಬಾರಿಗೆ ಪದವಿ ಪೂರ್ವ ಮಹಾವಿದ್ಯಾಲಯಗಳ ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ೧೯ ರಿಂದ ೨೧ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ ಬ ಪತಂಗಿ ಹೇಳಿದರು.ಕ್ರೀಡಾಕೂಟದ ಸಿದ್ದತೆಯನ್ನು ವೀಕ್ಷಿಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಯಂಕಾಲ ಕ್ರೀಡಾಪಟುಗಳಿಂದ ಪಟ್ಟಣದ ಪ್ರಮುಖ ರಾಜಬೀದಿಯಲ್ಲಿ ಪಥಸಂಚಲನ ನಡೆಯುವದು. ನಂತರ ಸಂಜೆ ೬ಘಂಟೆಗೆ ಉದ್ಘಾಟನೆ ಕಾರ್ಯಕ್ರಮ ಇರುವದು. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉಪನಿರ್ದೇಶಕರ ಕಛೇರಿ ವಿಜಯಪೂರ ಮತ್ತು ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುವುದು ಎಂದರು.ಕನ್ನೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸುವರು. ಅಧ್ಯಕ್ಷತೆಯನ್ನು ಸಚಿವ ಶಿವಾನಂದ ಪಾಟೀಲ ವಹಿಸುವರು. ಅತಿಥಿಗಳಾಗಿ ಅವಳಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು ಜಿಲ್ಲೆಯ ಸರ್ವ…

Read More

ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳ ಪಾಲಕರ ಸಭೆ: ೪೩೫೮೪ ಮಕ್ಕಳ ಪಾಲಕರು ಭಾಗಿ ವಿಜಯಪುರ: ಪ್ರತಿ ತಿಂಗಳು ನಡೆಯುವ ಪಾಲಕರ ಸಭೆಯನ್ನು ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ೪೩೫೮೪ ಮಕ್ಕಳ ಪಾಲಕರು ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ ಅವರು ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಾಲಕರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಲಾಖೆಯು ಮಹಿಳೆಯರ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು, ಇಲಾಖೆಯ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಜಿಲ್ಲೆಯ ಎಲ್ಲ ಪಾಲಕರು ಮುಂದೆ ಬರಬೇಕು ಎಂದರು. ಅಂಗನವಾಡಿ ಕೇಂದ್ರದಲ್ಲಿ ಎಲ್ಲ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ಸರ್ಕಾರದ ನಿರ್ದೇಶನದಂತೆ ನೀಡಲಾಗುತ್ತಿದೆ. ಎಲ್ಲ ಅಂಗನವಾಡಿ ಕೇಂದ್ರಗಳು ಇಲಾಖೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಜೊತೆಗೆ ಸಮುದಾಯದ ಸಹಭಾಗಿತ್ವವು ತುಂಬಾ ಮುಖ್ಯವಾಗಿದೆ. ಎಲ್ಲ ಪಾಲಕರು ಅಂಗನವಾಡಿ ಕೇಂದ್ರ ತಮ್ಮ ಆಸ್ತಿಯಂತೆ…

Read More