ವಿಜಯಪುರ: ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ವಿಜಯಪುರ ನಗರದ ತನು ಫೌಂಡೇಶನ್ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸುವುರೊಂದಿಗೆ ಕನ್ನಡ ನಾಡು ನುಡಿ ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳಿ ತಮ್ಮ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ತನು ಕನ್ನಡ ಮನ ಕನ್ನಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅರ‍್ವಯ ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ತಿಂಗಳ ೨೯ ನೇ ತಾರೀಖಿನಂದು ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹೆಲೆನ್ ಮೈಸೂರು, ಪುಷ್ಪಾ ಹಿರೇಮಠ, ಡಾ||ಪ್ರವೀಣ ಬಗಲಿ, ವೀರೇಶ ವಾಲಿ, ಶ್ರೀವಿಜಯಕುಮಾರ ಮಮದಾಪುರ, ಡಾ.ಸುರೇಶ ಲೋಣಿ, ಮಹಾಂತೇಶ ಮಾಹೂರ, ನಾಶಿ ದಂಪತಿಗಳು, ಸಿದ್ಧಣ್ಣ ವಿಜಾಪುರ, ಸಿದ್ರಾಮ ಅಗಸರ, ಕುಮಾರ ಅಮಾತೆಪ್ಪ ಪೂಜಾರಿ, ವಿಎಸ್‌ಜಿ ಗ್ರೂಪ್ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಅನಿತಾ ಕೆ.ಆರ್ ಪೇಟೆ, ಗಿರೀಶ ಇಟ್ಟಂಗಿ, ಸೋಮನಾಥ ವಾಲಿಕಾರ, ಪ್ರೇಮ ಚಲವಾದಿ, ಧನ ಲಕ್ಷ್ಮಿ ದೊಡಮನಿ, ಸುರೇಶ ಜತ್ತಿ, ಸಂಗನಬಸವರಾಜ ಗೂಡ್ಲುಮನಿ ವಿಶೇಷ ಸನ್ಮಾನ ಪಡೆದುಕೊಳ್ಳಲಿದ್ದಾರೆ.
ಇಂಡಿಯ ರಿಸರ್ವ ಬೆಟಾಲಿಯನ್ ಕಮಾಂಡೆಂಟ್ ಎನ್. ಬಿ.ಮೆಳ್ಳೆಗಟ್ಟಿ, ಡಾ.ಶರಣ ಮಳಖೇಡ್ಕರ್, ವಿಜಯಲಕ್ಷ್ಮೀ ಬಾಳಿ, ಈರಣ್ಣ ಪಟ್ಟಣಶೆಟ್ಟಿ, ರಾಜೇಶ್ವರಿ ಜುಗತಿ, ಮಲ್ಲಿಕಾರ್ಜುನ ಬೃಂಗೀಮಠ, ಜೆ.ಹೆಚ್.ಮಣ್ಣೂರ, ಕಬೂಲ್ ಕೊಕಟನೂರ, ಡಾ.ಸನ್ಮತಿ ಕುರುಂದವಾಡೆ, ಪ್ರತಿಭಾ ಪಾಟೀಲ್, ಪ್ರದೀಪ ಅಂಗಡಿ ಉಪಸ್ಥಿತರಿರುತ್ತಾರೆ ಎಂದು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
