ಕೊಲ್ಹಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆರ್.ಅಶೋಕ ಅವರನ್ನು ವರಿಷ್ಠರು ಹಾಗೂ ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸನಸಭೆಯ ಅನುಭವಿ ರಾಜಕಾರಣಿ ಪಕ್ಷದ ನಿಷ್ಟಾವಂತ ಸಾಮಾನ್ಯ ಕಾರ್ಯಕರ್ತನಿಗೆ ಒಲಿದ ಅದೃಷ್ಟ ಆರ್.ಅಶೋಕ ಅವರ ಪಾಲಾಗಿರುವದು ಬಿಜೆಪಿ ಪಕ್ಷವು ಹಿರಿತನಕ್ಕೆ ಮತ್ತು ಪಕ್ಷ ನಿಷ್ಟೆಗೆ ಒಲಿಯುತ್ತದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ಅದರಂತೆ ಯುವ ಮುಖಂಡ ಬಿ.ವಾಯ್.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿರುವ ಹೈಕಮಾಂಡ್ ನಿರ್ಧಾರವನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ ಎಂದರು.
ಯುವಕರಾದ ವಿಜಯೇಂದ್ರ ಹಾಗೂ ಹಿರಿಯರಾದ ಆರ್.ಅಶೋಕ ಅವರು ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜೋಡೆತ್ತಿನ ಹಾಗೆ ಪಕ್ಷದ ಸಂಘಟಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ನಿಭಾಯಿಸಲು ಕೆಲಸಮಾಡಿ ಭಾರತೀಯ ಜನತಾಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸಲು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವ ಆಶಾಭಾವನೆ ಮೂಡಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

