ಕೊಲ್ಹಾರ: ಮಹಿಳೆಯರಿಗೆ ಹೊರ ಜಗತ್ತನ್ನು ಪರಿಚಯಿಸಿ ಆರ್ಥಿಕತೆಯ ಸ್ವಾವಲಂಭಿ ಬದುಕಿಗೆ ದಾರಿದೀಪವಾಗಿರುವುದು ಸಹಕಾರಿ ಸಂಘದ ಹೆಗ್ಗಳಿಕೆಯಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನ ಕೂಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ೭೦ ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸಹಕಾರ ವಿಮಾ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ ಮಾತನಾಡಿ, ಕೇವಲ ೧೦-೧೨ ವರ್ಷಗಳ ಕಾಲಾವಧಿಯಲ್ಲಿ ಕೂಡಗಿ ಸಹಕಾರಿ ಸಂಘ ಸುಸಜ್ಜಿತ ಕಟ್ಟಡ ಹೊಂದಿ ಪ್ರಗತಿಯ ಪಥದತ್ತ ಮುನ್ನಡೆದು ಪ್ರಸ್ತುತ ವರ್ಷ ೭.೯೩ ಲಕ್ಷ ರೂ., ಲಾಭ ಗಳಿಸಿ ಗ್ರಾಮೀಣಾಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಮಾತನಾಡುತ್ತ ಬಸವಣ್ಣನವರ ಕಾಲದಿಂದಲೂ ಸಹಕಾರ ತತ್ವ ಮುನ್ನಡೆದು ಬಂದ ದಾರಿಯನ್ನು ಸ್ಮರಿಸುತ್ತ ಉಪನ್ಯಾಸ ನೀಡಿದರು.
ಸಾನಿಧ್ಯ ವಹಿಸಿದ್ದ ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಚಂದ್ರಶೇಖರಗೌಡ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಎಸ್. ತಳೇವಾಡ, ನಿರ್ದೇಶಕ ಕಲ್ಲಪ್ಪ ಸೊನ್ನದ, ಪಿಕೆಪಿಎಸ್ ಅಧ್ಯಕ್ಷ ಲಕ್ಕಪ್ಪ ಮನಗೂಳಿ, ಉಪಾಧ್ಯಕ್ಷ ಮಂತ್ರಿ ಲಮಾಣಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಂಗರಗಿ, ಪ್ರಮುಖರಾದ ಕೃಷ್ಣಾ ಜಿ ಕುಲಕರ್ಣಿ, ಸಾಹೇಬಗೌಡ ಪಾಟೀಲ, ಶಾಂತಪ್ಪ ತೊರವಿ, ಮಲ್ಲು ಮಿಣಜಗಿ, ಶಿವಪ್ಪ ಗುಡದಿನ್ನಿ, ಅಪ್ಪು ದೇಸಾಯಿ, ಲಕ್ಕಪ್ಪ ದಳವಾಯಿ ಮತ್ತಿತರರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಸಂಗಮೇಶ ಬಿಜಾಪೂರ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಬಿಸನಾಳ ನಿರೂಪಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

