Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಲಾಖೆ ಜೊತೆ ಸಮುದಾಯದ ಸಹಭಾಗಿತ್ವ ಮುಖ್ಯ :ಚವ್ಹಾಣ
(ರಾಜ್ಯ ) ಜಿಲ್ಲೆ

ಇಲಾಖೆ ಜೊತೆ ಸಮುದಾಯದ ಸಹಭಾಗಿತ್ವ ಮುಖ್ಯ :ಚವ್ಹಾಣ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳ ಪಾಲಕರ ಸಭೆ: ೪೩೫೮೪ ಮಕ್ಕಳ ಪಾಲಕರು ಭಾಗಿ

ವಿಜಯಪುರ: ಪ್ರತಿ ತಿಂಗಳು ನಡೆಯುವ ಪಾಲಕರ ಸಭೆಯನ್ನು ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ೪೩೫೮೪ ಮಕ್ಕಳ ಪಾಲಕರು ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ ಅವರು ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಾಲಕರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಲಾಖೆಯು ಮಹಿಳೆಯರ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು, ಇಲಾಖೆಯ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಜಿಲ್ಲೆಯ ಎಲ್ಲ ಪಾಲಕರು ಮುಂದೆ ಬರಬೇಕು ಎಂದರು. ಅಂಗನವಾಡಿ ಕೇಂದ್ರದಲ್ಲಿ ಎಲ್ಲ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ಸರ್ಕಾರದ ನಿರ್ದೇಶನದಂತೆ ನೀಡಲಾಗುತ್ತಿದೆ. ಎಲ್ಲ ಅಂಗನವಾಡಿ ಕೇಂದ್ರಗಳು ಇಲಾಖೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಜೊತೆಗೆ ಸಮುದಾಯದ ಸಹಭಾಗಿತ್ವವು ತುಂಬಾ ಮುಖ್ಯವಾಗಿದೆ. ಎಲ್ಲ ಪಾಲಕರು ಅಂಗನವಾಡಿ ಕೇಂದ್ರ ತಮ್ಮ ಆಸ್ತಿಯಂತೆ ಭಾವಿಸಿ, ಕೇಂದ್ರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಅಂಗನವಾಡಿ ಕೇಂದ್ರದ ಪ್ರಗತಿ ಗ್ರಾಮದ ಜನತೆಯಲ್ಲಿದೆ. ಜನರೊಂದಿಗೆ ಉತ್ತಮ ಭಾಂಧವ್ಯ ಹೊಂದಿ, ಸೌಲಭ್ಯಗಳನ್ನು ಪಲಾನುಭವಿಗಳ ಮನೆಗೆ ತಲುಪಿಸಬೇಕು. ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ನೀಡಲಾಗಿದ್ದು, ಅವರ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಉಪ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದ ಅಂಗನವಾಡಿ ಕೇಂದ್ರದಲ್ಲಿ ಸಭೆಗೆ ಹಾಜರಾಗಿದ್ದರು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಪ್ರಕಟಣೆ ತಿಳಿಸಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!
    In (ರಾಜ್ಯ ) ಜಿಲ್ಲೆ
  • ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ
    In (ರಾಜ್ಯ ) ಜಿಲ್ಲೆ
  • ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ
    In (ರಾಜ್ಯ ) ಜಿಲ್ಲೆ
  • ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲಕ್ಕೆ ಹೆಚ್ಚುವರಿ ಸಾರಿಗೆ ಕಾರ್ಯಚರಣೆ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ವಿಜಯಪುರದಲ್ಲಿ ಭೀಮಗಾಯನ
    In (ರಾಜ್ಯ ) ಜಿಲ್ಲೆ
  • ’ಶ್ರೀಗುರು ಮರುಳಾರಾದ್ಯ ಸಿರಿ’ ಪ್ರಶಸ್ತಿಗೆ ಈರಣ್ಣ ಝಳಕಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ಪಾದಯಾತ್ರಿಗಳಿಗೆ ಟೋಪಿ ವಿತರಣೆ
    In (ರಾಜ್ಯ ) ಜಿಲ್ಲೆ
  • ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
    In (ರಾಜ್ಯ ) ಜಿಲ್ಲೆ
  • ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.