ಚಡಚಣ: ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ರವಿವಾರ ದಿನಾಂಕ:೧೯-೧೧-೨೦೨೩ ರಂದು ಬೆಳಿಗ್ಗೆ ೬ ಗಂಟೆಗೆ ಗ್ರಾಮದ ಎಲ್ಲ ದೇವಾದಿಗಳ ಅಭಿಷೇಕ ಕಾರ್ಯಕ್ರಮ ಜರುಗುವುದು,ಮುಂಜಾನೆ ೧೦-೦೦ ಗಂಟೆಗೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ವಾಲಗ ಕಾರ್ಯಕ್ರಮ ಜರುಗುವುದು.
ಮದ್ಯಾಹ್ನ ೩-೦೦ ಗಂಟೆಗೆ ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ಧುಮಕನಾಳ,ಶ್ರೀ ಲಾಯಗಂಗಾ ದೇವಿ ಪಲ್ಲಕ್ಕಿ ಹಡಲಸಂಗ,ಹಾಗೂ ಶ್ರೀ ಲಕ್ಷ್ಮಿ ದೇವಿ ಪಲ್ಲಕ್ಕಿ ಸಾತಲಗಾಂವ, ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ನಂದರಗಿ ಹಾಗೂ ಶ್ರೀ ಮಾಳಿಂಗರಾಯ ಪಲ್ಲಕ್ಕಿ ಶಿಗಣಾಪುರ ದೇವರುಗಳ ಭೇಟಿ ಕಾರ್ಯಕ್ರಮ ಸಕಲ ವಾದ್ಯ ವೈಭವದೊಂದಿಗೆ ಎಲ್ಲ ದೇವರುಗಳನ್ನು ಬರಮಾಡಿಕೊಂಡು ಸಮಾಗಮ ಭೇಟಿ ಕಾರ್ಯಕ್ರಮ ಜರುಗುವುದು. ನಂತರ ನುಡಿಮುತ್ತು ಕಾರ್ಯಕ್ರಮ ಜರುಗುವುದು. ಸಾಯಂಕಾಲ ೬-೦೦ ಗಂಟೆಗೆ ದೇವರುಗಳ ಪೂಜಾ ಕಾರ್ಯಕ್ರಮ ಜರುಗುವುದು. ರಾತ್ರಿ ೯-೩೦ ಗಂಟೆಯಿಂದ ಬೆಳಿಗ್ಗೆ ೬-೦೦ ಗಂಟೆಯ ವರೆಗೆ ಧುಮಕನಾಳ ಗ್ರಾಮದ ಶ್ರೀ ಭೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದಿಂದ ಸುಪ್ರಸಿದ್ದ ಡೊಳ್ಳಿನ ಗಾಯಕ ಶ್ರೀ ಭೈರುಬಾ ತಾಟೆ ಮತ್ತು ಸಂಗಡಿಗರು ಹಾಗೂ ಶ್ರೀ ಕಾಶಿಲಿಂಗೇಶ್ವರ ಗಾಯನ ಸಂಘ ಮುತ್ತೂರು ತಾ:ಜಮಖಂಡಿ ಅಕ್ಷತಾ ಮುತ್ತೂರ ಹಾಗೂ ಸಂಗಡಿಗರಿಂದ ಸುಪ್ರಸಿದ್ದ ಡೊಳ್ಳಿನ ಗಾಯನ ಕಾರ್ಯಕ್ರಮ ಜರುಗಲಿದೆ.
ಸಾನಿಧ್ಯ ಬಸಯ್ಯ ಮಠ ವಹಿಸಲಿದ್ದಾರೆ. ಆದ್ದರಿಂದ ಗ್ರಾಮದ ನೆರೆಯ ಗ್ರಾಮಸ್ಥರು,ಭಕ್ತಾದಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಆಶಿರ್ವಾದ ಪಡೆದುಕೊಂಡು ಪುನೀತರಾಗಬೇಕು ಎಂದು ಶ್ರೀ ಭೀರಲಿಂಗೇಶ್ವರ ದೇವಸ್ಥಾನ ಕಮೀಟಿಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

