Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ದೇವರು ನಮಗೆ ಚೆಂದವಾದ ಬದುಕು ನೀಡಿದ್ದಾನೆ. ಈ ಚೆಂದವಾದ ಬದುಕಿನಲ್ಲಿ ಯಾರು ದಾನ ಮಾಡುತ್ತಾರೋ ಅವರು ಅಳಿದು ಹೋದರೂ ಅವರ ಬದುಕು ಸಮಾಜದಲ್ಲಿ ಅಜರಾಮರವಾಗಿರುತ್ತದೆ. ಇದುವೇ ದಾನದ ಶ್ರೇಷ್ಠತೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ನಂದಿ ಸಾಹಿತ್ಯ ವೇದಿಕೆಯು ಭಾನುವಾರ ಹಮ್ಮಿಕೊಂಡಿದ್ದ ಸ್ಥಳೀಯ ಐತಿಹಾಸಿಕ ಬಸವೇಶ್ವರ ದೇವಾಲಯ ಜೀಣೋದ್ಧಾರಕ್ಕೆ ೬೫ ವರ್ಷಗಳ ಹಿಂದೆ ದೇಣಿಗೆ ನೀಡಿದ ಮಹಾದಾನಿಗಳ ಸ್ಮರಣೆ ಹಾಗೂ ಅವರ ವಂಶಜರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತಮ್ಮೊಳಗೆ ಇರುವ ಅಂಶವನ್ನು ಸಮಾಜಕ್ಕೆ ನೀಡುವವರು ನಿಜವಾಗಿ ದೊಡ್ಡವರು. ಪ್ರತಿಯೊಬ್ಬರಿಗೆ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಭಾವ ಇರಬೇಕು. ಕೊಡುವ ಭಕ್ತಿ ದೊಡ್ಡದ್ದು. ಸಮಾಜಕ್ಕೆ ದಾನ ನೀಡಿರುವ ಅನೇಕ ದಾನಿಗಳ ಹೆಸರು ನಾಡಿನಲ್ಲಿ ಅಜರಾಮರವಾಗಿವೆ. ೬೫ ವರ್ಷಗಳ ಹಿಂದೆ ಬಸವೇಶ್ವರ ದೇವಾಲಯಕ್ಕೆ ದಾನ ನೀಡಿದ ಮಹನೀಯರ ವಂಶಜರನ್ನು ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿರುವ ನಂದಿ ಸಾಹಿತ್ಯ ವೇದಿಕೆಯ…
ತಾಳಿಕೋಟಿ: ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ ಸಮಾನತೆ ಆರ್ಥಿಕ ಭದ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಕೊಡುವ ಉದ್ದೇಶದೊಂದಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂತಃಕರಣದಿಂದ ರೂಪಿತವಾದ ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ದಲಿತ ಯುವ ಮುಖಂಡ ಜೈ ಭೀಮ ಮುತ್ತಗಿ ಹೇಳಿದರು.ರವಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಉದ್ಯಾನವನದಲ್ಲಿ ಸಮಾಜ ಕಲ್ಯಾಣ ಇಲಾಖೆ. ತಾಲೂಕ ಆಡಳಿತ ಹಾಗೂ ಪುರಸಭೆಯ ಸಹಯೋಗದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ನಮಗೆ ಸರಳವಾಗಿ ಸಿಕ್ಕಿದ್ದಲ್ಲ ಇದರ ಹಿಂದೆ ಬಾಬಾಸಾಹೇಬರ ತ್ಯಾಗ ಮತ್ತು ಪರಿಶ್ರಮ ಅಡಗಿದೆ ಬಾಬಾ ಸಾಹೇಬರು ಯಾವ ಕಾರಣಕ್ಕೂ ಸಂವಿಧಾನ ರಚನಾ ಸಮಿತಿಯಲ್ಲಿ ಬರಬಾರದೆಂದು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾದ ಷಡ್ಯಂತರ ನಡೆಸಿದರು ತಮ್ಮ ಅಗಾಧವಾದ ಜ್ಞಾನ ಹಾಗೂ ದೂರದೃಷ್ಟಿ ಗುಣದಿಂದ ಬಾಬಾ ಸಾಹೇಬರು ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾದರು 5000 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಶೋಷಣೆಯನ್ನು ಕೇವಲ ಐವತ್ತು ವರ್ಷಗಳಲ್ಲಿ ನಿರ್ಮೂಲೆ ಮಾಡಿದ…
ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ತಾಳಿಕೋಟಿಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ರವರು, ಸಂವಿಧಾನದ ಆಚರಣೆ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.ದೈಹಿಕ ಶಿಕ್ಷಕ ಬಸವರಾಜ ಚಳ್ಳಗಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಪಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಗುರು ಸಂತೋಷ ಪವಾರ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಭೀಮನಗೌಡ ಸಾಸನೂರ, ಸಂಗಮೇಶ ಬಿರಾದಾರ, ಗಿರೀಶ ಎಚ್, ಸಿದ್ದನಗೌಡ ಮುದ್ನೂರ, ಶೀವಲೀಲಾ ಚುಂಚೂರ, ಮಿನಾಕ್ಷಿ ರಜಪೂತ,ಸಂಗೀತಾ ಬಿರಾದಾರ, ಜಯಶ್ರೀ ಮಕಾಶಿ, ಲಕ್ಷ್ಮೀ ಚುಂಚೂರ, ಸಂಗೀತಾ ನಾಯ್ಕ, ಭಾಗ್ಯಶ್ರೀ ಗಿರಿನಿವಾಸ, ವಿದ್ಯಾಶ್ರೀ ಗಿರಿನಿವಾಸ, ಸರ್ವ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.
ಸಿಂದಗಿ: ಭಾರತದ ಸಂವಿಧಾನವು ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳ ಅರಿವು ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಭಾರತದ ಸಂವಿಧಾನ ದಿನದ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಭಾರತದ ಸಂವಿಧಾನವು ರಾಷ್ಟ್ರಕ್ಕೆ ಮಾರ್ಗದರ್ಶಿ ಪುಸ್ತಕವಾಗಿದೆ. ಕರ್ತವ್ಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಚನೆಯ ಆಧಾರವಾಗಿದೆ. ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಸಂವಿಧಾನ ದಿವಸ ಎಂದು ಕರೆಯಲಾಗುತ್ತದೆ ಎಂದರು. ಈ ವೇಳೆ ಇಎಲ್‌ಸಿ ನೋಡಲ್ ಅಧಿಕಾರಿ ಎನ್.ಬಿ.ಪೂಜಾರಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ಪಿ.ಬಿ.ಜೋಗೂರ, ಡಾ.ಶರಣಬಸವ ಜೋಗೂರ, ಎಂ.ಐ.ಮುಜಾವರ, ಸುನೀಲ ಪಾಟೀಲ, ವ್ಹಿ.ಪಿ.ನಂದಿಕೋಲ, ಎನ್.ಎಂ.ಶೆಳ್ಳಗಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.*ಪ್ರೇರಣಾ ಶಾಲೆ:*ಪಟ್ಟಣದ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ…
ಸಿಂದಗಿಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ-೫೦ರ ಸಂಭ್ರಮ ಸಿಂದಗಿ: ಮಕ್ಕಳಿಗೂ ಹಕ್ಕುಗಳಿವೆ. ಮಕ್ಕಳ ಶೋಷಣೆಯ ವಿರುದ್ಧ ಪ್ರಶ್ನಿಸುವ ಹಕ್ಕುಗಳಿಗೆ ಸರ್ಕಾರ ಮನ್ನಣೆ ಇಡಬೇಕು ಎಂದು ಕೆರೂಟಗಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಎಸ್.ಎಸ್. ಸಾತಿಹಾಳ ಹೇಳಿದರು.ಶನಿವಾರ ಸಾಯಂಕಾಲ ಪಟ್ಟಣದ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ-೫೦ರ ಸಂಭ್ರಮದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮನ್ನು ನೋಡಿ ಕಂಗಲಾಗಬೇಕೇ ವಿನಃ ನಾವು ಪುಸ್ತಕ ಕಂಡು ಹೆದರಬಾರದು. ಡಾ.ಬಿ.ಆರ್.ಅಂಬೇಡ್ಕರ್ ಓದಿನ ಪರಿ ಎಲ್ಲರಿಗೂ ಆದರ್ಶನೀಯ ಎಂದು ಮಕ್ಕಳಿಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಇತಿಮಿತಯಲ್ಲಿರಬೇಕು. ಪುಸ್ತಕ ಎಲ್ಲ ವಿವಿಧ ಭಾವನೆ, ಹಣ, ಕೀರ್ತಿ, ಸಂಪತ್ತು ಎಲ್ಲವನ್ನು ನೀಡುತ್ತದೆ ಎಂಬ ಕಿವಿಮಾತು ಹೇಳಿದರು.ಈ ವೇಳೆ ವಕೀಲ ಬಿ.ಜಿ.ನೆಲ್ಲಗಿ ಮಕ್ಕಳಿಗಾಗಿರುವ ಕಾಯ್ದೆ-ಕಾನೂನುಗಳ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ಮಕ್ಕಳ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ವಿವಿಧ…
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಮ್ಯಾರಥಾನ್ ಓಟ ಸಿಂದಗಿ: ಈ ದೇಶವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ರಾಷ್ಟ್ರೀಯತೆಯಿಂದ ಸಾಮಾಜಿಕ ತಳಹದಿಯ ಮೇಲೆ ಕಟ್ಟಬೇಕು ಎಂಬ ಆಶಯದೊಂದಿಗೆ ಭಾರತದ ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ ಅವರು ನಮಗೆಲ್ಲ ನೀಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದಲ್ಲಿ ಪ್ಲೈ ಸ್ಪೋರ್ಟ್ಸ ಅಸೋಷಿಯೇಶನ್ ಹಾಗೂ ಗಣೇಶ ಕನ್ಸ್ಸ್ಟçಕ್ಷನ್ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಮ್ಮಿಕೊಂಡ ಮ್ಯಾರಥಾನ್ ಓಟ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಂವಿಧಾನವನ್ನು ಉಳಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ನಾವು ಸಂವಿಧಾನದ ಪೀಠಿಕೆಯ ವಿಧಿ ಓದಿದಂತೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.ಇದೇ ಸಂದರ್ಭದಲ್ಲಿ ತಾಲೂಕಾಡಳಿತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಳಿಕ ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂವಿಧಾನ ಪೀಠಿಕೆಯನ್ನು ಭೋದಿಸಿದರು.ಇದೇ ಸಂದರ್ಭದಲ್ಲಿ ರಾಜಶೇಖರ ಕೂಚಬಾಳ…
ಭಗವಾನ ಬುದ್ಧರ ಅಂತಿಮ ಉಪದೇಶ & ಡಾ.ಬಾಬಾಸಾಹೇಬ ಅಂಬೇಡ್ಕರ ಕೊನೆಯ ಸಂದೇಶ” ಕೃತಿಗಳ ಬಿಡುಗಡೆ ದೇವರಹಿಪ್ಪರಗಿ: “ಭಗವಾನ ಬುದ್ಧರ ಅಂತಿಮ ಉಪದೇಶ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರವರ ಕೊನೆಯ ಸಂದೇಶ” ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿರುವುದು ಅತ್ಯಂತ ಸೂಕ್ತ ಹಾಗೂ ಸಮಯೋಚಿತವಾಗಿದೆ ಎಂದು ವಿಶ್ವರತ್ನ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡಕೋಳಕರ್ ಹೇಳಿದರು.ತಾಲ್ಲೂಕಿನ ಕಡಕೋಳ ಗ್ರಾಮದ ವಿಶ್ವರತ್ನ ಬುದ್ಧವಿಹಾರ ಹೊಸಕಾಲೋನಿ, ಚೇತವನದಲ್ಲಿ ವಿಶ್ವರತ್ನ ಬುದ್ಧವಿಹಾರ ಟ್ರಸ್ಟ್ ಇವರ ಸಹಯೋಗದಲ್ಲಿ ಭಾನುವಾರ ಜರುಗಿದ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದು ನಾವು ಸಾಕಷ್ಟು ಗ್ರಂಥ, ಪುಸ್ತಕಗಳನ್ನು ನೆಮ್ಮದಿಗಾಗಿ ಓದಿ ಮರೆಯುತ್ತಿದ್ದೇವೆ. ಆದರೆ ವಾಸ್ತವಿಕವಾಗಿ ಅವುಗಳಲ್ಲಿನ ಅಂಶಗಳನ್ನು ಅರ್ಥೈಸಿ ಅದರಂತೆ ನಡೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಪುಸ್ತಕ ಉತ್ತಮ ಅಂಶಗಳ ಸಂಗ್ರಹವಾಗಿದೆ ಎಂದರು.ಸಿಂದಗಿ ಮಾಜಿಶಾಸಕ ಶರಣಪ್ಪ ಸುಣಗಾರ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ, ಮಾತನಾಡುತ್ತಾ, ಬುದ್ಧವಿಹಾರ ನಿರ್ಮಿತ ತಾಣದಲ್ಲಿಯೇ ಇಂದು ಭಗವಾನ ಬುದ್ಧರ ಅಂತಿಮ ಉಪದೇಶಗಳನ್ನು ಹೊತ್ತ ಹೊತ್ತಿಗೆ ಬಿಡುಗಡೆ ಮಾಡುತ್ತಿರುವುದು…
ದೇವರಹಿಪ್ಪರಗಿ: ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಜರುಗಿತು.ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಭಾನುವಾರ ತಹಶೀಲ್ದಾರ್ ಪ್ರಕಾಶ ಸಿಂದಗಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ಓದುವುದರ ಮೂಲಕ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು. ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ನಮ್ಮದಾಗಿದೆ. ಪ್ರತಿಯೊಂದು ಅಂಶಗಳು ನಮಗೆ ಮಾದರಿಯಾಗಿವೆ. ಸರ್ಕಾರ ನಡೆಸುವ ಪ್ರತಿಯೊಬ್ಬ ನಾಗರೀಕನಿಗೂ ಅನ್ವಯವಾಗುವ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂವಿಧಾನ ಮಾಹಿತಿ ನೀಡುತ್ತದೆ. ಇಂತಹ ಸಂವಿಧಾನ ರಚನೆ ಮಾಡಿದ ಮಹನೀಯರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ ಅವರ ಸೇವೆ ಶ್ಲಾಘನೀಯವಾಗಿದೆ. ಇಂತಹ ಸಂವಿಧಾನವನ್ನು ಸಂರಕ್ಷಣೆ ಮಾಡುವ ಕಾರ್ಯ ನಮ್ಮ ಮೇಲಿದೆ ಎಂದರು.ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸದಸ್ಯರಾದ ರಮೇಶ ಮಸಬಿನಾಳ, ಶಾಂತಯ್ಯ ಜಡಿಮಠ, ಬಶೀರ್ ಅಹ್ಮದ್ ಮಳಖೇಡ, ಕಾಸುಗೌಡ ಬಿರಾದಾರ(ಜಲಕತ್ತಿ), ರಮೇಶ ಮ್ಯಾಕೇರಿ, ಭೀಮಪ್ಪ ಗುಡಿಮನಿ, ರಾಜಕುಮಾರ…
ವಿಜಯಪುರ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ನಗರದ ಆಸ್ಪತ್ರೆಯಲ್ಲಿ ಹಾಗೂ ಪ್ರಮುಖ ಓಣಿಗಳಲ್ಲಿ ಹಸಿವು ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಸಂಜಯ ಆಹಾರ ವಿತರಿಸಲಾಯಿತು.ಈ ಸಂದರ್ಭ ಸ್ಥಳೀಯ ವೇದಿಕೆಯ ಅಧ್ಯಕ್ಷ ಮೌಲಾನಾ ದಾವುದ ನದ್ವ ಹಾಗೂ ಪದಾಧಿಕಾರಿಗಳು ಮಾತನಾಡಿ, ಇಂದಿಗೂ ನಮ್ಮ ನೆರೆಹೊರೆಯಲ್ಲಿ ಹಸಿವಿನಿಂದ ಮಲಗುವ ಇಂತಹ ಅನೇಕ ಕುಟುಂಬಗಳು ಮತ್ತು ಜನರು ಇದ್ದಾರೆ ಎಂಬುದು ಬಹಳ ವಿಷಾದದ ಸಂಗತಿಯಾಗಿದೆ, ಅವರಿಗೆ ಆಹಾರ ಮತ್ತು ಸೇವೆ ಸಲ್ಲಿಸುವುದು ಒಂದು ದೊಡ್ಡ ಪುಣ್ಯದ ಕಾರ್ಯವಾಗಿದೆ. ನಾವು ನಮ್ಮ ಸಹೋದರರು, ದೇಶವಾಸಿಗಳು ಮತ್ತು ದೇಶದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಕಷ್ಟದಲ್ಲಿರುವವರಿಗೆ ಹಸಿದವರಿಗೆ, ಸಹಾಯ ಮಾಡಬೇಕು. ಹಸಿವು ನಿಯಂತ್ರಿಸಿದರೆ, ನಮ್ಮ ಸಮಾಜವು ಅನೇಕ ಅಪರಾಧಗಳಿಂದ ಪಾರಾಗುತ್ತದೆ. ಉತ್ತಮ ಪರಿಸರ ಸ್ಥಾಪನೆಯಾಗುತ್ತದೆ. ಹಸಿವು ಒಂದು ದೊಡ್ಡ ವಿಷಯ. ಇದರಿಂದಾಗಿ, ಮನುಷ್ಯನು ಭಿಕ್ಷೆ ಬೇಡುವ ಅನಿವಾರ್ಯತೆಗೆ ಸಿಲುಕುತ್ತಾನೆ. ಒಂದೊಂದು ಹೊತ್ತಿನ ಊಟಕ್ಕೂ ಹಾತೊರೆಯುತ್ತಾನೆ. ಇಂದು ನಾವು ನಮ್ಮ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗೆ ಒಳಗಾಗುತ್ತೆವೆ ಎಂದು…
ಬೇನಾಳದಲ್ಲಿ ಶಾಲಾ ಕೊಠಡಿ ಉದ್ಘಾಟನೆ | ಕಬಡ್ಡಿ ಪಂದ್ಯಾವಳಿಗೆ ಚಾಲನೆ ಆಲಮಟ್ಟಿ: ನನ್ನ ಮತಕ್ಷೇತ್ರದ ಸರ್ವ ಗ್ರಾಮಗಳನ್ನು ಭಾವೈಕ್ಯತೆಯ ಗ್ರಾಮಗಳನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದರೆ, ಭಾವೈಕ್ಯತೆಯನ್ನೇ ತನ್ನ ಉಸಿರನ್ನಾಗಿ ಜೀವಿಸುತ್ತಿರುವ ಪ್ರಗತಿ ಗ್ರಾಮ ಎಂದರೇ ಅದು ಬೇನಾಳ, ಆ ಗ್ರಾಮದ ಶಾಸಕನಾಗಿರುವುದಕ್ಕೂ ನಾನು ಹೆಮ್ಮೆ ಪಡುತ್ತೇನೆ ಎಂದು ಜವಳಿ, ಎಪಿಎಂಸಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಸಮೀಪದ ಬೇನಾಳ ಆರ್ ಎಸ್ ಗ್ರಾಮದಲ್ಲಿ ಶನಿವಾರ ರಾತ್ರಿ ಅಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳು ಉದ್ಘಾಟನೆ ಹಾಗೂ ಟಿಪ್ಪು ಸುಲ್ತಾನ್ ಯುವಕ ಸಂಘ ಟಿಪ್ಪು ಸುಲ್ತಾನ ಮತ್ತು ಭಕ್ತ ಕನಕದಾಸ ಜಯಂತಿ ನಿಮಿತ್ತ ಹಮ್ಮಿಕೊಂಡ ರಾಜ್ಯ ಮಟ್ಟದ 55 ಕೆಜಿಯೊಳಗಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಬೇನಾಳ ಗ್ರಾಮ ಹಲವು ಸಂಸ್ಕೃತಿಕ ವಿಶಿಷ್ಠ್ಯತೆಯ ತಾಣ, ಗ್ರಾಮದ ಅಭಿವೃದ್ಧಿಗೆ ಇಡೀ ಗ್ರಾಮವೇ…
