ವಿಜಯಪುರ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ನಗರದ ಆಸ್ಪತ್ರೆಯಲ್ಲಿ ಹಾಗೂ ಪ್ರಮುಖ ಓಣಿಗಳಲ್ಲಿ ಹಸಿವು ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಸಂಜಯ ಆಹಾರ ವಿತರಿಸಲಾಯಿತು.
ಈ ಸಂದರ್ಭ ಸ್ಥಳೀಯ ವೇದಿಕೆಯ ಅಧ್ಯಕ್ಷ ಮೌಲಾನಾ ದಾವುದ ನದ್ವ ಹಾಗೂ ಪದಾಧಿಕಾರಿಗಳು ಮಾತನಾಡಿ, ಇಂದಿಗೂ ನಮ್ಮ ನೆರೆಹೊರೆಯಲ್ಲಿ ಹಸಿವಿನಿಂದ ಮಲಗುವ ಇಂತಹ ಅನೇಕ ಕುಟುಂಬಗಳು ಮತ್ತು ಜನರು ಇದ್ದಾರೆ ಎಂಬುದು ಬಹಳ ವಿಷಾದದ ಸಂಗತಿಯಾಗಿದೆ, ಅವರಿಗೆ ಆಹಾರ ಮತ್ತು ಸೇವೆ ಸಲ್ಲಿಸುವುದು ಒಂದು ದೊಡ್ಡ ಪುಣ್ಯದ ಕಾರ್ಯವಾಗಿದೆ. ನಾವು ನಮ್ಮ ಸಹೋದರರು, ದೇಶವಾಸಿಗಳು ಮತ್ತು ದೇಶದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಕಷ್ಟದಲ್ಲಿರುವವರಿಗೆ ಹಸಿದವರಿಗೆ, ಸಹಾಯ ಮಾಡಬೇಕು. ಹಸಿವು ನಿಯಂತ್ರಿಸಿದರೆ, ನಮ್ಮ ಸಮಾಜವು ಅನೇಕ ಅಪರಾಧಗಳಿಂದ ಪಾರಾಗುತ್ತದೆ. ಉತ್ತಮ ಪರಿಸರ ಸ್ಥಾಪನೆಯಾಗುತ್ತದೆ. ಹಸಿವು ಒಂದು ದೊಡ್ಡ ವಿಷಯ. ಇದರಿಂದಾಗಿ, ಮನುಷ್ಯನು ಭಿಕ್ಷೆ ಬೇಡುವ ಅನಿವಾರ್ಯತೆಗೆ ಸಿಲುಕುತ್ತಾನೆ. ಒಂದೊಂದು ಹೊತ್ತಿನ ಊಟಕ್ಕೂ ಹಾತೊರೆಯುತ್ತಾನೆ. ಇಂದು ನಾವು ನಮ್ಮ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗೆ ಒಳಗಾಗುತ್ತೆವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ಕಲೀಮುಲ್ಲಾ, ಫಿರೊಜ ಜನಾಬ ರಫೀಕ ಸಾದ, ಶಫೀಕ ಸಾಬ ಮತ್ತು ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

