ಸಿಂದಗಿಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ-೫೦ರ ಸಂಭ್ರಮ
ಸಿಂದಗಿ: ಮಕ್ಕಳಿಗೂ ಹಕ್ಕುಗಳಿವೆ. ಮಕ್ಕಳ ಶೋಷಣೆಯ ವಿರುದ್ಧ ಪ್ರಶ್ನಿಸುವ ಹಕ್ಕುಗಳಿಗೆ ಸರ್ಕಾರ ಮನ್ನಣೆ ಇಡಬೇಕು ಎಂದು ಕೆರೂಟಗಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಎಸ್.ಎಸ್. ಸಾತಿಹಾಳ ಹೇಳಿದರು.
ಶನಿವಾರ ಸಾಯಂಕಾಲ ಪಟ್ಟಣದ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ-೫೦ರ ಸಂಭ್ರಮದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮನ್ನು ನೋಡಿ ಕಂಗಲಾಗಬೇಕೇ ವಿನಃ ನಾವು ಪುಸ್ತಕ ಕಂಡು ಹೆದರಬಾರದು. ಡಾ.ಬಿ.ಆರ್.ಅಂಬೇಡ್ಕರ್ ಓದಿನ ಪರಿ ಎಲ್ಲರಿಗೂ ಆದರ್ಶನೀಯ ಎಂದು ಮಕ್ಕಳಿಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಇತಿಮಿತಯಲ್ಲಿರಬೇಕು. ಪುಸ್ತಕ ಎಲ್ಲ ವಿವಿಧ ಭಾವನೆ, ಹಣ, ಕೀರ್ತಿ, ಸಂಪತ್ತು ಎಲ್ಲವನ್ನು ನೀಡುತ್ತದೆ ಎಂಬ ಕಿವಿಮಾತು ಹೇಳಿದರು.
ಈ ವೇಳೆ ವಕೀಲ ಬಿ.ಜಿ.ನೆಲ್ಲಗಿ ಮಕ್ಕಳಿಗಾಗಿರುವ ಕಾಯ್ದೆ-ಕಾನೂನುಗಳ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಮಕ್ಕಳ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಅಧ್ಯಯನ್ದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಡಿ ಕುಲಕರ್ಣಿ, ಶಾಲೆಯ ಮುಖ್ಯಗುರುಮಾತೆ ಸಾವಿತ್ರಿ ಅಸ್ಕಿ, ವಿದ್ಯಾ ಅಂಬಲಗಿ. ಸತೀಶ ಕುಲಕರ್ಣಿ, ದ್ರಾಕ್ಷಾಯಿಣಿ ಹುಗ್ಗಿ, ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

