ಸಿಂದಗಿ: ಭಾರತದ ಸಂವಿಧಾನವು ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳ ಅರಿವು ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಭಾರತದ ಸಂವಿಧಾನ ದಿನದ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಭಾರತದ ಸಂವಿಧಾನವು ರಾಷ್ಟ್ರಕ್ಕೆ ಮಾರ್ಗದರ್ಶಿ ಪುಸ್ತಕವಾಗಿದೆ. ಕರ್ತವ್ಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಚನೆಯ ಆಧಾರವಾಗಿದೆ. ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಸಂವಿಧಾನ ದಿವಸ ಎಂದು ಕರೆಯಲಾಗುತ್ತದೆ ಎಂದರು.
ಈ ವೇಳೆ ಇಎಲ್‌ಸಿ ನೋಡಲ್ ಅಧಿಕಾರಿ ಎನ್.ಬಿ.ಪೂಜಾರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ಪಿ.ಬಿ.ಜೋಗೂರ, ಡಾ.ಶರಣಬಸವ ಜೋಗೂರ, ಎಂ.ಐ.ಮುಜಾವರ, ಸುನೀಲ ಪಾಟೀಲ, ವ್ಹಿ.ಪಿ.ನಂದಿಕೋಲ, ಎನ್.ಎಂ.ಶೆಳ್ಳಗಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
*ಪ್ರೇರಣಾ ಶಾಲೆ:*
ಪಟ್ಟಣದ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್. ಡಿ. ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ, ಶಾಲೆಯ ಮುಖ್ಯ ಗುರುಮಾತೆ ಎಸ್. ಆಯ್. ಅಸ್ಕಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
*ಸಿಂದಗಿ ಹೆಸ್ಕಾಂ ಕಚೇರಿ:*
ಪಟ್ಟಣದ ಹೆಸ್ಕಾಂ ಉಪವಿಭಾಗದ ಕಛೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ಎಸ್‌ಒ ಶಾಂತೂ ಬಿರಾದಾರ, ಸಿದ್ದಲಿಂಗ, ಪ್ರವೀಣ ಹಿರೇಕುರುಬರ, ನಾಗಪ್ಪ ನೂಲಾನವರ ಸೇರಿದಂತೆ ಹೆಸ್ಕಾಂ ಸಿಬ್ಬಂದಿಗಳು ಇದ್ದರು.
*ಸಂಗಮೇಶ್ವರ ವಿದ್ಯಾಲಯ:*
ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಶ್ರೀ ಸಂಗಮೇಶ್ವರ ವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
*ಲೋಯಲ್ ಶಾಲೆ:*
ಪಟ್ಟಣದ ಕಲಬುರಗಿ ರಸ್ತೆಯ ಹೊರವಲಯದಲ್ಲಿರುವ ಲೊಯೋಲ ಶಾಲೆಯಲ್ಲಿ ಹಮ್ಮಿಕೊಂಡ ಭಾರತದ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಫಾದರ್ ಪ್ರಶಾಂತ ಸೆಕ್ವೇರಾ ನ್ಯಾಯವಾದಿ, ಫಾದರ್ ಫೀಟರ್ ಅಂತೋನಿ ಮಾತನಾಡಿದರು.
ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್, ಸಿಸ್ಟರ್ ಸೋಫಿಯಾ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

