Author: editor.udayarashmi@gmail.com

ವಿಜಯಪುರದ ರಾಜಗುರು ಇಂಡಸ್ಟ್ರೀಜ್ ಗೋದಾಮು | ಕೆಐಡಿಬಿ ವಸಾಹತು ಪ್ರದೇಶ | ಬೀಹಾರ ಮೂಲದ ಕಾರ್ಮಿಕರು ವಿಜಯಪುರ: ಮೆಕ್ಕೆಜೋಳಗಳನ್ನು ತುಂಬಿಡಲಾಗಿದ್ದ ಗೋಣಿ ಚೀಲಗಳು ಕುಸಿದ ಪರಿಣಾಮ ಸುಮಾರು ಹತ್ತಾರು ಜನರು ಸಿಲುಕಿಕೊಂಡಿರುವ ಘಟನೆ ಗುಮ್ಮಟ ನಗರಿ ವಿಜಯಪುರ ನಗರದ ಹೊರವಲಯದಲ್ಲಿರುವ ಕೆ ಐ ಡಿ ಬಿ ವಸಾಹತು ಪ್ರದೇಶದಲ್ಲಿ ನಡೆದಿದೆ.ಖ್ಯಾತ ರಾಜಗುರು ಇಂಡಸ್ಟ್ರೀಜ್ ಗೋದಾಮಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ರಾಜಗುರು ಫುಡ್ ಪ್ರೊಸೆಸಿಂಗ್ ಯುನಿಟ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಂಗ್ರಹಿಸಿ ಇಡಲಾಗಿದ್ದ ಮೆಕ್ಕೆಜೋಳದ ಚೀಲಗಳ ಮೇಲೆ ಬೃಹತ್ ಯಂತ್ರ ಬಿದ್ದಿದೆ. ಆಗ ಈ ಚೀಲಗಳು ಕುಸಿದು ಬಿದ್ದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಅದರ ಕೆಳಗಡೆ ಸಿಲುಕಿದ್ದಾರೆ.ಕಳೆದ ಹಲವು ವರ್ಷಗಳಿಂದ ಈ ಇಂಡಸ್ಟ್ರೀಜ್ ನಲ್ಲಿ ನಾನಾ ಕಡೆಗಳಿಂದ ಆಗಮಿಸಿರುವ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆ ಏಕಾಏಕಿ ನಡೆದ ಘಟನೆಯಿಂದಾಗಿ ಈ ಪ್ರದೇಶದಲ್ಲಿ…

Read More

ತಾರಕಕ್ಕೇರಿದ ಶಾಸಕ ಯತ್ನಾಳ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ವೈಮನಸ್ಸು ವಿಜಯಪುರ: ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವಾಚ್ಯ ಶಬ್ದದಿಂದ ತಮ್ಮನ್ನು ನಿಂದಿಸಿದ ಶಾಸಕ ಬಸನಗೌಡ ಯತ್ನಾಳ ಮೆದುಳು ನಾಲಿಗೆಗೆ ಸಂಪರ್ಕವಿಲ್ಲದ ಓರ್ವ ಅನಾಗರಿಕ ವ್ಯಕ್ತಿ ಎಂದು ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಮತ್ತು ವಕ್ತಾರ ಸುರೇಶ ಬಿರಾದಾರ ಕುಟುಕಿದರು.ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯುದ್ದಕ್ಕೂ ಶಾಸಕ ಯತ್ನಾಳರ ವಿರುದ್ಧ ಅವರು ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದರು.ಇವರನ್ನು ಶಾಸಕರನ್ನಾಗಿ ಮಾಡಿದ್ದೇ ನಾವು. ನನ್ನನ್ನೇ ಯತ್ನಾಳ ಅವರು ನಗರದ ದಾನಮ್ಮ ದೇವಿಯ ಕಾರ್ಯಕ್ರಮದಲ್ಲಿ ಲೋಫರ್, ಎಂದು ಬೈದಿದ್ದಾರೆ. ಗಜ್ಜ ಇಡತೀನಿ ಎಂದಿದ್ದಾರೆ. ಚುನಾವಣೆಯಲ್ಲಿ ಇವರ ಸೋಲಿಗಾಗಿ ಹಣ ಹಂಚುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ ಇವರು ಇದನ್ನು ರುಜುವಾತು ಪಡಿಸಿದರೆ ತಾವು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಬಿರಾದಾರ ಸವಾಲು ಹಾಕಿದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೂ ಸಹ ಬಿಜೆಪಿ ಟಿಕೆಟ್ ಕೇಳಿದ್ದರಿಂದ ಯತ್ನಾಳರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.ಕೇವಲ ಆರು ಸಾವಿರ ಮತಗಳಿಂದ…

Read More

ರಂಗಭೂಮಿ ಭೀಷ್ಮ ದಿ.ಶ್ರೀನಿವಾಸ ತಾವರಗಿರಿ ಸ್ಮರಣೆ | ಐದು ವಿಭಿನ್ನ ನಾಟಕಗಳ ಪ್ರದರ್ಶನ ವಿಜಯಪುರ: ರಂಗಭೂಮಿ ಭೀಷ್ಮ ದಿ. ಶ್ರೀನಿವಾಸ ತಾವರಗಿರಿ ಸ್ಮರಣೆಯ ಅಂಗವಾಗಿ ತಾವರಗಿರಿ ಅವರ ಪರಿವಾರ ಹಾಗೂ ಅಭಿಮಾನಿ ಬಳಗದ ಸಹಯೋಗದಲ್ಲಿ ಇದೇ ಡಿಸೆಂಬರ 6 ರಿಂದ 10 ರ ವರೆಗೆ ನಗರದ ಮರಾಠಿ ವಿದ್ಯಾಲಯದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.ದಿ.ಶ್ರೀನಿವಾಸ ತಾವರಗಿರಿ ಅವರ ಪಾರಿಜಾತ ಹವ್ಯಾಸಿ ರಂಗ ತಂಡ ಅರ್ಪಿಸುವ ಈ ನಾಟಕೋತ್ಸವದ ಕುರಿತು ಶಶಿ ತಾವರಗಿರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.ಐದು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಐದು ವಿಭಿನ್ನ ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಅವರು ತಿಳಿಸಿದರು.ಡಿ.6 ರಂದು ಮಂಡ್ಯ ರಮೇಶ ನಿರ್ದೇಶನದಲ್ಲಿ ಮೈಸೂರು ನಟನ ತಂಡದವರಿಂದ ಚೋರ ಚರಣದಾಸ ನಾಟಕ ಪ್ರದರ್ಶನಗೊಳ್ಳುವುದು. ಹಿರಿಯ ವಿದುಷಿ ಲತಾ ಜಹಾಗೀರದಾರ ಅವರು ನಾಟಕೋತ್ಸವ ಉದ್ಘಾಟಿಸುವರು.…

Read More

ವಿಜಯಪುರ: ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆ ಅಗತ್ಯವಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಎಚ್.ನಾಗೂರ ಹೇಳಿದರು.ನಗರದ ಮರಾಠಾ ವಿಧ್ಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿಧ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರ, ಜಿಲ್ಲಾ ಪಂಚಾಯತಿ ವಿಜಯಪುರ, ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರಿಗಾಗಿ ನಡೆದ ಜಿಲ್ಲಾ ಮಟ್ಟದ 2023-24ನೇ ಸಾಲಿನ ಸಹಪಠ್ಯ ಚಟುವಟಿಕೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ಪಠ್ಯ ಬೋಧನೆ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮೂಲಕ ಕಲಿಸುವದರಿಂದ ಪರಿಣಾಮಕಾರಿ ಕಲಿಕೆಯಾಗುವದು. ಶಿಕ್ಷಕರ ವಿಶೇಷ ಪ್ರತಿಭೆ ಹಾಗೂ ಕೌಶಲ್ಯ ಹೊರಹಾಕಲು ಈ ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪಠ್ಯೇತರ ಚಟುವಟಿಕೆ ಏರ್ಪಡಿಸುವದರಿಂದ ಶಿಕ್ಷಕರಿಗೆ ಅನೂಕೂಲ ಎಂದರು.ಕರ್ನಾಟಕ ರಾಜ್ಯ ರಾಜ್ಯ ಸರ್ಕಾರಿ…

Read More

ಕೊಲ್ಹಾರ: ಕೂಡಗಿ ಭಾಗದಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಎನ್‌ಟಿಪಿಸಿಗೆ ಜಮೀನು ಕಳೆದುಕೊಂಡಿದ್ದ ಈ ಭಾಗದ ಸಂತ್ರಸ್ತ ರೈತರು ಮತ್ತೊಮ್ಮೆ ಧರಣಿಯತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ. ತಾಲೂಕಿನ ತೆಲಗಿಯ ಸದ್ಗುರು ಸದಾನಂದ ಆಶ್ರಮದಲ್ಲಿ ಶನಿವಾರ ಸಭೆ ನಡೆಸಿದ ಸಂತ್ರಸ್ತ ರೈತರು ಈ ಕುರಿತು ಚಿಂತನ-ಮಂಥನ ನಡೆಸಿದರು.ಈಗಾಗಲೇ ನ.೬ ರಂದು ಎನ್‌ಟಿಪಿಸಿ ಎಚ್‌ಆರ್ ಸಭಾಂಗಣದಲ್ಲಿ ನಡೆದ ಗ್ರಾಮಾಭಿವೃದ್ಧಿ ಸಲಹಾ ಸಮಿತಿ (ವಿಡಿಎಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಗಮನಕ್ಕೆ ರೈತರ ಅಹವಾಲನ್ನು ಸಲ್ಲಿಸಲಾಗಿತ್ತು. ಸಭೆ ಮುಗಿದು ಮತ್ತೆ ತಿಂಗಳಾಗುತ್ತ ಬಂದರೂ ಇದುವರೆಗೂ ಏನೊಂದೂ ಪ್ರತಿಕ್ರಿಯೆ ಜಿಲ್ಲಾಧಿಕಾರಿಗಳಿಂದಾಗಲಿ, ಎನ್‌ಟಿಪಿಸಿ ಅಧಿಕಾರಿಗಳಿಂದಾಗಲಿ ಬಂದಿಲ್ಲ. ಹೀಗಾಗಿ ಡಿ.೪ ರಂದು ಮತ್ತೊಂದು ಬಾರಿ ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ಸಂತ್ರಸ್ತ ರೈತರ ಬೇಡಿಕೆಗಳ ಕುರಿತು ಮನವರಿಕೆ ಮಾಡಲಾಗುವುದು. ಅದಾಗ್ಯೂ ಯಾವುದೇ ಸ್ಪಂದನೆ ದೊರಕದಿದ್ದರೆ ಎನ್‌ಟಿಪಿಸಿ ಮುಖ್ಯ ಪ್ರವೇಶ ದ್ವಾರದ ಎದುರು ಶಾಂತಿಯುತ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾದೀತೆಂದು ಸಂತ್ರಸ್ತ ರೈತ ಮುಖಂಡರಾದ ಮಲ್ಲಿಕಾರ್ಜುನ ವೀರಣ್ಣವರ, ದಯಾನಂದ ಹೆಬ್ಬಾಳ ಸಭೆಗೆ…

Read More

ಕೊಲ್ಹಾರ: ದೇಶದಲ್ಲಿ ನಡೆಯುವ ಅನೇಕ ಚುನಾವಣೆಗಳಲ್ಲಿ ಮತದಾರ ಯಾವ ರೀತಿ ತೀರ್ಪು ಕೊಡುತ್ತಾರೆ ಎನ್ನುವದನ್ನು ಎಂಥಹ ರಾಜಕೀಯ ವಿಶ್ಲೇಷಕರಿಗೂ ತಜ್ಞರಿಗೂ ನೇತಾರರಿಗೂ ಸಿಗದ ಆಶಾಭಾವನೆಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಅಗಶಿಯ ಹತ್ತಿರ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾನೆ ಹಿಡಿಯಲು ಕಾರಣೀಕರ್ತರಾದ ಮತದಾರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ವಿಜಯೋತ್ಸವ ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಕಾರ್ಯಕರ್ತರು ಪರಸ್ಪರ ಸಿಹಿ ಸವಿಯುವ ಮೂಲಕ ಜನತೆಗೆ ವಿತರಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ದೇಶದ ರಾಜಕಾರಣದಲ್ಲಿ ಸ್ವಚ್ಚಂದ ರಾಜಕೀಯ ವ್ಯಕ್ತಿಗಳಾಗಿ ಮನೆ ಮಠ ಎನ್ನದೇ ಭಾರತೀಯರ ಅಭಿವೃದ್ದಿಗಾಗಿ ಸದಾ ಶ್ರಮಿಸುತ್ತಿರುವ ವಿಶ್ವದ ಭೂಪಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯುತ್ತಿರುವ ಮಹಾನ ನಾಯಕ ನರೇಂದ್ರ ಮೋದಿಯವರ ನಾಯಕತ್ವ ಮುಂದಿನ ಲೋಕಸಭಾ ಚುಣಾವಣೆಯಲ್ಲಿಯೂ ಪ್ರಜ್ವಲಿಸುವ ಆಶಾಭಾವನೆಯನ್ನು ಈ ಚುನಾವಣೆ ತೀರ್ಪು ದಿಕ್ಸೂಚಿಯಾಗಿದೆ ಎಂದು ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ, ಚಂದ್ರಶೇಖರಯ್ಯ ಗಣಕುಮಾರ, ವಿನೀತಕುಮಾರ…

Read More

ಕೊಲ್ಹಾರ: ತಾಲ್ಲೂಕು ಗಾಣಿಗ ಸಮಾಜ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಶೇ ೯೦% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೧೭-೧೨-೨೦೨೩ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ .ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯದಿಂದ ಅರ್ಜಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಪುಂಡಲೀಕ ಬಸರಕೋಡ , ಕಾರ್ಯದರ್ಶಿ ಬಸವರಾಜ ನಿಂ ತುಪ್ಪದ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.ಬಸವರಾಜ ತುಪ್ಪದ-೯೬೮೬೦೪೭೪೪೩, ಪುಂಡಲೀಕ ಬಸರಕೋಡ-೯೧೧೦೮೩೧೯೫೪, ಅಶೋಕ ಗಿಡ್ಡಪ್ಪಗೋಳ-೯೯೮೬೩೩೦೯೨೪, ಸಂಗಪ್ಪ ಹಂಡಿ-೮೩೧೦೯೨೫೨೮೦

Read More

ಬಸವನಬಾಗೇವಾಡಿ: ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದಲ್ಲಿ ಹಿಂದಿನ-ಇಂದಿನ-ಮುಂದಿನ ನಗುವಿನ ಕುರಿತು ಹೆಚ್ಚು ಚರ್ಚೆಯಾಗದೇ ಸಂಘಟಕರು ಸನ್ಮಾನಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ನಮಗೆ ನಿರಾಶೆ ಉಂಟು ಮಾಡಿದೆ ಎಂದು ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಜೀವಿ, ಸಮ್ಮೇಳನದ ಪ್ರತಿನಿಧಿ, ನಿವೃತ್ತ ಖಾದಿಗ್ರಾಮೋದ್ಯೋಗ ನೌಕರ ಸುರೇಶ ಕಲಘಟ್ಟಗಿ ಹೇಳಿದರು.ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಗೆಕೂಟ ೧೯೯೮ ರಲ್ಲಿ ಸ್ಥಾಪನೆಯಾದಗಿನಿಂದಲೂ ನಾನು ನಗೆಕೂಟದ ಸದಸ್ಯನಾಗಿದ್ದೇನೆ. ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿ ವರ್ಷ ನಡೆಯುವ ನಗೆ ಸಮ್ಮೇಳನಕ್ಕೆ ನಿರಂತರವಾಗಿ ಹೋಗುತ್ತಿದ್ದೇನೆ. ಬಸವೇಶ್ವರ ಜನ್ಮಸ್ಥಳದಲ್ಲಿ ನಡೆಯುವ ಈ ರಾಜ್ಯ ಸಮ್ಮೇಳನಕ್ಕೆ ಬರುವ ಮೂಲಕ ಬಸವ ಜನ್ಮಸ್ಥಳ ನೋಡುವ ಜೊತೆಗೆ ನಗೆ ಕುರಿತ ಚಿಂತನ-ಮಂಥನದಲ್ಲಿ ಭಾಗವಹಿಸಲು ಉತ್ಸಾಹದಿಂದ ಬಂದಿದ್ದೆ. ಈ ಸಮ್ಮೇಳನದಲ್ಲಿ ಶೇ. ೩೦ ರಷ್ಟು ಮಾತ್ರ ನಗೆಗೆ ಒತ್ತು ನೀಡಲಾಗಿತ್ತು. ನಾನು ಮೂಲತಃ ಧಾರವಾಡದವನು. ನಾನು ೬೦ ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ರಾಜ್ಯದಲ್ಲಿ ಸು. ೨೦೦ ನಗೆಕೂಟಗಳಿವೆ.…

Read More

ಬಸವನಬಾಗೇವಾಡಿ: ನಾವು ಕಳೆದ ೨೦ ವರ್ಷಗಳಿಂದ ರಾಜ್ಯದ ವಿವಿಧೆಡೆ ನಗೆ ಸಮ್ಮೇಳನ ಮಾಡುತ್ತಾ ಬರುತ್ತಿದ್ದೇವೆ. ಈಚೆಗೆ ನಗೆ ಸಮ್ಮೇಳನ ಆಯೋಜನೆ ಮಾಡಲು ಯಾವ ಜಿಲ್ಲೆಯವರು ಅಷ್ಟಾಗಿ ಮುಂದೆ ಬರುತ್ತಿಲ್ಲ. ಇದರಿಂದಾಗಿ ಮುಂದಿನ ರಾಜ್ಯ ಬಜೆಟ್ನಲ್ಲಿ ನಗೆ ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ ಕನಿಷ್ಠ ಒಂದು ಕೋಟಿ ರೂಪಾಯಿಯನ್ನು ಅನುದಾನ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನಗೆ ಭಾಗ್ಯವನ್ನು ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟದ ಅಧ್ಯಕ್ಷ ಪನ್ನಗ ಶಯನಂ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದ ಎರಡನೇ ದಿನ ಭಾನುವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ನಗೆ ಸಮ್ಮೇಳನ ಆಯೋಜನೆ ಮಾಡುವಾಗ ಸಾಕಷ್ಟು ಪ್ರತಿನಿಧಿಗಳು ಶುಲ್ಕ ತುಂಬಿ ಬರುತ್ತಿದ್ದರು. ಈಚೆಗೆ ಸಮ್ಮೇಳನ ಆಯೋಜನೆ ಮಾಡಲು ಹೆಚ್ಚಾಗಿ ಮುಂದೆ ಬರುತ್ತಿಲ್ಲ. ರಾಜ್ಯ…

Read More

ಸಿಂದಗಿ: ಕ್ಷೇತ್ರದ ಅಭಿವೃದ್ಧಿ, ನೀರಾವರಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ನಾನು ಯಾವತ್ತೂ ರಾಜಕಾರಣ ಮಾಡುವುದಿಲ್ಲ. ನಾನೊಬ್ಬ ಪಕ್ಷಾತೀತ ಶಾಸಕ. ಕ್ಷೇತ್ರದ ಅಭಿವೃದ್ಧಿ ಹಂತ ಹಂತವಾಗಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ರವಿವಾರದಂದು ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಹಮ್ಮಿಕೊಂಡಿರುವ ಸಾಸಬಾಳ ಎಲ್. ಟಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಂದಾಜು ರೂ. ೪೨ ಲಕ್ಷ ರೂಪಾಯಿಗಳಲ್ಲಿ ಮನೆ ಮನೆಗೆ ನೀರು ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು,ಈ ಕ್ಷೇತ್ರದ ಜನತೆಯ ಪರವಾಗಿ ನಾನು ಇದ್ದೇನೆ. ಚುನಾವಣೆ ಮಾಡಿದವರು ನನ್ನವರು, ಮಾಡದಿದ್ದವರೂ ನನ್ನವರು, ನಾನು ಈ ಕ್ಷೇತ್ರದ ಪ್ರತಿನಿಧಿಯಾಗಿ ಎಲ್ಲರ ಏಳಿಗೆಗೆ ಸದಾ ಸಿದ್ದನಾಗಿದ್ದೇನೆ. ತಮ್ಮ ನೂರೆಂಟು ಕಾರ್ಯಗಳಿಗೆ ನನ್ನನ್ನ ಮುಕ್ತ ಭಾವದಿಂದ ಸಂಪರ್ಕಿಸಿ ಎಲ್ಲರ ಸಮಸ್ಯೆಗಳಿಗೂ ನಾನು ಸ್ಪಂದಿಸುವ ಸಾಮಾನ್ಯ ಶಾಸಕನಿದ್ದಂತೆ. ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ರಾಮದ ಪ್ರತಿ…

Read More