Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿಜಯಪುರದಲ್ಲಿ ಡಿ.6 ರಿಂದ 10 ವರೆಗೆ ನಾಟಕೋತ್ಸವ
(ರಾಜ್ಯ ) ಜಿಲ್ಲೆ

ವಿಜಯಪುರದಲ್ಲಿ ಡಿ.6 ರಿಂದ 10 ವರೆಗೆ ನಾಟಕೋತ್ಸವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರಂಗಭೂಮಿ ಭೀಷ್ಮ ದಿ.ಶ್ರೀನಿವಾಸ ತಾವರಗಿರಿ ಸ್ಮರಣೆ | ಐದು ವಿಭಿನ್ನ ನಾಟಕಗಳ ಪ್ರದರ್ಶನ

ವಿಜಯಪುರ: ರಂಗಭೂಮಿ ಭೀಷ್ಮ ದಿ. ಶ್ರೀನಿವಾಸ ತಾವರಗಿರಿ ಸ್ಮರಣೆಯ ಅಂಗವಾಗಿ ತಾವರಗಿರಿ ಅವರ ಪರಿವಾರ ಹಾಗೂ ಅಭಿಮಾನಿ ಬಳಗದ ಸಹಯೋಗದಲ್ಲಿ ಇದೇ ಡಿಸೆಂಬರ 6 ರಿಂದ 10 ರ ವರೆಗೆ ನಗರದ ಮರಾಠಿ ವಿದ್ಯಾಲಯದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ದಿ.ಶ್ರೀನಿವಾಸ ತಾವರಗಿರಿ ಅವರ ಪಾರಿಜಾತ ಹವ್ಯಾಸಿ ರಂಗ ತಂಡ ಅರ್ಪಿಸುವ ಈ ನಾಟಕೋತ್ಸವದ ಕುರಿತು ಶಶಿ ತಾವರಗಿರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.
ಐದು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಐದು ವಿಭಿನ್ನ ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಅವರು ತಿಳಿಸಿದರು.
ಡಿ.6 ರಂದು ಮಂಡ್ಯ ರಮೇಶ ನಿರ್ದೇಶನದಲ್ಲಿ ಮೈಸೂರು ನಟನ ತಂಡದವರಿಂದ ಚೋರ ಚರಣದಾಸ ನಾಟಕ ಪ್ರದರ್ಶನಗೊಳ್ಳುವುದು. ಹಿರಿಯ ವಿದುಷಿ ಲತಾ ಜಹಾಗೀರದಾರ ಅವರು ನಾಟಕೋತ್ಸವ ಉದ್ಘಾಟಿಸುವರು. ಚಲನಚಿತ್ರ ನಟ ಮಂಡ್ಯರಮೇಶ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಡಾ.ಬಾಬುರಾಜೇಂದ್ರ ನಾಯಕ, ನ್ಯಾಯವಾದಿ ವ್ಹಿ.ಎಸ್.ಪಾಟೀಲ (ಬೀರಲದಿನ್ನಿ), ಬೆಳಗಾವಿ ವಿಭಾಗದ ಆರ.ಎಸ್.ಎಸ್.ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಶ್ರೀಮತಿ ಪ್ರಸಾದ ಮೇಡಂ, ಶ್ರೀಮತಿ ಜಯಶ್ರೀ ಫಡ್ನೀಸ್ (ಕುಲಕರ್ಣಿ), ಶ್ರೀಮತಿ ಮೀನಾ ಪಾಟೀಲ(ಹಿರೇಮಠ) ಅವರನ್ನು ಸನ್ಮಾನಿಸಲಾಗುವುದು.
ದಿ. 7 ರಂದು ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನವಾಗುತ್ತಿದ್ದು, ಮೈಸೂರು ನಟನ ತಂಡದವರು ಈ ನಾಟಕವನ್ನು ಅಭಿನಯಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ ಅಧ್ಯಕ್ಷತೆ ವಹಿಸಲಿದ್ದು, ಜೆಡಿಎಸ್ ಧುರೀಣ ಅಪ್ಪುಗೌಡ ಪಾಟೀಲ(ಮನಗೂಳಿ), ಬಿಜೆಪಿ ಧುರೀಣ ಶ್ರೀಧರ ನಾರಾಯಣಕರ, ಬಿಡಿಎ ಮಾಜಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಮಾರಂಭದಲ್ಲಿ ಶ್ರೀಕೃಷ್ಣ ಕೆ. ಕುಲಕರ್ಣಿ, ಸುಭಾಸ ಓಂಕಾರ, ಡಿ.ಕೆ.ಕುಲಕರ್ಣಿ, ಶ್ರೀಮತಿ ಮಾಣಿಕ ಕುಲಕರ್ಣಿ, ಶ್ರೀಮತಿ ಅಂಜಲಿ ನಾಡಗೌಡ ಅವರನ್ನು ಸನ್ಮಾನಿಸಲಾಗುವುದು.
ದಿ.8 ರಂದು ಡಾ.ಅರವಿಂದ ಕುಲಕರ್ಣಿ ನಿರ್ದೇಶನದಲ್ಲಿ ಬೆಳಗಾವಿಯ ರಂಗಸಂಪದ ತಂಡದವರಿಂದ ಮರಣ ಮೃದಂಗ ನಾಟಕ ಪ್ರದರ್ಶನಗೊಳ್ಳವುದು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅಧ್ಯಕ್ಷತೆ ವಹಿಸುವರು. ಬಿಜೆಪಿ ಧುರೀಣ ಮಹಿಂದ್ರಕುಮಾರ ನಾಯಿಕ, ಮಾಜಿ ಶಾಸಕ ರಾಜು ಆಲಗೂರ, ಹಿರಿಯ ಪತ್ರಕರ್ತ ಗೋಪಾಲ ನಾಯಿಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಮಾರಂಭದಲ್ಲಿ ಸುಧೀಂದ್ರ ಕಲ್ಳೋಳ, ಸುನೀಲಕುಮಾರ ದೇಸಾಯಿ, ಶ್ರೀಕೃಷ್ಣ ಕುಲಕರ್ಣಿ(ಸಾರವಾಡ), ಗೋಪಾಲ ದೇಶಪಾಂಡೆ, ಸುಧೀಂದ್ರ ಜಹಾಗೀರದಾರ ಅವರನ್ನು ಸನ್ಮಾನಿಸಲಾಗುವುದು.
ದಿ.9 ರಂದು ಡಾ ಶ್ರೀಪಾಧ ಬಟ್ ನಿರ್ದೇಶನದಲ್ಲಿ ಬೆಂಗಳೂರು ದೃಶ್ಯ ತಂಡದವರಿಂದ ಮಹಿಳಾ ಭಾರತ ನಾಟಕ ಪ್ರದರ್ಶನ ನಡೆಯಲಿದೆ. ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪೂರ, ಶಾಸಕ ವಿಠ್ಠಲ ಕಟಕಧೊಂಡ, ಸಾಮಾಜಿಕ ಹೋರಾಟಗಾರ ಶಿವರಾಂ ಕೆ.ವ್ಹಿ. ಸಾಹಿತಿ ಶಿವರುದ್ರಯ್ಯ ಸ್ವಾಮಿ, ಡಾ.ಅರವಿಂದ ಢಾಣಕಶಿರೂರ, ನಾಟಕ ಅಕಾಡೆಮಿ ಮಾಜಿ ಸದಸ್ಯ ಶ್ರೀಪತಿ ಮಂಜನಬೈಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಮಾರಂಭದಲ್ಲಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ, ಮಕಾನದಾರ ಅವರನ್ನು ಸನ್ಮಾನಿಸಲಾಗುವುದು.
ದಿ.10 ರಂದು ಜಾಕೀರ ನದಾಫ್ ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಲಾವಿದರಿಂದ ಬಾಸಿಂಗ ಬಲ ನಾಟಕ ಪ್ರದರ್ಶನಗೊಳ್ಳುವುದು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಜೆಡಿಯು ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಪಿನಾಡಗೌಡ, ವಿಜಯಪುರ ದ ಶಿಕ್ಷಣ ಪ್ರಸಾರಕ ಮಂಡಳ ಡಾ.ಮಿಲಿಂದ ವಾಟವೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಮಾರಂಭದಲ್ಲಿ ವಸಂತರಾವ ಗಾಯಿ, ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಕಲಾವಿದ ವಿಶ್ವನಾಥ ವಂಶಾಕೃತಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು ಎಂದು ಶಶಿ ತಾವರಗಿರಿ ತಿಳಿಸಿದರು.
ಜನರಲ್ಲಿ ನಾಟಕ ನೋಡುವ ಅಭಿರುಚಿ ಬೆಳೆಸುವುದು ಹಾಗೂ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ಈ ನಾಟಕೋತ್ದವದ ಮುಖ್ಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಬಾಬುರಾಜೇಂದ್ರ ನಾಯಿಕ, ಅಂಬಾದಾಸ ಜೋಶಿ, ಅನಿಲ ರೆಡ್ಡಿ, ಪ್ರೇಮ ಕೆ. ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!
    In (ರಾಜ್ಯ ) ಜಿಲ್ಲೆ
  • ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ
    In (ರಾಜ್ಯ ) ಜಿಲ್ಲೆ
  • ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ
    In (ರಾಜ್ಯ ) ಜಿಲ್ಲೆ
  • ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲಕ್ಕೆ ಹೆಚ್ಚುವರಿ ಸಾರಿಗೆ ಕಾರ್ಯಚರಣೆ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ವಿಜಯಪುರದಲ್ಲಿ ಭೀಮಗಾಯನ
    In (ರಾಜ್ಯ ) ಜಿಲ್ಲೆ
  • ’ಶ್ರೀಗುರು ಮರುಳಾರಾದ್ಯ ಸಿರಿ’ ಪ್ರಶಸ್ತಿಗೆ ಈರಣ್ಣ ಝಳಕಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ಪಾದಯಾತ್ರಿಗಳಿಗೆ ಟೋಪಿ ವಿತರಣೆ
    In (ರಾಜ್ಯ ) ಜಿಲ್ಲೆ
  • ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
    In (ರಾಜ್ಯ ) ಜಿಲ್ಲೆ
  • ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.