ಕೊಲ್ಹಾರ: ದೇಶದಲ್ಲಿ ನಡೆಯುವ ಅನೇಕ ಚುನಾವಣೆಗಳಲ್ಲಿ ಮತದಾರ ಯಾವ ರೀತಿ ತೀರ್ಪು ಕೊಡುತ್ತಾರೆ ಎನ್ನುವದನ್ನು ಎಂಥಹ ರಾಜಕೀಯ ವಿಶ್ಲೇಷಕರಿಗೂ ತಜ್ಞರಿಗೂ ನೇತಾರರಿಗೂ ಸಿಗದ ಆಶಾಭಾವನೆಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಅಗಶಿಯ ಹತ್ತಿರ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾನೆ ಹಿಡಿಯಲು ಕಾರಣೀಕರ್ತರಾದ ಮತದಾರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ವಿಜಯೋತ್ಸವ ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕರ್ತರು ಪರಸ್ಪರ ಸಿಹಿ ಸವಿಯುವ ಮೂಲಕ ಜನತೆಗೆ ವಿತರಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ದೇಶದ ರಾಜಕಾರಣದಲ್ಲಿ ಸ್ವಚ್ಚಂದ ರಾಜಕೀಯ ವ್ಯಕ್ತಿಗಳಾಗಿ ಮನೆ ಮಠ ಎನ್ನದೇ ಭಾರತೀಯರ ಅಭಿವೃದ್ದಿಗಾಗಿ ಸದಾ ಶ್ರಮಿಸುತ್ತಿರುವ ವಿಶ್ವದ ಭೂಪಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯುತ್ತಿರುವ ಮಹಾನ ನಾಯಕ ನರೇಂದ್ರ ಮೋದಿಯವರ ನಾಯಕತ್ವ ಮುಂದಿನ ಲೋಕಸಭಾ ಚುಣಾವಣೆಯಲ್ಲಿಯೂ ಪ್ರಜ್ವಲಿಸುವ ಆಶಾಭಾವನೆಯನ್ನು ಈ ಚುನಾವಣೆ ತೀರ್ಪು ದಿಕ್ಸೂಚಿಯಾಗಿದೆ ಎಂದು ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ, ಚಂದ್ರಶೇಖರಯ್ಯ ಗಣಕುಮಾರ, ವಿನೀತಕುಮಾರ ದೇಸಾಯಿ, ನೀವೃತ್ತ ಸೈನಿಕ ಐ.ಜಿ.ಬಿರಾದಾರ, ಪಟ್ಟಣ ಪಂಚಾಯತಿ ಸದಸ್ಯರಾದ ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ಅಪ್ಪಶಿ ಮಟ್ಯಾಳ, ಸಂಗಪ್ಪ ಹುಚ್ಚಪ್ಪಗೋಳ, ವೀರಭದ್ರಪ್ಪ ಬಾಗಿ, ಬಸಯ್ಯ ಮಠಪತಿ, ಗುರಲಿಂಗಪ್ಪ ಮಟ್ಯಾಳ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಅಶೋಕ ಗಿಡ್ಡಪ್ಪಗೋಳ, ಡೋಂಗ್ರಿ ಕಟಬರ, ಅನೀಲ ಬಾಟಿ, ಬಸಪ್ಪ ಏಳಗಂಟಿ ಅನೇಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

