ಕೊಲ್ಹಾರ: ಕೂಡಗಿ ಭಾಗದಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಎನ್‌ಟಿಪಿಸಿಗೆ ಜಮೀನು ಕಳೆದುಕೊಂಡಿದ್ದ ಈ ಭಾಗದ ಸಂತ್ರಸ್ತ ರೈತರು ಮತ್ತೊಮ್ಮೆ ಧರಣಿಯತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ. ತಾಲೂಕಿನ ತೆಲಗಿಯ ಸದ್ಗುರು ಸದಾನಂದ ಆಶ್ರಮದಲ್ಲಿ ಶನಿವಾರ ಸಭೆ ನಡೆಸಿದ ಸಂತ್ರಸ್ತ ರೈತರು ಈ ಕುರಿತು ಚಿಂತನ-ಮಂಥನ ನಡೆಸಿದರು.
ಈಗಾಗಲೇ ನ.೬ ರಂದು ಎನ್‌ಟಿಪಿಸಿ ಎಚ್‌ಆರ್ ಸಭಾಂಗಣದಲ್ಲಿ ನಡೆದ ಗ್ರಾಮಾಭಿವೃದ್ಧಿ ಸಲಹಾ ಸಮಿತಿ (ವಿಡಿಎಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಗಮನಕ್ಕೆ ರೈತರ ಅಹವಾಲನ್ನು ಸಲ್ಲಿಸಲಾಗಿತ್ತು. ಸಭೆ ಮುಗಿದು ಮತ್ತೆ ತಿಂಗಳಾಗುತ್ತ ಬಂದರೂ ಇದುವರೆಗೂ ಏನೊಂದೂ ಪ್ರತಿಕ್ರಿಯೆ ಜಿಲ್ಲಾಧಿಕಾರಿಗಳಿಂದಾಗಲಿ, ಎನ್‌ಟಿಪಿಸಿ ಅಧಿಕಾರಿಗಳಿಂದಾಗಲಿ ಬಂದಿಲ್ಲ. ಹೀಗಾಗಿ ಡಿ.೪ ರಂದು ಮತ್ತೊಂದು ಬಾರಿ ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ಸಂತ್ರಸ್ತ ರೈತರ ಬೇಡಿಕೆಗಳ ಕುರಿತು ಮನವರಿಕೆ ಮಾಡಲಾಗುವುದು. ಅದಾಗ್ಯೂ ಯಾವುದೇ ಸ್ಪಂದನೆ ದೊರಕದಿದ್ದರೆ ಎನ್‌ಟಿಪಿಸಿ ಮುಖ್ಯ ಪ್ರವೇಶ ದ್ವಾರದ ಎದುರು ಶಾಂತಿಯುತ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾದೀತೆಂದು ಸಂತ್ರಸ್ತ ರೈತ ಮುಖಂಡರಾದ ಮಲ್ಲಿಕಾರ್ಜುನ ವೀರಣ್ಣವರ, ದಯಾನಂದ ಹೆಬ್ಬಾಳ ಸಭೆಗೆ ತಿಳಿಸಿದರು.
ಗೊಳಸಂಗಿ ಗ್ರಾಪಂ ಅಧ್ಯಕ್ಷ ಕೇಶವ ಪವಾರ, ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ, ಪ್ರಮುಖರಾದ ರಾಘವೇಂದ್ರ ಕುಲಕರ್ಣಿ, ಸುರೇಶ ದಳವಾಯಿ, ಮಹಾಂತೇಶ ಕಮತಗಿ, ಎಸ್.ಜಿ. ವಸ್ತ್ರದ, ಮಲ್ಲೇಶ ಹಂಡಗಿ, ಮಸ್ತಾನಸಾಬ ಜಾಗೀರದಾರ, ಹನುಮಂತ ಯಳಮೇಲಿ, ವಿವೇಕ ಪಾಟೀಲ, ದಸ್ತಗೀರಸಾಬ ಗಡೇದ, ರಾಯಪ್ಪ ಯಾಳಗಿ, ಹೊನ್ನಪ್ಪ ಅಂಗಡಿ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

